Advertisment

ತಪ್ಪಿಸಿಕೊಳ್ಳಲು ಯತ್ನ, ಸಿಪಿಐಗೆ ಚಾಕುವಿನಿಂದ ಚುಚ್ಚಿದ ರೌಡಿಶೀಟರ್​.. ಆಮೇಲೆ ಏನಾಯ್ತು?

author-image
AS Harshith
Updated On
ತಪ್ಪಿಸಿಕೊಳ್ಳಲು ಯತ್ನ, ಸಿಪಿಐಗೆ ಚಾಕುವಿನಿಂದ ಚುಚ್ಚಿದ ರೌಡಿಶೀಟರ್​.. ಆಮೇಲೆ ಏನಾಯ್ತು?
Advertisment
  • ಮಾರಕ ಖಾಯಿಲೆಯಿಂದ ಬಳಲುತ್ತಿದ್ದ ರೌಡಿಶೀಟರ್
  • ವಾರ್ನಿಂಗ್ ಮಾಡಿದ್ರೂ ಚಾಕು ತೆಗೆದು ಚುಚ್ಚಿದ ರೌಡಿಶೀಟರ್
  • ಗಾಯಗೊಂಡ ಸಿಪಿಐಗೆ ಬ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಬೀದರ್‌ ನಗರದಲ್ಲಿ ರಾತ್ರೋರಾತ್ರಿ ಗುಂಡಿನ ಶಬ್ದ ಸದ್ದು ಮಾಡಿದೆ. ರಸೂಲ್ ರೌಡಿಶೀಟರ್ ಮೇಲೆ ಸಿಪಿಐ ಸಂತೋಷ್​ ಫೈರಿಂಗ್​​ ಮಾಡಿದ್ದಾರೆ.

Advertisment

ಬೀದರ್‌ನ ಹೃದಯ ಭಾಗದಲ್ಲಿರುವ ಸಾಯಿ ಸ್ಕೂಲ್ ಆವರಣದ ಬಳಿ ಘಟನೆ ನಡೆದಿದೆ. ಮಾರಕ ಖಾಯಿಲೆಯಿಂದ ಬಳಲುತ್ತಿದ್ದ ರೌಡಿಶೀಟರ್ ರಸೂಲ್​ನನ್ನು ನ್ಯೂಟೌನ್ ಪೊಲೀಸ್ ಠಾಣೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವಾಗ ತಪ್ಪಿಸಿಕೊಳ್ಳಲು ಯತ್ನಿಸಿ, ಸಿಪಿಐ ಕೈಗೆ ಚಾಕುವಿನಿಂದ ಇರಿದಿದ್ದಾನೆ.

ಸಿಪಿಐ ವಾರ್ನಿಂಗ್ ಮಾಡಿದ್ರೂ ರೌಡಿಶೀಟರ್ ಚಾಕು ತೆಗೆದು ಕೈಗೆ ಇರಿದಿದ್ದಾನೆ. ಚಾಕು ಇರಿತದ ಬಳಿಕ ಆತ್ಮರಕ್ಷಣೆಗಾಗಿ ಸಿಪಿಐ ರಸೂಲ್ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: ರಾಯರ ಮಠದಲ್ಲಿ ನಡೆಯುತ್ತಿದೆ ಹುಂಡಿ ಎಣಿಕೆ ಕಾರ್ಯ.. 29 ದಿನಗಳಲ್ಲಿ ಎಷ್ಟು ಕೋಟಿ ಸಂಗ್ರಹವಾಗಿದೆ ಗೊತ್ತಾ?

Advertisment

ಗಾಯಗೊಂಡ ಸಿಪಿಐ ಸಂತೋಷ ಬ್ರಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ದಾಖಲಿಸಲಾಗಿದೆ. ಇನ್ನೂ ರೌಡಿಶೀಟರ್‌ಗೆ ಮಾರಕ ಖಾಯಿಲೆ ಹಿನ್ನೆಲೆ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದಾರೆ.  ಘಟನೆ ಬಳಿಕ ಬ್ರಿಮ್ಸ್ ಆಸ್ಪತ್ರೆಗೆ ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment