ನವವಿವಾಹಿತನ ದುರಂತ ಅಂತ್ಯ.. ಕೃಷ್ಣಾ ನದಿ ಹಿನ್ನೀರಿನಲ್ಲಿ ದಾರುಣ ಸಾವು; ಆಗಿದ್ದೇನು?

author-image
admin
Updated On
ನವವಿವಾಹಿತನ ದುರಂತ ಅಂತ್ಯ.. ಕೃಷ್ಣಾ ನದಿ ಹಿನ್ನೀರಿನಲ್ಲಿ ದಾರುಣ ಸಾವು; ಆಗಿದ್ದೇನು?
Advertisment
  • ಮದುವೆಯಾಗಿ ಮೂರು ತಿಂಗಳಾದ ಯುವಕನ ದುರಂತ
  • ಮನೆ ಮಗನ ಮೃತದೇಹ ನೋಡಿ ಕುಟುಂಬಸ್ಥರ ಆಕ್ರಂದನ
  • ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶೋಕ ಸಾಗರ

ಚಿಕ್ಕೋಡಿ: ಮದುವೆಯಾಗಿ ಮೂರು ತಿಂಗಳಾಗಿತ್ತು ಅಷ್ಟೇ. ಕೃಷ್ಣಾ ನದಿಯ ಹಿನ್ನೀರಿಗೆ ಬಾಗಿನ ಅರ್ಪಿಸಲು ಹೋಗಿ ನವವಿವಾಹಿತ ಸಾವನ್ನಪ್ಪಿರೋ ದಾರುಣ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಏರಿಕೆಯಾಗಿದೆ. ಒಳ ಹರಿವು ಹೆಚ್ಚಾಗಿ ಹಿನ್ನಿರಿನ ಒತ್ತಡವೂ ಹೆಚ್ಚಿದೆ. ಈ ಪ್ರವಾಹದ ಪರಿಸ್ಥಿತಿಯಲ್ಲಿ ಇಂಗಳಿ ಗ್ರಾಮದ ಯುವಕ ನೀರು ಪಾಲಾಗಿದ್ದಾನೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಘೋರ ದುರಂತ.. ಮಕ್ಕಳಾಗಲಿಲ್ಲ ಅನ್ನೋ ಕೊರಗಿಗೆ ದಂಪತಿ ಆತ್ಮಹತ್ಯೆಗೆ ಶರಣು 

28 ವರ್ಷದ ರೋಹಣ ಪಾಟೀಲ ಮೃತ ಯುವಕ. ರೋಹಣ ಕೃಷ್ಣಾ ನದಿಯ ಹಿನ್ನೀರಿಗೆ ಬಾಗಿನ ಅರ್ಪಿಸಲು ಹೋಗಿ ಆಯತಪ್ಪಿ ನೀರುಪಾಲಾಗಿದ್ದಾರೆ. ಈಜಲು ಬಾರದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Sex for Food: ಹೊಟ್ಟೆಗಾಗಿ ಸೈನಿಕರಿಗೆ ದೇಹ ಒಪ್ಪಿಸಬೇಕು; ಸೇನೆ ಕೈಗೆ ಸಿಕ್ಕ ಈ ಮಹಿಳೆಯರು ವಿಲವಿಲ 

ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ರೋಹಣನ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತೆ ಆಗಿದೆ. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment