Advertisment

VIDEO: ಸಿದ್ದರಾಮಯ್ಯ ನಿವಾಸದ ಮುಂದೆ ವೃದ್ಧ ಆಕ್ರೋಶ; ಪೊಲೀಸರು ಒಂದು ಕ್ಷಣ ತಬ್ಬಿಬ್ಬು..!

author-image
Ganesh
Updated On
VIDEO: ಸಿದ್ದರಾಮಯ್ಯ ನಿವಾಸದ ಮುಂದೆ ವೃದ್ಧ ಆಕ್ರೋಶ; ಪೊಲೀಸರು ಒಂದು ಕ್ಷಣ ತಬ್ಬಿಬ್ಬು..!
Advertisment
  • ಸಿಎಂ ಭೇಟಿಗೆ ಬಿಡದ ಪೊಲೀಸರ ಮೇಲೆ ಕೆರಳಿದ ವೃದ್ಧ
  • ಗಡ್ಡ ಬಿಟ್ಟಿದ್ದ ವಯಸ್ಸಾದ ವೃದ್ಧನಿಂದ ಪೊಲೀಸರ ವಿರುದ್ಧ ಆಕ್ರೋಶ
  • ‘ಏನ್ರೀ ಹೊಡೀತೀರೇನ್ರಿ ನನಗೆ, ಮೈಮುಟ್ಟ ಬೇಡಿ’ ಎಂದು ಆವಾಜ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಮುಂದೆ ವೃದ್ಧರೊಬ್ಬರು ಪೊಲೀಸ್ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದ ಪ್ರಸಂಗ ಇಂದು ಬೆಳಗ್ಗೆ ನಡೆದಿದೆ.

Advertisment

ಅಷ್ಟಕ್ಕೂ ಆಗಿದ್ದು ಏನು?

ಕಾರ್ಯಕ್ರಮದ ನಿಮಿತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಗಾಂಧಿ ಭವನಕ್ಕೆ ಹೋಗಿದ್ದರು. ಇತ್ತ ವೃದ್ಧರೊ ಬ್ಬರು ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ಮನವಿ ಕೊಡಲು ಬಂದಿದ್ದರು. ಆದರೆ ಪೊಲೀಸರು ಆ ವ್ಯಕ್ತಿಯನ್ನ ಮಧ್ಯದಲ್ಲೇ ತಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಗೆ ಸಿಟ್ಟಿಗೆದ್ದ ಹಿರಿಯ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಶಿಖರ್ ಧವನ್​ರನ್ನು ಮಿಸ್ಟರ್ ಐಸಿಸಿ ಎಂದು ಕರೆಯೋದೇಕೆ? ಗಬ್ಬರ್ ದಾಖಲೆಗೆ ತಲೆ ಬಾಗಿದ್ದ ICC

publive-image

ಕೋಪದಲ್ಲೇ ಪೊಲೀಸರಿಗೆ ಆವಾಜ್ ಹಾಕಿದ ಅವರು, ‘ಏನ್ರೀ ಹೊಡೀತೀರೇನ್ರಿ, ನನ್ನ ಮೈಮುಟ್ಟ ಬೇಡಿ. ದೂರ ನಿಂತು ಮಾತಾಡಿ, ತಳ್ಳಬೇಡಿ. ಹಿರಿಯ ನಾಗರಿಕರಿಗೆ ಗೌರವ ಕೊಡೋದು ಇದೇನಾ ಎಂದು ಪೊಲೀಸರ ಮೇಲೆ ಕಿಡಿಕಾರಿದ್ದಾರೆ. ಆಗ ಬ್ಯಾಗ್​ನಲ್ಲಿ ಏನಿದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ಸಿಟ್ಟಿನಿಂದ ಗಂಭೀರ ಪರಿಣಾಮ ಉಂಟುಮಾಡುವ ವಸ್ತುವೊಂದು ಇದೆ ಎಂದು ಅವರದ್ದೇ ಭಾಷೆಯಲ್ಲಿ ಹೇಳಿದ್ದಾರೆ. ಆಗ ಪೊಲೀಸರು ಆಯ್ತು ಹೋಗಪ್ಪ ಎಂದು ಕಳುಹಿಸಿದ್ದಾರೆ. ಕೊನೆಗೆ ಆ ವ್ಯಕ್ತಿಯನ್ನು ಸಮಾಧಾನಪಡಿಸಿ ಗೃಹ ಕಚೇರಿ ಕೃಷ್ಣಾಕ್ಕೆ ಕರೆದೊಯ್ದು ಮನವಿಯನ್ನು ಸ್ವೀಕರಿಸಿದ್ದಾರೆ.

Advertisment

ಇದನ್ನೂ ಓದಿ:ಶಿಖರ್ ಧವನ್​ಗೂ ಬಿಸಿಸಿಐ ಅನ್ಯಾಯ -ಗಬ್ಬರ್ ಸಿಂಗ್ ನಿವೃತ್ತಿ ಹಿಂದಿದೆ ಕೋಪ, ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment