Advertisment

ಅಬ್ಬಾ.. ಅಪಾರ್ಟ್‌ಮೆಂಟ್‌ಗೆ ಬಂದು ವಿಲ, ವಿಲ ಒದ್ದಾಡಿದ ಹೆಬ್ಬಾವು; ಭಯಾನಕ ವಿಡಿಯೋ ಇಲ್ಲಿದೆ ನೋಡಿ

author-image
admin
ಅಬ್ಬಾ.. ಅಪಾರ್ಟ್‌ಮೆಂಟ್‌ಗೆ ಬಂದು ವಿಲ, ವಿಲ ಒದ್ದಾಡಿದ ಹೆಬ್ಬಾವು; ಭಯಾನಕ ವಿಡಿಯೋ ಇಲ್ಲಿದೆ ನೋಡಿ
Advertisment
  • ಅಪಾರ್ಟ್‌ಮೆಂಟ್‌ ಕಿಟಕಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವು
  • ದೊಡ್ಡ ಹೆಬ್ಬಾವನ್ನು ಧೈರ್ಯದಿಂದ ರಕ್ಷಿಸಿದ ಇಬ್ಬರು ಯುವಕರು
  • ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿದ್ದ ಹೆಬ್ಬಾವಿಗೆ ಮರುಜೀವ

ಥಾಣೆ: ಇತ್ತೀಚೆಗೆ ಮಹಾರಾಷ್ಟ್ರದ ಹಲವು ನಗರದಲ್ಲಿ ಧಾರಾಕಾರ ಮಳೆ ಸುರಿದಿದ್ದು, ವರುಣನ ಆರ್ಭಟಕ್ಕೆ ತತ್ತರಿಸಿದ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ವಾರ ಒಂದೇ ರಾತ್ರಿ ಸುರಿದ ದಾಖಲೆಯ ಮಳೆಗೆ ನಾಗ್ಪುರದ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಪ್ರವಾಹದ ಹೊಡೆತಕ್ಕೆ ತತ್ತರಿಸಿದ ಬಳಿಕ ಥಾಣೆಯಲ್ಲಿ ಹಾವುಗಳ ಹಾವಳಿ ಶುರುವಾಗಿದೆ.

Advertisment

ಇದನ್ನೂ ಓದಿ: ಪೊಲೀಸರಿಗೆ ಕೊಟ್ಟ ಬಿರಿಯಾನಿಯಲ್ಲಿ ಸತ್ತ ಇಲಿ.. ಅದೃಷ್ಟವಶಾತ್ ಭದ್ರತಾ ಸಿಬ್ಬಂದಿ ಅಪಾಯದಿಂದ ಪಾರು

ಮುಂಬೈ ಸಮೀಪದ ಥಾಣೆಯ ಅಪಾರ್ಟ್‌ಮೆಂಟ್‌ ಒಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ದೊಡ್ಡ ಹೆಬ್ಬಾವು ಅಪಾರ್ಟ್‌ಮೆಂಟ್‌ನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದು ಒದ್ದಾಡುತ್ತಿತ್ತು. ಕಿಟಕಿಯಲ್ಲಿ ಸಿಲುಕಿ ಹೆಬ್ಬಾವು ಒದ್ದಾಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisment


">September 26, 2023


ಅಪಾರ್ಟ್‌ಮೆಂಟ್‌ನ ಕಿಟಕಿಯಲ್ಲಿ ಸಿಲುಕಿದ್ದ ಹೆಬ್ಬಾವನ್ನು ಇಬ್ಬರು ಯುವಕರು ರಕ್ಷಿಸುವ ಸಾಹಸ ಮಾಡಿದ್ದಾರೆ. ಕಬ್ಬಿಣದ ಸರಳುಗಳ ಮಧ್ಯೆ ಸಿಲುಕಿರುವ ಹೆಬ್ಬಾವನ್ನು ಧೈರ್ಯದಿಂದ ಇಬ್ಬರು ಯುವಕರು ಬಿಡಿಸಿದ್ದು ಅಪಾಯದಿಂದ ಪಾರು ಮಾಡಿದ್ದಾರೆ. ಒಬ್ಬ ಯುವಕ ಹಾವಿನ ಬಾಲವನ್ನು ಮತ್ತೊಬ್ಬ ಹೆಬ್ಬಾವಿನ ತಲೆಯನ್ನು ಹಿಡಿದು ಕಿಟಕಿಯಿಂದ ಬಿಡಿಸಿದ್ದಾರೆ. ಇಬ್ಬರು ಯುವಕರು ಧೈರ್ಯದಿಂದ ಹೆಬ್ಬಾವನ್ನು ಹಿಡಿದು ರಕ್ಷಿಸಿದ್ರೆ, ಅಪಾಯದಲ್ಲಿ ಸಿಲುಕಿದ್ದ ಹೆಬ್ಬಾವು ನಿಟ್ಟುಸಿರು ಬಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment