newsfirstkannada.com

ರೈತರಿಗೆ ಕೆ.ಸಿ. ವ್ಯಾಲಿ ನೀರಿನ ಸಂಕಟ.. ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ನ್ಯೂಸ್ ಫಸ್ಟ್ ವರದಿ; ಸರ್ಕಾರ ಹೇಳಿದ್ದೇನು?

Share :

Published February 20, 2024 at 6:12pm

    ಕೆ.ಸಿ. ವ್ಯಾಲಿ, H.N ವ್ಯಾಲಿ ನೀರಿನ ಬಗ್ಗೆ ನ್ಯೂಸ್‌ ಫಸ್ಟ್ ವರದಿ

    ಜಾನುವಾರುಗಳು ಕುಡಿಯಲ್ಲ.. ಅಂತರ್ಜಲವೂ ಸಂಪೂರ್ಣ ಕಲುಷಿತ

    ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಒತ್ತಾಯ

ಕೆ.ಸಿ. ವ್ಯಾಲಿ, H.N ವ್ಯಾಲಿ ಕಲುಷಿತ ನೀರಿನ ಬಗ್ಗೆ ನ್ಯೂಸ್‌ ಫಸ್ಟ್ ಮಾಡಿದ ವಿಶೇಷ ವರದಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಅವರು ಸದನದಲ್ಲಿ ನ್ಯೂಸ್ ಫಸ್ಟ್ ವರದಿ ಬಗ್ಗೆ ಪ್ರಸ್ತಾಪ ಮಾಡಿದರು.

ಕೆ.ಸಿ ವ್ಯಾಲಿ‌, ಹೆಚ್.ಎನ್ ವ್ಯಾಲಿಗಳ ನೀರು ಕಲುಷಿತವಾಗಿದೆ. ಜಾನುವಾರುಗಳು ನೀರು ಕುಡಿಯುತ್ತಿಲ್ಲ. ಅಂತರ್ಜಲವೂ ಸಂಪೂರ್ಣ ಕಲುಷಿತ ಆಗ್ತಿದೆ. ಜನಸಾಮಾನ್ಯರಿಗೂ ಆರೋಗ್ಯದ ಸಮಸ್ಯೆ ಆಗ್ತಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ಹಲವು ಜಿಲ್ಲೆಗಳಿಗೆ ಕೆಸಿ ವ್ಯಾಲಿ ಮತ್ತು ಹೆಚ್‌ಎನ್ ವ್ಯಾಲಿಗಳೆಂಬ ಎರಡು ಯೋಜನೆಗಳ ಮೂಲಕ ಬೆಂಗಳೂರಿನ ಕಲುಷಿತ ನೀರನ್ನು ಸಂಸ್ಕರಿಸಿ ನೀರು ಹರಿಸಲಾಗ್ತಿದೆ. ಈ ನೀರಿನಲ್ಲಿ ವಿಷಕಾರಕ ಅಂಶಗಳಿವೆ. ಹೀಗಾಗಿ ಮೂರನೇ ಹಂತದಲ್ಲಿ ನೀರು ಸಂಸ್ಕರಿಸಿ ಈ ವ್ಯಾಲಿಗಳಿಗೆ ಹರಿಸಬೇಕೆಂದು ಧೀರಜ್ ಮುನಿರಾಜು ಒತ್ತಾಯ ಮಾಡಿದರು.

ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಸಣ್ಣ ನೀರಾವರಿ ಸಚಿವ ಎನ್.ಎಸ್ ಭೋಸರಾಜ್ ಅವರು ಸದನಕ್ಕೆ ಉತ್ತರ ನೀಡಿದರು. ಇರುವ ಮಾನದಂಡಗಳು, ಪ್ಯಾರಾಮೀಟರ್‌ಗಳ ಅನ್ವಯ ನಿತ್ಯ ಈ ವ್ಯಾಲಿಗಳಿಗೆ ನೀರು ಪರೀಕ್ಷಿಸಿ ಹರಿಸಲಾಗ್ತಿದೆ. ಐಐಎಸ್‌ಸಿ ಸಂಸ್ಥೆಯವ್ರು 2023ರಲ್ಲಿ ವರದಿ ಕೊಟ್ಟಿದೆ. ಸರ್ಕಾರ ಜನ ಮತ್ತು ಜಾನುವಾರು, ಪಕ್ಷಿಗಳಿಗೆ ತೊಂದರೆ ಆಗದಿರಲು ನಿಗಾ ಇಟ್ಟಿದೆ. ಕೆರೆಗಳಲ್ಲಿ ಮೀನುಗಳೂ ಬದುಕುತ್ತಿವೆ. ಬಿಜೆಪಿ ಶಾಸಕರ ಆರೋಪದಲ್ಲಿ ಹುರುಳಿಲ್ಲ. ಮೂರನೇ ಹಂತದ ಶುದ್ಧೀಕರಣ ಮಾಡುವುದು ಸರ್ಕಾರದ ಗಮನದಲ್ಲಿದ್ದು ಸರ್ಕಾರ ಕ್ರಮ‌ವಹಿಸಲಿದೆ ಎಂದ ಸಚಿವರು ಹೇಳಿದರು.

ಸಚಿವ ಭೋಸರಾಜ್ ಅವರ ಉತ್ತರಕ್ಕೆ ಧೀರಜ್ ಮುನಿರಾಜು ಅವರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಸಚಿವರೇ ನೀವು ಯಾವುದಾದರೂ ಕೆರೆಯಲ್ಲಿ ದನ‌ಕರುಗಳು ನೀರು ಕುಡಿಯುತ್ತಾವ ಅಂತ ಚೆಕ್ ಮಾಡಿ ಎಂದು ಧೀರಜ್ ಮುನಿರಾಜು ಒತ್ತಾಯಿಸಿದರು. ಕೆ.ಸಿ.ವ್ಯಾಲಿ, ಎಚ್‌.ಎನ್. ವ್ಯಾಲಿ ನೀರನ್ನು 3 ಹಂತದಲ್ಲಿ ಶುದ್ದೀಕರಿಸುತ್ತಿಲ್ಲ ಎಂದರು. ಆಗ ಸಚಿವ ಬೋಸರಾಜ್‌ ಅವರು ಮೂರನೇ ಹಂತದ ನೀರು ಶುದ್ದೀಕರಣದ ಬಗ್ಗೆ ಬೇಡಿಕೆ ಇದೆ. ಮೂರನೇ ಹಂತದ ಶುದ್ದೀಕರಣ ಬೇಡಿಕೆಯನ್ನು ಪರಿಶೀಲಿಸುತ್ತೇವೆ ಎಂದರು.

ಇದೇ ವೇಳೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಈ ಬಗ್ಗೆ ಸದನಕ್ಕೆ ಉತ್ತರಿಸಿದರು. ನೀರು ಶುದ್ದೀಕರಣದ ಪ್ಲಾಂಟ್‌ಗಳನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ. ಸದ್ಯ ಕೆ.ಸಿ.ವ್ಯಾಲಿ ನೀರು ಅನ್ನು ಕೆರೆಗಳಿಗೆ ಹರಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿಲ್ಲ. ಹೆವಿ ಮೆಟಲ್ಸ್ ಅನ್ನು ಕೂಡ ಅನುಮತಿಸಿದ ಮಿತಿಯಲ್ಲಿ ಇದ್ದರೆ ಮಾತ್ರ ನೀರು ಪೂರೈಕೆ ಮಾಡುತ್ತೇವೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತರಿಗೆ ಕೆ.ಸಿ. ವ್ಯಾಲಿ ನೀರಿನ ಸಂಕಟ.. ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ನ್ಯೂಸ್ ಫಸ್ಟ್ ವರದಿ; ಸರ್ಕಾರ ಹೇಳಿದ್ದೇನು?

https://newsfirstlive.com/wp-content/uploads/2024/02/KC-Valley-Water-2.jpg

Load More