/newsfirstlive-kannada/media/post_attachments/wp-content/uploads/2024/12/Techhie-Atul-Shubash-Case.jpg)
ಬೆಂಗಳೂರಲ್ಲಿ ದುರಂತ ಅಂತ್ಯ ಕಂಡ ಟೆಕ್ಕಿ ಅತುಲ್ ಸುಭಾಷ್ ಕೇಸ್ ದೇಶಾದ್ಯಂತ ಸದ್ದು ಮಾಡಿದ್ದು, ಈಗ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಅತುಲ್ ಬರೆದಿದ್ದ ಡೆತ್ನೋಟ್ ಸಾವಿಗೂ ಮುನ್ನ ಆತ ಅನುಭವಿಸಿದ್ದ ಸಂಕಷ್ಟವನ್ನು ತೆರೆದಿಟ್ಟಿದೆ. ಪತ್ನಿ ಕೊಟ್ಟಿದ್ದ ಟಾರ್ಚರ್, ಹಣಕ್ಕಾಗಿ ಮಾಡಿದ್ದ ಡಿಮ್ಯಾಂಡ್, ಮಗನಿಗಾಗಿ ಇಟ್ಟಿದ್ದ ಗಿಫ್ಟ್. ಹೀಗೆ ಹಲವು ಸ್ಫೋಟಕ ವಿಚಾರಗಳು ತೆರೆದುಕೊಂಡಿದೆ. ಆರೋಪಿಗಳ ವಿರುದ್ಧವೇ ಈಗ ಕೇಸ್ ದಾಖಲಾಗಿದ್ರೆ, ಜಸ್ಟಿಸ್ ಫಾರ್ ಅತುಲ್ ಅನ್ನೋ ಅಭಿಯಾನ ಜೋರಾಗಿದೆ.
JUSTICE IS DUE.. ಇದು ಟೆಕ್ಕಿ ಅತುಲ್ ಸುಭಾಷ್ ಕೊನೇ ಬಾರಿಗೆ ಹೇಳಿದ ಮಾತು. ನ್ಯಾಯಕ್ಕಾಗಿ ನಿತ್ಯ ನರಳಾಡಿದ್ದ ಅತುಲ್ ಕೊನೆಗೆ ಜೀವನಕ್ಕೆ ದಿ ಎಂಡ್ ಹೇಳಿದ್ದ. ಸಾವಿಗೂ ಮುನ್ನ ಅತುಲ್ ಮಾಡ್ಕೊಂಡಿದ್ದ ತಯಾರಿ ಕೇಳಿಯೇ ಇಡೀ ದೇಶ ಬೆಚ್ಚಿ ಬಿದ್ದಿದೆ. ಸದ್ಯ ಅತುಲ್ ಕೇಸ್ ಹೊಸ ಮಜಲು ಪಡೆದುಕೊಂಡಿದೆ. ಅತ್ತ, ಅತುಲ್ಗೆ ನರಕ ತೋರಿಸಿದ್ದ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಅಪ್ಪನಿಂದ ಡ್ರಾಪ್ ಪಡೆದ ಮಗಳು ಬಾರದೂರಿಗೆ ಪಯಣ.. ಡಾ. ಸಂಧ್ಯಾ ದುರಂತ ಎಂತವರಿಗೂ ಕರುಳು ಚುರ್ ಅನ್ನುತ್ತೆ!
ಕೇಸ್ ಮೇಲೆ ಕೇಸ್ ಹಾಕಿ ಪತ್ನಿ ಕೊಟ್ಟಿದ್ಲಂತೆ ಟಾರ್ಚರ್
ಮಗು ನೋಡಲೂ ಕೋಟಿ, ಕೋಟಿ ಮಾಡಿದ್ಲಂತೆ ಡಿಮ್ಯಾಂಡ್
ಟೆಕ್ಕಿ ಅತುಲ್ ಸುಭಾಷ್ ಸಾವಿಗೂ ಬರೆದಿದ್ದ 24 ಪುಟಗಳ ಡೆತ್ನೋಟ್ನಲ್ಲಿ ಕಾರಣ ಏನು. ಹಾಗೇ ಪತ್ನಿ ಕೊಟ್ಟಿದ್ದ ಟಾರ್ಚರ್ದಿಂದ ಆತ ಅನುಭವಿಸಿದ್ದ ಸಂಕಷ್ಟವನ್ನ ಅತ್ಯಂತ ವಿವರವಾಗಿ ವಿವರಿಸಿದ್ದಾನೆ.
ಅತುಲ್ ಸಾವಿಗೂ ಮುನ್ನ
ಪತ್ನಿ ನಿಕಿತಾ, ವರದಕ್ಷಣೆ ಕಿರುಕುಳ ಸೇರಿದಂತೆ ಅತುಲ್ ವಿರುದ್ಧ ಬರೋಬ್ಬರಿ 9 ಪ್ರಕರಣಗಳನ್ನ ದಾಖಲಿಸಿದ್ದಳಂತೆ. ಆರು ಉತ್ತರ ಪ್ರದೇಶದ ನ್ಯಾಯಾಲಯದಲ್ಲಿದ್ರೆ, ಇನ್ನೂ ಮೂರು ಹೈಕೋರ್ಟ್ನಲ್ಲಿತ್ತು. ಅದ್ರ ವಿಚಾರಣೆಗೆ ಹಾಜರಾಗಲು ಅತುಲ್ ಬೆಂಗಳೂರಿನಿಂದ ಜೌನ್ಪುರಕ್ಕೆ 40 ಬಾರಿ ಹೋಗಿದ್ರಂತೆ. ಅಷ್ಟಲ್ಲದೇ, ಮೊದಲು 1 ಕೋಟಿಗೆ ಕೇಳಿದ್ದ ನಿಕಿತಾ ಬಳಿಕ ಮೂರು ಕೋಟಿ ಕೊಟ್ಟರೆ ಕೇಸ್ಗಳಿಂದ ಮುಕ್ತಗೊಳಿಸ್ತೀನಿ ಅಂತಾ ಡಿಮ್ಯಾಂಡ್ ಮಾಡಿದ್ಲಂತೆ. ಮಗು ನೋಡಲು ಕೂಡ ನಿಖಿತಾ ಹಣಕ್ಕೆ ಡಿಮ್ಯಾಂಡ್ ಮಾಡ್ತಾಯಿದ್ಲು ಅಂತಾ ಅತುಲ್ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ ಆತ ಆಕೆ ಮನೆಯವರಿಂದಾನೂ ತುಂಬಾ ಕಷ್ಟ ಪಟ್ಟಿದ್ದಾಗಿ ಉಲ್ಲೇಖ ಮಾಡಿದ್ದಾನೆ.
ಸಾವಿಗೂ ಮುನ್ನ ಟ್ರಂಪ್, ಮಸ್ಕ್ ಟ್ಯಾಗ್ ಮಾಡಿ ಟೆಕ್ಕಿ ಪೋಸ್ಟ್
ಅತುಲ್ ಸುಭಾಷ್ ಮಾಡಿದ್ದ ಲಾಸ್ಟ್ ಪೋಸ್ಟ್ ಆಯ್ತು ವೈರಲ್..!
ಮತ್ತೊಂದು ಪ್ರಮುಖ ವಿಚಾರ ಏನಂದ್ರೆ, ಸಾವಿಗೂ ಮುನ್ನ ಅತುಲ್ ಸುಭಾಷ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ನ ಟ್ಯಾಗ್ ಮಾಡಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.. ನೀವೂ ಪೋಸ್ಟ್ ಓದುವಷ್ಟ್ರಲ್ಲಿ ನಾನು ಬದುಕಿರಲ್ಲ.. ಭಾರತದಲ್ಲಿ ನರಮೇಧ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಮತ್ತೊಂದ್ಕಡೆ, ಮಗನ ಸಾವು ಹೆತ್ತ ಕರುಳನ್ನ ಹಿಂಡಿ ಹಿಪ್ಪೆ ಮಾಡಿದೆ. ಡೆತ್ನೋಟ್ನಲ್ಲಿ ಅತುಲ್ ಮಾಡಿರುವ ಆರೋಪಗಳೆಲ್ಲಾ ಸತ್ಯ ಅಂತಾ ಅತುಲ್ ಸಹೋದರ ಹಾಗೂ ತಂದೆ ಭಾವುಕರಾಗಿದ್ದಾರೆ.
ನ್ಯಾಯ ಸಿಗಲ್ಲ ಅಂತಿದ್ದ..!
ನನ್ನ ಮಗ ಯಾವಾಗ್ಲೂ ಹೇಳ್ತಿದ್ದ.. ನಾನು ಹೋಗ್ತೀನಿ ಅಪ್ಪ. ನಮ್ಮಂತವರಿಗೆ ನ್ಯಾಯ ಸಿಗಲ್ಲ ಅಂತಿದ್ದ.. ಕಾನೂನಿನ ಈ ವ್ಯವಸ್ಥೆಯಲ್ಲಿ ಏನೂ ಆಗಲ್ಲ. ನನ್ನ ಮಗ ಕಾನೂನಿಗೆ ಗೌರವ ಕೊಡ್ತಿದ್ದ. ಆದ್ರೆ ಕಾನೂನನಲ್ಲಿ ಅವನಿಗೆ ನ್ಯಾಯ ಸಿಗಲಿಲ್ಲ.
- ಪವನ್ ಕುಮಾರ್, ಮೃತ ಅತುಲ್ ತಂದೆ
ನಮಗೆ ನ್ಯಾಯ ಸಿಗ್ಬೇಕು. ನನ್ನ ತಮ್ಮನಿಗೆ ನ್ಯಾಯ ಸಿಗ್ಬೇಕು. ಪುರುಷರಿಗಾಗಿಗೂ ಕಾನೂನು ಬರ್ಬೇಕು. ನನ್ನ ತಮ್ಮನ ಜೊತೆಯಾದಂತೆ ತುಂಬಾ ಜನರ ಜೊತೆ ನಡೆದಿದೆ.ಇದನ್ನ ಸರ್ಕಾರ ಗಮನಿಸಬೇಕು. ಒಬ್ಬ ಮಹಿಳೆ ಜೀವನ ಎಷ್ಟು ಮುಖ್ಯವೂ ಪುರುಷನ ಜೀವನವೂ ಅಷ್ಟೇ ಮುಖ್ಯ. ಈ ತರಹದ ಘಟನೆ ನೋಡಿದ್ಮೆಲೆ ಜನರಿಗೆ ಮದುವೆಯಾಗ್ಬೇಕಾ ಬೇಡ್ವಾ ಅನ್ನೋ ಭಯ ಹುಟ್ಟುತ್ತೆ ಎಂದು ಅತುಲ್ ಸಹೋದರ ಬಿಕಾಸ್ ಕುಮಾರ್ ಹೇಳಿದ್ದಾರೆ.
ಸದ್ಯ ಘಟನೆ ಸಂಬಂಧ ಅತುಲ್ ಸಹೋದರ ಬಿಕಾಸ್ ಕೊಟ್ಟ ದೂರಿನನ್ವಯ ಮಾರತ್ತಹಳ್ಳಿ ಪೊಲೀಸರು, ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅತುಲ್ ಸಾವಿನ ನ್ಯಾಯಕ್ಕಾಗಿ ಕೂಗು ಹೆಚ್ಚಾಗಿದೆ. ಸೇವ್ ಇಂಡಿಯನ್ ಮೆನ್ ಅಂತಾ ಹಲವರು ಅತುಲ್ ಸಾವಿಗೆ ನ್ಯಾಯ ಕೇಳ್ತಿದ್ದಾರೆ. ಅಲ್ಲದೇ, ಆತ ಟ್ಯಾಲೆಂಟೆಡ್ ಇದ್ದ. ಹೆದರುವವನಲ್ಲ ಕೆಲವೊಂದು ವಿಚಾರಗಳಿಂದ ನೊಂದು ಈ ರೀತಿ ಮಾಡ್ಕೊಂಡಿರಬಹುದು ಎಂದು ಅತುಲ್ ಸ್ನೇಹಿತರು ಹೋರಾಟದ ಹಾದಿ ಹಿಡಿದಿದ್ದಾರೆ.
ಇಷ್ಟೆಲ್ಲಾ ಆರೋಪಗಳು ಕೇಳಿ ಬರ್ತಾಯಿದ್ರು, ನಿಕಿತಾ ತಾಯಿ ಹಾಗೂ ಸಹೋದರ ಪ್ರಶ್ನೆ ಮಾಡಲು ಹೋದವರ ಜೊತೆ ದುರಹಂಕಾರದಿಂದ ವರ್ತಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವ್ರ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು, ಮೊದಲು ಈ ದುಷ್ಟರನ್ನ ಜೈಲಿಗೆ ಹಾಕಿ ಅಂತಾ ಗುಡುಗಿದ್ದಾರೆ.
ಪತ್ನಿ ಕಿರುಕುಳ ತಾಳಲಾರದೇ ನರಳಿ ನರಳಿ ಸಾವನ್ನಪ್ಪಿದ್ದ ಅತುಲ್ ಸಾವಿಗೆ ನ್ಯಾಯ ಸಿಗಬೇಕಿದೆ.. ಡೆತ್ನೋಟ್ನಲ್ಲಿ ಅತುಲ್ ಆರೋಪಗಳ ತನಿಖೆ ನಡೆದು, ಆತನೇ ಹೇಳಿರುವಂತೆ ಡ್ಯೂ ಆಗಿರೋ ನ್ಯಾಯ ಸಿಗಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ