newsfirstkannada.com

BIG BREAKING: ಅಯೋಧ್ಯೆಗೆ ಮೈಸೂರಿನ ಶಿಲ್ಪಿ ಕೆತ್ತನೆಯ ರಾಮ ಲಲ್ಲಾ ಮೂರ್ತಿ ಆಯ್ಕೆ

Share :

Published January 1, 2024 at 3:15pm

Update January 3, 2024 at 5:06pm

    ಜನವರಿ 22ರಂದು ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ

    ಮೈಸೂರು ಶಿಲ್ಪಿ‌ ಅರುಣ್ ಕೆತ್ತನೆಯ ಮೂರ್ತಿಯೇ ಅಂತಿಮ

    ರಾಮ ಲಲ್ಲಾ ಮೂರ್ತಿ ಕೆತ್ತನೆಗೆ ಮೂವರು ಶಿಲ್ಪಿಗಳ ನೇಮಕ

ಮೈಸೂರು: ಇದೇ ಜನವರಿ 22ರಂದು ಅಯೋಧ್ಯೆಯ ಭವ್ಯ ಶ್ರೀರಾಮಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಕೋಟ್ಯಾನುಕೋಟಿ ರಾಮನ ಭಕ್ತರು ಕಾಯುತ್ತಿದ್ದಾರೆ. ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿರುವಾಗ ಕನ್ನಡಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವ ರಾಮ ಲಲ್ಲಾ ಮೂರ್ತಿಗೆ ಮೂವರು ಶಿಲ್ಪಿಗಳನ್ನ ನೇಮಿಸಲಾಗಿತ್ತು. ಈ ಮೂರರಲ್ಲಿ ಮೈಸೂರು ಶಿಲ್ಪಿ‌ ಅರುಣ್ ಯೋಗಿರಾಜ್ ಅವರ ಮೂರ್ತಿಯೇ ಅಂತಿಮವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಾಮ ಲಲ್ಲಾ ಮೂರ್ತಿ ಕೆತ್ತನೆ ಪೂರ್ಣಗೊಳಿಸಿದ ಮೈಸೂರಿನ ಶಿಲ್ಪಿ; ಅಯೋಧ್ಯೆಗೆ ಕನ್ನಡಿಗನ ಕೊಡುಗೆ ಸ್ಮರಣೀಯ

ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಹಾರೋಹಳ್ಳಿ ಗ್ರಾಮದ ಕಲ್ಲನ್ನು ರಾಮ ಲಲ್ಲಾ ಮೂರ್ತಿ ಕೆತ್ತನೆಗೆ ಬಳಸಲಾಗಿದೆ. ಈಗಾಗಲೇ ಕೃಷ್ಣಶಿಲೆಯಲ್ಲಿ 51 ಇಂಚಿನ ರಾಮ ಲಲ್ಲಾ ಮೂರ್ತಿಯ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ.

ಇದನ್ನೂ ಓದಿ: EXCLUSIVE: ಶ್ರೀರಾಮನ ಭಕ್ತರೇ ಗಮನಿಸಿ.. ಅಯೋಧ್ಯೆಯ ರಾಮ ಲಲ್ಲಾ ಮೂರ್ತಿ ಇದಲ್ಲವೇ ಅಲ್ಲ; ಹೇಗಿರುತ್ತೆ?

ದೇಶದ ಪ್ರಖ್ಯಾತ ಮೂವರು ಶಿಲ್ಪಿಗಳಿಂದ 51 ಇಂಚು ಎತ್ತರದ ಮೂರು ರಾಮ ಲಲ್ಲಾ ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದೆ. ಮೈಸೂರಿನ ಅರುಣ್ ಯೋಗಿರಾಜ್, ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಹಾಗೂ ಜಿ.ಎಲ್.ಭಟ್ ಅವರಿಂದ ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದೆ. ಮೂವರು ಕೆತ್ತಿರುವ ಮೂರು ಮೂರ್ತಿಗಳಲ್ಲಿ ಒಂದನ್ನು ಮಾತ್ರ ಗರ್ಭಗೃಹದಲ್ಲಿ ಕಮಲದ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ. ಉಳಿದೆರಡು ಮೂರ್ತಿಯನ್ನು ಮಂದಿರದ ಆವರಣದಲ್ಲಿ ಗೌರವಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BREAKING: ಅಯೋಧ್ಯೆಗೆ ಮೈಸೂರಿನ ಶಿಲ್ಪಿ ಕೆತ್ತನೆಯ ರಾಮ ಲಲ್ಲಾ ಮೂರ್ತಿ ಆಯ್ಕೆ

https://newsfirstlive.com/wp-content/uploads/2023/12/arun.jpg

Load More