/newsfirstlive-kannada/media/post_attachments/wp-content/uploads/2024/12/Bangalore-Man-Tragedy-2.jpg)
ಬೆಂಗಳೂರಿನ ಮಾರತಹಳ್ಳಿಯಲ್ಲಿ ಕೌಟುಂಬಿಕ ಕಲಹಕ್ಕೆ ನೊಂದು ಬೆಂದ ಗಂಡ ವಿಚಿತ್ರವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಜೀವ ಬಿಡಲು 2 ದಿನಗಳ ಕಾಲ ಸಿದ್ಧತೆ ಮಾಡಿಕೊಂಡಿದ್ದ ಈ ವ್ಯಕ್ತಿ ಕೊಟ್ಟಿರೋ ಕಾರಣಗಳು ಇದೀಗ ರಿವೀಲ್ ಆಗಿದೆ.
ಉತ್ತರ ಪ್ರದೇಶದ ಅತುಲ್ ಸುಭಾಶ್ ಎನ್ನುವ ಈ ವ್ಯಕ್ತಿ 2 ದಿನದ ಮುಂಚೆ ಟೈಮ್ ಟೇಬಲ್ ಹಾಕಿ ಸಾಯೋದಕ್ಕೆ ಪ್ಲಾನ್ ಮಾಡಿದ್ದ. ಡೇ-1, ಡೇ-2 ಏನೇನು ಮಾಡಬೇಕು ಎಂದು ಡೆತ್‌ನೋಟ್ ಬರೆದಿಟ್ಟು ಗೋಡೆಗೆ JUSTICE IS DUE ಅನ್ನೋ ಪತ್ರ ಅಂಟಿಸಿದ್ದಾನೆ.
ಡೆತ್‌ನೋಟ್‌ನಲ್ಲಿ ಏನಿದೆ?
ಅತುಲ್ ಸುಭಾಶ್ ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ ನಾನು 2019ರಲ್ಲಿ ಶಾದಿ ಡಾಟ್ ಕಾಮ್ ಮೂಲಕ ನಿಖಿತಾ ಎಂಬುವವರನ್ನ ಮದುವೆ ಆಗಿದ್ದೆ. 2021ರಲ್ಲಿ ನಿಖಿತಾ ಬೆಂಗಳೂರಿನ ಮನೆ ಬಿಟ್ಟು ಹೋಗಿದ್ದಾಳೆ. ನನ್ನ ಹೆಂಡತಿ 4.5 ವರ್ಷದ ಮಗನೊಂದಿಗೆ ಆಭರಣ, ದುಡ್ಡು ತೆಗೆದುಕೊಂಡು ಹೋಗಿದ್ದಾಳೆ.
ಉತ್ತರಪ್ರದೇಶದಲ್ಲಿ ಕೇಸ್ ಹಾಕಿದ್ದ ನನ್ನ ಹೆಂಡತಿ ಮೊದಲಿಗೆ 1 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದರು. ಅದಾದ ಮೇಲೆ 3 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾರೆ. ನನ್ನ ಮಗನನ್ನ ಅಸ್ತ್ರವಾಗಿ ಬಳಸಿ ನನ್ನಿಂದ ವಸೂಲಿ ಮಾಡಿದ್ದಾರೆ. ನನ್ನ ಹಾಗೂ ಕುಟುಂಬದ ವಿರುದ್ಧ 9ಕ್ಕೂ ಹೆಚ್ಚು ಸುಳ್ಳು ಕೇಸ್ ಹಾಕಲಾಗಿದೆ.
ಹಣದಾಸೆಗೆ ನನಗೆ ಹಿಂಸೆ ನೀಡಿದ್ದಾರೆ. ನಾನು ಆಗಲ್ಲ ಅಂದಿದ್ದಕ್ಕೆ ಕೇಸ್ ಹಾಕೋ ಮೂಲಕ ನನಗೆ ದೌರ್ಜನ್ಯ ಮಾಡಲಾಗಿದೆ. ನಾನು ಸಲ್ಲಿಸಿದ ಯಾವುದೇ ದಾಖಲೆಯನ್ನೂ ಮಾನ್ಯ ಮಾಡಿಲ್ಲ. ಮೂರು ವರ್ಷಗಳಿಂದ ಮಗನನ್ನ ನೋಡಲು ಅವಕಾಶ ನೀಡಿಲ್ಲ. ನೀನು ಸತ್ತ ಮೇಲೆ ನಿನ್ನ ಆಸ್ತಿಯೆಲ್ಲಾ ನಂಗೇ ಬರ್ಬೇಕು ಎಂದು ಪತ್ನಿ ಹೇಳಿದ್ದಾರೆ.
ಇದನ್ನೂ ಓದಿ: ‘ಗರ್ಲ್ ಫ್ರೆಂಡ್’ ಪರಿಚಯಿಸಿದ ವಿಜಯ್ ದೇವರಕೊಂಡ.. ರಶ್ಮಿಕಾ ಮಂದಣ್ಣ ಫುಲ್ ಟೆನ್ಷನ್!
ನನ್ನ ಪತ್ನಿಯಿಂದ ಪ್ರತಿ ತಿಂಗಳು 2 ಲಕ್ಷ ರೂಪಾಯಿ ನಿರ್ವಹಣಾ ವೆಚ್ಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಜೊತೆಗಿದ್ದಾಗಲೂ ಮನೆ ಕೆಲಸ ನಾನೇ ಮಾಡುತ್ತಿದ್ದೆ. ಮಗು ನೋಡಿಕೊಳ್ಳುತ್ತಿದ್ದೆ. ತನ್ನ ತಮ್ಮ, ಅಮ್ಮನಿಗಾಗಿ ಪದೇ ಪದೇ ನನ್ನಿಂದ ಲಕ್ಷ, ಲಕ್ಷ ಕಿತ್ತಿದ್ದಾಳೆ. ನನ್ನ ಹೆಂಡತಿ ಬಿ.ಟೆಕ್ ಪದವೀಧರೆ, ಎಂಬಿಎ ಫಿನಾನ್ಸ್, ಆಕ್ಸೆಂಚರ್‌ನಲ್ಲಿ ಕನ್ಸಲ್ಟೆಂಟ್. ನನ್ನ ಪತ್ನಿ ನಿಖಿತಾ ನನ್ನ ಮೃತದೇಹದ ಹತ್ತಿರಕ್ಕೂ ಕೂಡ ಬರಬಾರದು. ಸಾವಿನ ಬಗ್ಗೆ ನನಗೆ ಭಯವಿಲ್ಲ ಎಂದು ಬರೆದಿಟ್ಟ ಅತುಲ್ ನೊಂದು, ಬೆಂದು ಜೀವ ಬಿಟ್ಟಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ