ಚಿತ್ರದುರ್ಗದಲ್ಲಿ ಅಪರೂಪದ ದೃಶ್ಯ.. ಮಾಲೀಕನ ಜೊತೆ ವಾಕಿಂಗ್ ಮಾಡುತ್ತೆ ಪ್ರೀತಿಯ ಹುಂಜ..!

author-image
Ganesh
Updated On
ಚಿತ್ರದುರ್ಗದಲ್ಲಿ ಅಪರೂಪದ ದೃಶ್ಯ.. ಮಾಲೀಕನ ಜೊತೆ ವಾಕಿಂಗ್ ಮಾಡುತ್ತೆ ಪ್ರೀತಿಯ ಹುಂಜ..!
Advertisment
  • ಹುಂಜ ಜೊತೆ ವಾಕಿಂಗ್ ಬರ್ತಾರೆ ಈ ಮಾಲೀಕ
  • ಅಪರೂಪದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್
  • ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣದ ದೃಶ್ಯ

ಮುಂಜಾನೆಯ ವಾಕಿಂಗ್, ಜಾಗಿಂಗ್ ಹೋಗೋ ಮಾಲೀಕರು, ತಮ್ಮ ಸಾಕು ಪ್ರಾಣಿ ನಾಯಿಯೊಂದಿಗೆ ವಾಕಿಂಗ್ ಹೋಗೋದು ಕಾಮನ್. ಆದರೆ ಚಿತ್ರದುರ್ಗದಲ್ಲಿ ಒಬ್ಬ ವ್ಯಕ್ತಿ ತಮ್ಮ ಪ್ರೀತಿ ಪಾತ್ರದ ಹುಂಜ ಜೊತೆ ವಾಕಿಂಗ್​ ಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.

publive-image

ಚಳ್ಳಕೆರೆ ನಗರದ ಡಿ.ಸುಧಾಕರ್ ಕ್ರೀಡಾಂಗಣಕ್ಕೆ ಪ್ರತಿನಿತ್ಯ ನೂರಾರು ಜನ ವಾಕಿಂಗ್ ಬರ್ತಾರೆ. ಅದೇ ರೀತಿ ಚಳ್ಳಕೆರೆ ನಗರದ ವ್ಯಾಪಾರಿ ಆಯುಬ್, ತಮ್ಮ ಹುಂಜದೊಂದಿಗೆ ವಾಕಿಂಗ್ ಬಂದಿದ್ರು.

publive-image

ಮಾಲೀಕ ಆಯುಬ್ ಜೊತೆ ಹುಂಜ ಕೂಡ ವಾಕಿಂಗ್​ ಮಾಡಿದ್ದು, ಕ್ರೀಡಾಂಗಣದಲ್ಲಿದ್ದ ಎಲ್ಲರ ಗಮನ ಸೆಳೆದಿದೆ.

publive-image

ಕೋಳಿ ತನ್ನ ಮಾಲೀಕನ ಜೊತೆ ಮೈದಾನದಲ್ಲಿ ಹೆಜ್ಜೆ ಹಾಕುವ ದೃಶ್ಯ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಪ್ರಾಣಿಗಳು ಮಾಲೀಕರ ಜೊತೆ ವಾಕಿಂಗ್ ಬರುತ್ತವೆ.

publive-image

ಆದರಿಲ್ಲಿ ಪಕ್ಷಿಯೊಂದು ತನ್ನ ನಂಬುಗೆಯ ಮಾಲೀಕನೊಂದಿಗೆ ವಾಕಿಂಗ್ ಬಂದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ಗೆ ಮಾಸ್ಟರ್​ ಸ್ಟ್ರೋಕ್ ಕೊಟ್ಟಿದ್ದೇ ಕನ್ನಡಿಗ.. ಮತ್ತೆ ಪ್ರಸಿದ್ಧ್ ಕೃಷ್ಣ ಶೈನ್..!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment