newsfirstkannada.com

ನಡು ರಸ್ತೆಯಲ್ಲೇ ಬ್ಲಾಸ್ಟ್‌ ಆದ ರಾಯಲ್ ಎನ್‌ಫೀಲ್ಡ್ ಬೈಕ್‌; ಭಯಾನಕ ವಿಡಿಯೋ ಸೆರೆ

Share :

Published May 13, 2024 at 11:59am

  ಮಟ ಮಟ ಮಧ್ಯಾಹ್ನ ರಾಯಲ್ ಎನ್‌ಫೀಲ್ಡ್ ಬೈಕ್‌ ಧಗಧಗ

  ಬೈಕ್‌ಗೆ ಬಿದ್ದ ಬೆಂಕಿ ಆರಿಸಲು ಓಡೋಡಿ ಬಂದವರಿಗೆ ಗಂಭೀರ ಗಾಯ

  ಪಕ್ಕದಲ್ಲಿದ್ದ ಬೈಕ್‌ಗಳಿಗೂ ಬೆಂಕಿ ಆವರಿಸಿ ದೊಡ್ಡ ಅನಾಹುತ

ನೋಡ, ನೋಡುತ್ತಿದ್ದಂತೆ ರಾಯಲ್ ಎನ್‌ಫೀಲ್ಡ್ ಬೈಕ್ ರಸ್ತೆಯಲ್ಲೇ ಹೊತ್ತಿ ಉರಿದು ಬ್ಲಾಸ್ಟ್‌ ಆಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬೈಕ್‌ಗೆ ಬೆಂಕಿ ತಗಲುತ್ತಿದ್ದಂತೆ ಆರಿಸಲು ಸ್ಥಳೀಯರು ಹೋಗಿದ್ದಾರೆ. ಆಗ ಹೊತ್ತಿ ಉರಿದ ಬೈಕ್ ಸ್ಫೋಟಕೊಂಡು ಅಕ್ಕ-ಪಕ್ಕದ ಬೈಕ್‌ಗಳಿಗೂ ಬೆಂಕಿ ಬಿದ್ದಿದೆ.

ಇದನ್ನೂ ಓದಿ: ಪವಿತ್ರ ಜಯರಾಮ್ ಸಾವಿಗೆ ಆ್ಯಂಬುಲೆನ್ಸ್​ ಬಾರದಿರೋದೇ ಕಾರಣ -ಅಪಘಾತದ ಬಗ್ಗೆ ಇಂಚಿಂಚು ಮಾಹಿತಿ ಕೊಟ್ಟ ಸ್ನೇಹಿತ 

ಬೈಕ್‌ಗೆ ಬಿದ್ದ ಬೆಂಕಿ ಆರಿಸಲು ಹೋದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‌ಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಕಿ ಆರಿಸಲು ಪ್ರಯತ್ನ ಪಟ್ಟವರು, ಪೊಲೀಸರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೈಕ್‌ಗೆ ಬೆಂಕಿ ಬಿದ್ದಿರುವ ಘಟನೆಯು ಮಧ್ಯಾಹ್ನದ ವೇಳೆ ಮೊಘಲ್‌ಪುರದ ಬಿಬಿ ಬಜಾರ್ ರೋಡ್‌ನಲ್ಲಿ ನಡೆದಿದೆ. ಬೈಕ್‌ಗೆ ಬೆಂಕಿ ಬಿದ್ದ ಕೂಡಲೇ ಸ್ಥಳೀಯರು ನೀರು, ಮರಳು ಹಾಕಿ ಬೆಂಕಿ ಆರಿಸಲು ಕಸರತ್ತು ಮಾಡಿದ್ದಾರೆ. ಆದರೆ ಪಕ್ಕದಲ್ಲಿದ್ದ ಬೈಕ್‌ಗಳಿಗೂ ಬೆಂಕಿ ಆವರಿಸಿ ಅನಾಹುತ ಸಂಭವಿಸಿದೆ. ಈ ಘಟನೆಯಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್‌ ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಚಿಕಿತ್ಸೆಗಾಗಿ ಪ್ರಿನ್ಸೆಸ್ ಎಸ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಡು ರಸ್ತೆಯಲ್ಲೇ ಬ್ಲಾಸ್ಟ್‌ ಆದ ರಾಯಲ್ ಎನ್‌ಫೀಲ್ಡ್ ಬೈಕ್‌; ಭಯಾನಕ ವಿಡಿಯೋ ಸೆರೆ

https://newsfirstlive.com/wp-content/uploads/2024/05/Hyderabad-Bike-Fire.jpg

Load More