newsfirstkannada.com

ಮೆಂಟಲ್ ಮಂಜನಿಗೆ ಖತರ್ನಾಕ್‌ ಸ್ಕೆಚ್.. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ

Share :

Published February 24, 2024 at 4:18pm

    ಮರ್ಡರ್, ರಾಬರಿ, ಸೇರಿ ಇನ್ನಿತರ ಕೃತ್ಯದಲ್ಲಿ ಮಂಜ ಭಾಗಿಯಾಗಿದ್ದ

    ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ 7 ಪ್ರಕರಣದಲ್ಲಿ ಭಾಗಿ

    ಲೋಕಸಭೆ ಚುನಾವಣೆ ಹಿನ್ನೆಲೆ 110 ಕೇಸ್ ಹಾಕಿದ್ದ ಪೊಲೀಸರು

ಬೆಂಗಳೂರು: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ರೌಡಿಶೀಟರ್ ಒಬ್ಬನನ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಆನೇಕಲ್ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ.

ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜ ಕೊಲೆಯಾದ ರೌಡಿಶೀಟರ್. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶಶಿಕುಮಾರ್ ಹಾಗೂ ವಿಜಯ್ ಅಲಿಯಾಸ್ ಟ್ಯಾಟೂ ವಿಜಯ್ ಸೇರಿ ಹತ್ಯೆ ಮಾಡಿದ್ದಾರೆ. ಸಣ್ಣ, ಸಣ್ಣ ವಿಷಯಕ್ಕೆ ಈ ಇಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ಮೆಂಟಲ್​ ಮಂಜ ಈ ಹಿಂದೆ ಮರ್ಡರ್, ರಾಬರಿ, ಸೇರಿದಂತೆ ಇನ್ನಿತರ ಕೃತ್ಯಗಳು ಸೇರಿ 8ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ 7 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಮೆಂಟಲ್ ಮಂಜನ ಮೇಲೆ 110 ಕೇಸ್​ಗಳನ್ನು ಹಾಕಿ ವಾರ್ನ್​ ಮಾಡಿ ಪೊಲೀಸರು ಕಳುಹಿಸಿದ್ದರು. ಇದು ಅಲ್ಲದೇ ಕೊಲೆ ಮಾಡಿರುವ ಆರೋಪಿ ಶಶಿ ಮೇಲೆ ಈ ಹಿಂದೆ 2 ಪ್ರಕರಣ ದಾಖಲಾಗಿದ್ದವು. ಕೊಲೆ ಯತ್ನ ಮತ್ತು ಗಲಾಟೆ ವಿಚಾರದಲ್ಲಿ ಆರೋಪಿ ಜೈಲಿಗೆ ಹೋಗಿ ಬಂದಿದ್ದನು. ಆದರೂ ಈಗ ಮತ್ತೊಂದು ಹತ್ಯೆ ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಂಟಲ್ ಮಂಜನಿಗೆ ಖತರ್ನಾಕ್‌ ಸ್ಕೆಚ್.. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ

https://newsfirstlive.com/wp-content/uploads/2024/02/BNG_ANK_ROWDY_DIE.jpg

Load More