/newsfirstlive-kannada/media/post_attachments/wp-content/uploads/2024/07/Bangalore-lady-Death-3.jpg)
ಬೆಂಗಳೂರು: ಯಲಹಂಕದ RMZ ಗ್ಯಾಲರಿಯಾ ರೆಸಿಡೆನ್ಸಿಸ್ ಅಪಾರ್ಟ್‌ಮೆಂಟ್‌ನಲ್ಲಿ ದಾರುಣ ಘಟನೆ ನಡೆದಿದೆ. ಮಗ ಹಾಗೂ ತಾಯಿ ಸತ್ತ 4 ದಿನದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಮಗನನ್ನು ನೇಣು ಬಿಗಿದು ಸಾಯಿಸಿದ ತಾಯಿ ಬಳಿಕ ಬೆಡ್ ಮೇಲೆ ಮಲಗಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಅಪರ್ಣಾ ಪ್ರಾಣ ತೆಗೆದ ಲಂಗ್ ಕ್ಯಾನ್ಸರ್ ಎಷ್ಟು ಭಯಾನಕ; ಈ ಚಿಕಿತ್ಸೆ ಬಗ್ಗೆ ವೈದ್ಯರು ಕೊಟ್ಟ ಸಲಹೆ ಏನು?
ಯಲಹಂಕ ಠಾಣಾ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಭೇಟಿ ಕೊಟ್ಟು ಮೃತದೇಹವನ್ನ ಪೋಸ್ಟ್ ಮಾರ್ಟಂಗೆ ಕಳುಹಿಸಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ. ಸಜಿತ್ ಅವರು ಈ ದುರಂತದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.
RMZ ಗ್ಯಾಲರಿಯಾ ರೆಸಿಡೆನ್ಸಿಸ್ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ, ಮಗನ ಮೃತದೇಹ ಪತ್ತೆಯಾಗಿದೆ. ರಮ್ಯಾ ಮೂಲತಃ ಕೋಲಾರದವರು. ಆಂಧ್ರ ಮೂಲದ ಶ್ರೀಧರ್ ಪುಲಿವರ್ತಿ ಅವರನ್ನು ಮದುವೆ ಆಗಿದ್ದರು. ಶ್ರೀಧರ್ ಆಂಧ್ರ ಮೂಲದವರಾಗಿದ್ದಾರೆ. ರಮ್ಯಾ ಅವರ ಗಂಡ 3 ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಗಂಡನ ಸಾವಿನ ಖಿನ್ನತೆಯಿಂದ ಹೊರ ಬರಲಾರದೆ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. FSL ವರದಿ, ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕ ಸಾವಿನ ಅಸಲಿ ಕಾರಣ ಗೊತ್ತಾಗಲಿದೆ ಎಂದು ಡಿಸಿಪಿ ವಿ.ಜೆ. ಸಜಿತ್ ಅವರು ತಿಳಿಸಿದ್ದಾರೆ.
ತಾಯಿ, ಮಗನ ಸಾವು ಆಗಿದ್ದು ಹೇಗೆ?
40 ವರ್ಷದ ರಮ್ಯಾ ಅವರು 13 ವರ್ಷದ ಭಾರ್ಗವ್ ಪುಲಿವರ್ತ ಎಂಬ ಮಗನನ್ನು ಮೊದಲಿಗೆ ಕೊಲೆ ಮಾಡಿದ್ದಾರೆ. ಮಗನ ಸಾವಿನ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಶಂಕಿಸಲಾಗಿದೆ.
ರಮ್ಯಾ ಅವರ ಗಂಡ ಶ್ರೀಧರ್ ಪುಲಿವರ್ತ ಅವರು ಕಳೆದ ಮೂರು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಇದರಿಂದ ಮಾನಸಿಕ ಖಿನ್ನತೆಯಲ್ಲಿದ್ದ ತಾಯಿ ಮಗನನ್ನು ಕೊಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸಿಗರೇಟ್, ಮೇಕಪ್.. ಅಪರ್ಣಾ ಬಲಿ ಪಡೆದ ಲಂಗ್ ಕ್ಯಾನ್ಸರ್ ಸ್ತ್ರೀಯರಿಗೆ ಮಾರಕ; ಶಾಕಿಂಗ್ ಮಾಹಿತಿ ಕೊಟ್ಟ ವೈದ್ಯರು
ಸತ್ತ 4 ದಿನದ ಬಳಿಕ ಬಯಲು!
ರಮ್ಯಾ ಅವರ 19 ವರ್ಷದ ಮಗಳು ಪಿಜಿಯಲ್ಲಿದ್ದಾಳೆ. ಕಳೆದ ಜುಲೈ 9ನೇ ತಾರೀಖು ರಾತ್ರಿ ಮಗಳ ಜೊತೆ ರಮ್ಯಾ ಮಾತನಾಡಿದ್ದರು. ಅದಾದ ಮೇಲೆ ರಮ್ಯಾ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಮನೆಯಲ್ಲಿ ರಮ್ಯಾ ಅವರು ಮೊದಲು ಮಗನನ್ನು ನೇಣು ಹಾಕಿದ್ದಾರೆ. ಮಗನನ್ನು ನೇಣಿನ ಕುಣಿಕೆಯಿಂದ ಬಿಡಿಸಿ ಬೆಡ್ ಮೇಲೆ ಮಲಗಿಸಿದ್ದಾರೆ. ಆನಂತರ ತಾಯಿ ಕೂಡ ನೇಣಿಗೆ ಶರಣಾಗಿದ್ದಾರೆ. ತಾಯಿ, ಮಗ ಇಬ್ಬರು ಸತ್ತ ನಾಲ್ಕು ದಿನದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?
ತಾಯಿ, ಮಗ ಸಾವಿಗೆ ಕಾರಣವೇನು?
ರಮ್ಯಾ ಅವರು ಶ್ರೀಧರ್ ಎಂಬುವವರನ್ನು ಲವ್ ಮಾಡಿ ಅಂತರ್ಜಾತಿ ವಿವಾಹವಾಗಿದ್ದರು. ಗಂಡನ ಸಾವಿನ ನಂತರ ಇಡೀ ಕುಟುಂಬ ಆರ್ಥಿಕವಾಗಿ ಕುಗ್ಗಿ ಹೋಗಿತ್ತು. ಅಲ್ಲದೇ ಗಂಡ ಸತ್ತ ನಂತರ ತಾವು ಸಾಯುವುದಾಗಿ ರಮ್ಯಾ ಹೇಳಿಕೊಂಡಿದ್ದರಂತೆ.
ರಮ್ಯಾ ಅವರ ಕುಟುಂಬಕ್ಕೆ ಫ್ಲ್ಯಾಟ್ ಬಾಡಿಗೆ 45 ಸಾವಿರ, ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚು ಅಂತ ತಿಂಗಳಿಗೆ ಲಕ್ಷ, ಲಕ್ಷ ಹಣ ಬೇಕಿತ್ತು. ಹಣ ಹೊಂದಿಸೋದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಖಿನ್ನತೆಗೊಳಗಾಗಿದ್ದ ರಮ್ಯಾ ಅವರು ಪೊಲೀಸರು, ಡಾಕ್ಟರ್‌ಗೆ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ