/newsfirstlive-kannada/media/post_attachments/wp-content/uploads/2023/09/Virus.jpg)
ಇಡೀ ಮನುಕುಲಕ್ಕೆ ಶಾಪವಾದ ಕೋವಿಡ್ ಭೀತಿ ಮತ್ತೆ ಜಗತ್ತಿನ ಹಲವೆಡೆ ಆವರಿಸಿಕೊಳ್ಳುವ ಆತಂಕ ಎದುರಾಗಿದೆ. ಸಿಂಗಾಪುರದಲ್ಲಿ ಹೊಸ ಕೋವಿಡ್ ಅಲೆ ಆವರಿಸಿದ್ದು, ರೂಪಾಂತರಿ ವೈರಸ್ ಇದೇ ಜೂನ್ ತಿಂಗಳಲ್ಲಿ ಉತ್ತುಂಗವನ್ನು ತಲುಪುವ ಮುನ್ಸೂಚನೆಗಳು ಸಿಕ್ಕಿದೆ.
ಸಿಂಗಾಪುರದಲ್ಲಿ ಸದ್ಯ ಕೋವಿಡ್ ಕೇಸ್‌ಗಳ ಸಂಖ್ಯೆ ಬಹಳ ವೇಗದಲ್ಲಿ ಏರಿಕೆಯಾಗುತ್ತಿದೆ. ಕೋವಿಡ್ ಪರೀಕ್ಷೆ ಮಾಡಿದ ಮೂವರು ಸೋಂಕಿತರಲ್ಲಿ ಇಬ್ಬರಲ್ಲಿ ಕೋವಿಡ್ ಪತ್ತೆಯಾಗುತ್ತಿದೆ. ಹೀಗೆ ಮುಂದುವರಿದರೆ ಜೂನ್ ತಿಂಗಳ ಮಧ್ಯದಲ್ಲಿ ಸೋಂಕಿತರ ಸಂಖ್ಯೆ ಸ್ಫೋಟವಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ:RAIN Alert: ಇಂದಿನಿಂದ ರಾಜ್ಯದಲ್ಲಿ ಧಾರಾಕಾರ ಮಳೆ.. ಬೆಂಗಳೂರಿಗರಿಗೆ IMD ಮಹತ್ವದ ಅಲರ್ಟ್; ಏನದು?
ಮಾಸ್ಕ್ ಕಡ್ಡಾಯಗೊಳಿಸಲು ಚಿಂತನೆ!
ಸಿಂಗಾಪುರ ಆರೋಗ್ಯ ಸಚಿವ ಓಂಗ್ ಯೇ ಕುಂಗ್ ಅವರು ನಾವೀಗ ಕೋವಿಡ್ ಹೊಸ ಅಲೆಯ ಆರಂಭಿಕ ಹಂತದಲ್ಲಿದ್ದೇವೆ. ಹಾಗಂತ ಮೈಮರೆಯುವ ಸಮಯ ಇದಲ್ಲ. ಮುಂದಿನ 2-4 ವಾರಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಉತ್ತುಂಗವನ್ನು ತಲುಪಲಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದು ಹೇಳಿದ್ದಾರೆ.
ಸಿಂಗಾಪುರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಮೇ 5 ರಿಂದ ಮೇ 11ರವರೆಗೆ ಕೋವಿಡ್-19 ಸೋಂಕಿತರ ಸಂಖ್ಯೆ 25,900 ಇತ್ತು. ಆಸ್ಪತ್ರೆಗೆ ದಾಖಲಾಗುವವರ ಸಂಖೆಯ 181 ರಿಂದ 250ಕ್ಕೆ ಏರಿಕೆಯಾಗಿದೆ. ಆದ್ರೆ ICUಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ ಎಂದು ಮಾಹಿತಿ ನೀಡಲಾಗಿದೆ.
ಆರೋಗ್ಯ ಇಲಾಖೆಯ ಈ ಮಾಹಿತಿಯಿಂದ ಸಿಂಗಾಪುರದಲ್ಲಿ ಕೋವಿಡ್-19 ಹೊಸ ಅಲೆ ಆತಂಕವನ್ನು ಸೃಷ್ಟಿಸಿದೆ. ಈ ಭಯದ ಹಿನ್ನೆಲೆಯಲ್ಲಿ ಸದ್ಯ ಮಾಸ್ಕ್ ಧರಿಸಿ ಸಂಚಾರ ಮಾಡುವಂತೆ ಸೂಚನೆ ನೀಡಲಾಗಿದೆ. ಹೀಗೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಮಾಸ್ಕ್ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ