newsfirstkannada.com

×

ಹೈಕೋರ್ಟ್‌ನಲ್ಲಿ ಜಡ್ಜ್‌ ಮುಂದೆಯೇ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

Share :

Published April 3, 2024 at 2:13pm

Update April 3, 2024 at 2:31pm

    ಹೈಕೋರ್ಟ್ ಹಾಲ್‌ನಲ್ಲಿ ಜಡ್ಜ್ ಮುಂದೆಯೇ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ

    ರೇಜರ್ ಬ್ಲೇಡ್ ಒಳಗೆ ತಂದು ಕುತ್ತಿಗೆ ಕೊಯ್ದುಕೊಳ್ಳಲು ಯತ್ನಿಸಿದ ವ್ಯಕ್ತಿ

    ತನಗೆ ನ್ಯಾಯ ಕೊಡಿ, ನ್ಯಾಯ ಕೊಡಿ ಎಂದು ಕೂಗಾಡಿದವ ಆಸ್ಪತ್ರೆಗೆ ದಾಖಲು

ಬೆಂಗಳೂರು: ಹೈಕೋರ್ಟ್ ಹಾಲ್‌ನಲ್ಲಿ ಜಡ್ಜ್ ಮುಂದೆಯೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಹಂಗಾಮ ಸೃಷ್ಟಿಸಿದ ಘಟನೆ ನಡೆದಿದೆ. ಮುಖ್ಯ ವಿಭಾಗೀಯ ಪೀಠದಲ್ಲಿ ವ್ಯಕ್ತಿಯೊಬ್ಬ ರೇಜರ್ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಆ ವ್ಯಕ್ತಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲು ನ್ಯಾಯ ಪೀಠ ಸೂಚನೆ ನೀಡಿದೆ.

ಹೈಕೋರ್ಟ್ ಹಾಲ್‌ನಲ್ಲಿ ತನಗೆ ನ್ಯಾಯ ಕೊಡಿ ಎಂದು ಕೂಗಾಡಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಘಟನೆಗೆ ಬೇಸರ ವ್ಯಕ್ತಪಡಿಸಿರುವ ಜಡ್ಜ್‌, ಹೈಕೋರ್ಟ್‌ ಹಾಲ್‌ಗೆ ಆ ವ್ಯಕ್ತಿ ರೇಜರ್ ಬ್ರೇಡ್ ಹೇಗೆ ಒಳಗೆ ತಂದ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: 4 ವರ್ಷದ ಮಗನನ್ನೇ ಕೊಲೆ ಮಾಡಿದ್ದ ತಾಯಿ.. ಸೂಚನಾ ಸೇಠ್‌ ಕೇಸ್‌ ಮತ್ತೊಂದು ಸತ್ಯ ಬಯಲು

ಆತ್ಮಹತ್ಯೆ ಯತ್ನದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಕಲಾಪವನ್ನು ಮುಂದೂಡಿಕೆ ಮಾಡಿದ್ದು, ಗಾಯಾಳುವಿನ ಬಗ್ಗೆ ಮಾಹಿತಿ ನೀಡಲು ರಿಜಿಸ್ಟ್ರಾರ್ ಜನರಲ್‌ಗೆ ಸೂಚನೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈಕೋರ್ಟ್‌ನಲ್ಲಿ ಜಡ್ಜ್‌ ಮುಂದೆಯೇ ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

https://newsfirstlive.com/wp-content/uploads/2024/01/HIGHCOURT-AADHAAR.jpg

Load More