/newsfirstlive-kannada/media/post_attachments/wp-content/uploads/2024/06/darshan1.jpg)
ಬೆಂಗಳೂರು: ದರ್ಶನ್ ಗ್ಯಾಂಗ್‌ನಿಂದ ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿರುವ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹತ್ಯೆಗೆ ಮೊದಲು ರೇಣುಕಾಸ್ವಾಮಿ ಕ್ಷಮೆ ಕೋರಿದ್ದ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿತ್ತು. ಕೊಲೆ ಆರೋಪಿಗಳು ರೇಣುಕಾಸ್ವಾಮಿ ಅವರ ಬಳಿ ಕ್ಷಮೆ ಕೇಳುವಂತೆ ಟಾರ್ಚರ್ ಮಾಡಿದ್ದರು. ಬಳಿಕ ಕ್ಷಮೆ ಕೇಳಿಸಿ ವಿಡಿಯೋ ಮಾಡಿದ್ದರೆ ಎನ್ನಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ವಿಡಿಯೋ ಬಗ್ಗೆ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.
ಇದನ್ನೂ ಓದಿ: 34 ಗಾಯ, 5 ಗಂಟೆ ಡಿ ಗ್ಯಾಂಗ್ ಟಾರ್ಚರ್.. ಪಟ್ಟಣಗೆರೆ ಶೆಡ್ ನರಕದ 10 ಭಯಾನಕ ಸತ್ಯಗಳು ಬಹಿರಂಗ
ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆ ತಂದ ಆರೋಪಿಗಳು ಹಿಗ್ಗಾಮುಗ್ಗ ಥಳಿಸಿದ್ದರು. ನಿರಂತರ 5 ಗಂಟೆ ಟಾರ್ಚರ್ ಮಾಡಿದ ಮೇಲೆ ಕ್ಷಮೆ ಕೋರುವ ವಿಡಿಯೋ ಮಾಡುವ ಪ್ಲಾನ್ ಇತ್ತು. ಆದರೆ ಕ್ಷಮೆ ಕೋರುವ ವಿಡಿಯೋ ಮಾಡೋ ಮೊದಲೇ ರೇಣುಕಾಸ್ವಾಮಿಗೆ ಥಳಿಸಿದ್ದು ಆರೋಪಿಗಳ ಪ್ಲಾನ್ ಉಲ್ಟಾ ಹೊಡೆದಿದೆ.
ಹಿಗ್ಗಾಮುಗ್ಗಾ ಥಳಿಸಿದ್ದ ಆರೋಪಿಗಳು ನಂತರ ರೇಣುಕಾಸ್ವಾಮಿ ಬಳಿ ಕ್ಷಮೆ ಕೇಳುವ ವಿಡಿಯೋ ಮಾಡೋ ಪ್ಲಾನ್ ಇತ್ತು. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಕ್ಷಮೆ ಕೋರಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಕಿತ್ತು. ಆದ್ರೆ ಆರೋಪಿಗಳು ಮನಸೋ ಇಚ್ಛೆ ಥಳಿಸಿದ್ದರಿಂದ ರೇಣುಕಾಸ್ವಾಮಿ ನಿತ್ರಾಣವಾಗಿ ಬಿದ್ದಿದ್ದ.
ಹೀಗಾಗಿ ಇಬ್ಬರು ರೇಣುಕಾಸ್ವಾಮಿಯನ್ನು ಹಿಡಿದುಕೊಂಡು ಕೂರಿಸಿದ್ದರು. ನಂತರ ಮತ್ತೊಬ್ಬ ಎದುರುಗಡೆಯಲ್ಲಿ ಮೊಬೈಲ್ ಹಿಡಿದು ನಿಂತು ವಿಡಿಯೋ ಮಾಡ್ತಿದ್ದ. ಮುಂದೆ ಈ ರೀತಿ ಮಾಡುವುದಿಲ್ಲ ಅಂತ ಹೇಳುವಂತೆ ಒತ್ತಾಯ ಮಾಡಿದ್ದರು. ಅಶ್ಲೀಲ ಮೆಸೇಜ್, ಫೋಟೋ ಕಳಿಸಲ್ಲ ಅಂತ ಹೇಳಿಸಲು ಯತ್ನ ನಡೆಸಿದ್ದರು. ಆದ್ರೆ ಸಂಪೂರ್ಣ ನಿತ್ರಾಣವಾಗಿದ್ದ ರೇಣುಕಾಸ್ವಾಮಿಗೆ ಮಾತನಾಡಲು ಆಗಿರಲಿಲ್ಲ.
ಇದನ್ನೂ ಓದಿ: ತುಂಬಾ ಸಣ್ಣ ಆಗೋಗಿದ್ದೀನಿ, ಮನೆಯೂಟ ಕೊಡಿ ಪ್ಲೀಸ್.. ಕೋರ್ಟ್ಗೆ ದರ್ಶನ್ ಕೊಟ್ಟ ಕಾರಣಗಳೇನು?
ರೇಣುಕಾಸ್ವಾಮಿ ಅಸ್ವಸ್ಥನಾಗಿದ್ದರಿಂದ ಆರೋಪಿಗಳು ನಾಳೆ ಕ್ಷಮೆ ಹೇಳಿಸೋಣ ಅಂತ ಹೇಳಿ ಸೆಕ್ಯೂರಿಟಿ ರೂಮ್ಗೆ ಹಾಕಿದ್ದರು. ಸೆಕ್ಯೂರಿಟಿ ರೂಮ್ಗೆ ಹಾಕಿದ ಕೆಲವೇ ಕ್ಷಣಗಳಲ್ಲಿ ರೇಣುಕಾಸ್ವಾಮಿ ಮೃತಪಟ್ಟಿದ್ದ. ಹೀಗಾಗಿ ರೇಣುಕಾಸ್ವಾಮಿಯ ಕ್ಷಮಾಪಣಾ ವಿಡಿಯೋ ಮಾಡಲು ಆಗಿರಲಿಲ್ಲ ಅನ್ನೋ ಭಯಾನಕ ಸತ್ಯ ಪೊಲೀಸರ ತನಿಖೆಯಿಂದ ಬಯಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ