newsfirstkannada.com

ಭೀಕರ ಅಪಘಾತ.. 300 ಮೀಟರ್ ಆಳದ ಕಂದಕಕ್ಕೆ ಕ್ಯಾಬ್ ಬಿದ್ದು 10 ಪ್ರಯಾಣಿಕರು ಸಾವು

Share :

Published March 29, 2024 at 10:55am

    ವಿಷಯ ತಿಳಿಯುತ್ತಿದ್ದಂತೆಯೇ ರಕ್ಷಣೆಗೆ ಧಾವಿಸಿರುವ ರಕ್ಷಣಾ ಪಡೆ

    ಇಂದು ಬೆಳಗಿನ ಜಾವ 1.15ರ ಸುಮಾರಿಗೆ ಅಪಘಾತ ಆಗಿರುವ ಮಾಹಿತಿ

    ರಕ್ಷಣೆಗೆ ನಿರಂತರ ಮಳೆ ಅಡ್ಡಿಯಾಗಿದೆ, 10 ಮೃತದೇಗಳು ಆಸ್ಪತ್ರೆಗೆ ರವಾನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಂಬನ್ ಬಳಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಬ್ ಒಂದು ಕಂದಕಕ್ಕೆ ಬಿದ್ದಿದೆ. ವಾಹನದಲ್ಲಿದ್ದ 10 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಅಪಘಾತಕ್ಕೆ ಒಳಗಾದ ಕ್ಯಾಬ್ ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದಾಗ ಪ್ರಪಾತಕ್ಕೆ ಜಾರಿದೆ. ದುರ್ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ರಕ್ಷಣಾ ಪಡೆ, ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ರಾಂಬನ್‌ನಿಂದ ಸಿವಿಲ್ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ)ನಿಂದ ರಕ್ಷಣಾ ಕಾರ್ಯ ನಡೆದಿದೆ. ಮಳೆ ಹಾಗೂ ರಾತ್ರಿಯಾಗಿದ್ದರಿಂದ ರಕ್ಷಣೆಗೆ ದೊಡ್ಡ ಸವಾಲ್ ಆಗಿತ್ತು. ಹೀಗಾಗಿ ಇಂದು ಬೆಳಗ್ಗೆಯೂ ರಕ್ಷಣಾ ಕಾರ್ಯ ಮುಂದುವರಿದಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಂಬನ್ ಪ್ರದೇಶದ ಬ್ಯಾಟರಿ ಚಶ್ಮಾ ಬಳಿ ದುರ್ಘಟನೆ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ ಇಲ್ಲಿಯವರೆಗೆ 10 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯು ದೊಡ್ಡ ಚಾಲೆಂಜ್ ಆಗಿದೆ.

300 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ..!

ಶುಕ್ರವಾರ ಬೆಳಗಿನ ಜಾವ 1.15ರ ಸುಮಾರಿಗೆ ಅಪಘಾತದ ಬಗ್ಗೆ ಮಾಹಿತಿ ಸಿಕ್ಕಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ 300 ಮೀಟರ್ ಆಳದ ಕಂದಕಕ್ಕೆ ಕ್ಯಾಬ್ ಬಿದ್ದಿದೆ. ಸದ್ಯ ಹೊರತೆಗೆದ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. 300 ಮೀಟರ್ ಆಳದ ಕಂದಕಕ್ಕೆ ಕ್ಯಾಬ್ ಬಿದ್ದು 10 ಪ್ರಯಾಣಿಕರು ಸಾವು

https://newsfirstlive.com/wp-content/uploads/2024/03/JK_ACCIDENT.jpg

Load More