/newsfirstlive-kannada/media/post_attachments/wp-content/uploads/2025/01/BBK-11-Goutami-Ganesh-Kasaragodu.jpg)
ಬಿಗ್ ಬಾಸ್ ರಿಯಾಲಿಟಿ ಶೋ ಅದೆಷ್ಟೋ ಮಂದಿಗೆ ಲೈಫ್ ಕಟ್ಟಿ ಕೊಟ್ಟಿದೆ. ಕೆಲವು ಜನರಿಗೆ ನೆಗೆಟಿವ್ ಆಗಿರೋದು ಇದೆ. ಶೋ ಮುಗಿಯೋ ಅಷ್ಟರಲ್ಲಿ ಆ ನೆಗಿಟಿವಿಟಿಯಲ್ಲ ಕಳೆದು ಆ ವ್ಯಕ್ತಿಯ ಪಾಸಿಟಿವ್ ಅಂಶಗಳು ಹೈಲೈಟ್ ಆಗಿವೆ. ವೀಕ್ಷಕರು ಸಿಕ್ಕಾಪಟ್ಟೆ ಇಷ್ಟ ಪಟ್ಟು ಅಪ್ಪಿ ಮುದ್ದಾಡಿದ್ದಾರೆ. ಮೂಗು ಮೂರಿತಿದ್ದವರು ಕರೆದು ಸನ್ಮಾನ ಮಾಡಿದ್ದಾರೆ. ಈ ತರಹದ ಘಟನೆಗಳು ಕಾಮನ್ ಆದ್ರೆ ಮನೆಯವ್ರೇ ತಿರುಗಿ ಬಿದ್ದಾಗ ಸಾಕಷ್ಟು ಅನುಮಾನಗಳು ಹುಟ್ಟಿಕೊಳ್ಳೋದು ಸಹಜ. ಈ ರೀತಿ ಪೀಠಿಕೆ ಹಾಕೋಕೆ ಕಾರಣ ಗೌತಮಿ ಜಾಧವ್.
ಬಿಗ್ಬಾಸ್ ಸೀಸನ್ 11 ಯಶಸ್ವಿಯಾಗಿ ಮುಗೀತು. ಆದ್ರೆ ಗೌತಮಿ ಜಾಧವ್ ಕುಟುಂಬದಲ್ಲಿ ಬಿರುಗಾಳಿ ಎದ್ದಂತೆ ಭಾಸವಾಗುತ್ತಿದೆ. ಈ ರೀತಿಯ ಅನುಮಾನ ಬರೋಕೆ ಕಾರಣ ಮಾವನ ಈ ಪೋಸ್ಟ್.
ಗೌತಮಿ ಜಾಧವ್ ಮಾವ ಖ್ಯಾತ ಪತ್ರಕರ್ತರಾದ ಗಣೇಶ್ ಕಾಸರಗೂಡು. ಸಿನಿಮಾ ಬರವಣಿಗೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇವ್ರಿಗೆ ಇಬ್ಬರೂ ಗಂಡ್ಮಕ್ಕಳು ದೊಡ್ಡವ್ರು ಅಭಿಷೇಕ್. ಚಿಕ್ಕವನು ಅಲೋಕ್. ಅಭಿ ಅವರ ಪತ್ನಿ ಗೌತಮಿ. ಮೊದಲೆಲ್ಲಾ ಮಗ ಸೊಸೆ ಬಗ್ಗೆ ಗಣೇಶ್ ಕಾಸರಗೋಡು ಮಾತನಾಡ್ತಿದ್ದವ್ರು ಈಗ ಸೊಸೆ ಬಗ್ಗೆ ಅದ್ಯಾಕೋ ಮುನಿಸಿಕೊಂಡಂತಿದೆ. ಗೌತಮಿ ಬಿಗ್ ಬಾಸ್ನಿಂದ ಹೊರ ಬಂದಾಗ ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ರು. ತಾಯಿ ವನದುರ್ಗಮ್ಮ ಅನ್ಯಾಯದ ಬೇಡಿಕೆಯನ್ನ ತಿರಸ್ಕರಿಸ್ತಾಳೆ ಅಂತ ಬರೆದಿದ್ರು. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಯ್ತು. ಮಾವ ಸೊಸೆಗೆ ಏನಾದ್ರು ಟಾಂಟ್ ಕೊಡ್ತಿದ್ದಾರಾ ಎಂಬೆಲ್ಲಾ ಮಾತುಗಳು ಹರಿದಾಡಿದ್ದವು.
ಇದಾದ ನಂತರ ಮತ್ತೊಂದು ಪೋಸ್ಟ್ ಶೇರ್ ಮಾಡಿದ ಗೌತಮಿ ಮಾವ, ಪತ್ನಿ, ಚಿಕ್ಕ ಮಗ ಹಾಗೂ ಚಿಕ್ಕ ಸೊಸೆ ಜೊತೆಗೆ ಫೋಟೋ ಶೇರ್ ಮಾಡಿದ ಅವರು, ನಮ್ಮ ಕುಟುಂಬ ಇಷ್ಟೇ ಎಂಬ ರೀತಿಯಲ್ಲಿ ಬರೆದುಕೊಂಡಿದ್ರು. ಇದಕ್ಕೆ ಸಾಕಷ್ಟು ಜನರು ನಿಮ್ಮ ದೊಡ್ಮಗ ಅಭಿಷೇಕ್ ಹಾಗೂ ಸೊಸೆ ಗೌತಮಿ ಎಲ್ಲಿ? ಗೌತಮಿ ನಿಮ್ಮ ಕುಟುಂಬ ಅಲ್ವಾ? ಅಂತ ಹಲವು ಪ್ರಶ್ನೆಗಳನ್ನ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರೋ ಅವರು ಈ ಪ್ರಶ್ನೆ ಅನ್ನು ಹೋಗಿ ಅವರನ್ನೇ ಕೇಳಿ ಎಂದಿದ್ದಾರೆ.
ಈ ಎಲ್ಲಾ ಬೆಳವಣಿಗೆ ನೋಡ್ತಿದ್ರೆ ಗೌತಮಿ ಹಾಗೂ ಪತಿಯ ಕುಟುಂಬದ ನಡುವೆ ಯಾವುದು ಸರಿಯಿಲ್ಲ ಅನ್ನೋದು ಕಂಡು ಬರ್ತಿದೆ. ಈ ಬಗ್ಗೆ ಖಾಸಗಿ ವಾಹಿನಿಯೊಂದು ಪ್ರಶ್ನೆ ಕೇಳಿದ್ದಾಗ, ನಮ್ಮ ಕುಟುಂಬದ ವಿಚಾರ ನಾಲ್ಕು ಗೋಡೆ ಮಧ್ಯೆ ಇದ್ರೆ ಚಂದ ಎಂದು ನಯವಾಗಿಯೇ ಈ ವಿಚಾರವನ್ನ ತಣ್ಣಗಾಗಿಸಿದ್ದಾರೆ ಗೌತಮಿ.
ಇದನ್ನೂ ಓದಿ: BBK11: ಉಗ್ರಂ ಮಂಜು ಸೋಲಿಗೆ ಗೌತಮಿ, ಮೋಕ್ಷಿತಾನೇ ಕಾರಣನಾ? ಶಾಕಿಂಗ್ ಸಂಗತಿ ಬಿಚ್ಚಿಟ್ಟ ತಂದೆ
ಇಲ್ಲಿ ಇನ್ನೊಂದು ವಿಚಾರವನ್ನ ಗಮನಿಸಿದ್ರೆ ಪತಿ ಕುಟುಂಬದ ಬಗ್ಗೆ ಗೌತಮಿ ಅವರು ಬಿಗ್ ಬಾಸ್ ಮನೆಯಲ್ಲಿ ಯಾವತ್ತು ಮಾತನಾಡಿಲ್ಲ. ಸದ್ಯ ಈ ಪೋಸ್ಟ್ಗಳು ಗೌತಮಿ ಹಾಗೂ ಮಾವನ ಕುಟುಂಬದಲ್ಲಿ ಕಲಹ ಇದೆ ಅನ್ನೋದಕ್ಕೆ ಪುಷ್ಠಿ ಕೊಡ್ತಿವೆ. ಅದ್ ಏನೇ ಸಮಸ್ಯೆ ಇದ್ರು ಬೇಗ ಬಗೆಹರಿಸಿಕೊಂಡು ಕುಟುಂಬ ಒದಾಂಗಲಿ ಅನ್ನೋದು ಗೌತಮಿ ಫ್ಯಾನ್ಸ್ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ