ಇಬ್ಬರು ಪುಟಾಣಿ ಹೆಣ್ಮಕ್ಕಳು, ಒಂದು ಬೆಕ್ಕು! ಗೋಕರ್ಣದ ದಟ್ಟ ಕಾಡಿನ ಪುಟ್ಟ ಗುಹೆಯಲ್ಲಿ ರಷ್ಯಾ ಮಹಿಳೆ ವಾಸ..!

author-image
Ganesh
Updated On
2017ರಲ್ಲಿ ಪ್ರೀತಿ, ಇಬ್ಬರು ಮಕ್ಕಳು.. ಆಮೇಲೆ ನಿಗೂಢ ಕಣ್ಮರೆ.. ಗುಹೆ ಲೇಡಿ ಲವ್ ಕಹಾನಿ ರೋಚಕ..!
Advertisment
  • ಹಾವು, ಚೇಳು, ಕಾಡು ಪ್ರಾಣಿಗಳಿರುವ ಸ್ಥಳದಲ್ಲಿ ಅದೆಂಥ ಆಕರ್ಷಣೆ..!
  • ಜಡಿ ಮಳೆ, ವಿಪರೀತ ಶೀತ ನಡುಕ.. ಮುದ್ದಾದ ಮಕ್ಕಳ ಜೊತೆ ಚೆಲ್ಲಾಟ
  • ಬಲೇಖಾನ, ಬ್ರಹ್ಮಕಾನು ಬೆಟ್ಟದ ನಿಗೂಢ ರಹಸ್ಯ ನಿಮಗೆ ಗೊತ್ತಾ..?

ದಟ್ಟ ಕಾಡು, ಪುಟ್ಟ ಗುಹೆಯಲ್ಲಿ ನಿಗೂಢವಾಗಿ ಇಬ್ಬರು ಹೆಣ್ಮಕ್ಕಳೊಂದಿಗೆ ವಾಸವಿದ್ದ ರಷ್ಯಾದ ಮಹಿಳೆಯನ್ನು ಗೋಕರ್ಣದಲ್ಲಿ ರಕ್ಷಣೆ ಮಾಡಲಾಗಿದೆ. ರಷ್ಯಾ ಮೂಲದ ನಿನಾ ಕುಟಿನಾ(40), ಮಕ್ಕಳಾದ ಪ್ರೇಮಾ (6) ಅಮಾ (04) ರಕ್ಷಣೆಗೊಳಗಾದವರು. ಇವರ ಜೊತೆಯಲ್ಲಿ ಒಂದು ಬೆಕ್ಕು ಇದೇ ಗುಹೆಯಲ್ಲಿ ಆಶ್ರಯ ಪಡೆದಿತ್ತು.

ರಾಮತೀರ್ಥ ಗುಡ್ಡದ ಗುಹೆಯಲ್ಲಿ ವಾಸ..

ರಷ್ಯಾ ಮೂಲದ ಮಹಿಳೆ ಗೋಕರ್ಣದ ರಾಮತೀರ್ಥ ಬಳಿ ಇರುವ ಗುಡ್ಡ ಒಂದರ ಗುಹೆಯಲ್ಲಿ ವಾಸವಿದ್ದಳು. ಹಾವು, ಚೇಳು ಹಾಗೂ ಕಾಡು ಪ್ರಾಣಿಗಳೇ ಹೆಚ್ಚಿರುವ ಈ ಸ್ಥಳ ತುಂಬಾನೇ ಜೀವಕ್ಕೆ ಅಪಾಯಕಾರಿಯಾಗಿತ್ತು. ಅಲ್ಲದೇ ಕಳೆದ ಬಾರಿ ಇದೇ ಜಾಗದಲ್ಲಿ ಭೂಕುಸಿತ ಕೂಡ ಸಂಭವಿಸಿತ್ತು.

ಗೋಕರ್ಣ ಪೊಲೀಸ್ ಠಾಣೆಯ ಪಿಐ ಶ್ರೀಧರ್ ನೇತೃತ್ವದಲ್ಲಿ ಗಸ್ತು ತಿರುಗುವಾಗ ಪ್ರಕರಣ ಬೆಳಕಿಗೆ ಬಂದಿದೆ. ಯಾರೋ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಹೋಗಿ ನೋಡಿದಾಗ ಗುಹೆಯಲ್ಲಿ ವಾಸವಿರೋದು ಬೆಳಕಿಗೆ ಬಂದಿದೆ. ಸದ್ಯ ರಕ್ಷಣೆ ಮಾಡಲಾಗಿರುವ ವಿದೇಶಿ ಮಹಿಳೆ ಹಾಗೂ ಆಕೆಯ ಮಕ್ಕಳನ್ನು ಎನ್​ಜಿಓ ಒಂದರಲ್ಲಿ ಆಶ್ರಯ ಪಡೆದಿದ್ದಾರೆ.

ಯಾಕೆ ಗುಹೆ ಸೇರಿದ್ದರು..?

ರಷ್ಯಾ ಮಹಿಳೆ ಕುಟಿನಾ ಪ್ರವಾಸಕ್ಕೆ ಅಂತಾ ಗೋಕರ್ಣಕ್ಕೆ ಬಂದಿದ್ದರು. ಮೊದಲೇ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿದ್ದ, ಇವರಿಗೆ ಗೋಕರ್ಣಕ್ಕೆ ಬರುತ್ತಿದ್ದಂತೆಯೇ ದೈವ ಭಕ್ತಿ ಬಗ್ಗೆ ಮತ್ತಷ್ಟು ಸೆಳೆತ ಉಂಟಾಗಿದೆ. ಹಾಗೂ ಗುಹೆಯಲ್ಲಿ ದೇವರ ಪೂಜೆ ಧ್ಯಾನ ಮಾಡಲು ಮಹಿಳೆ ಹೋಗಿ, ಅಲ್ಲಿಯೇ ವಾಸವಿದ್ದಳು.

ಇದನ್ನೂ ಓದಿ: ಭೂಮಿ, ಆಸ್ತಿ ಬಗ್ಗೆ ಶುಭ ವಾರ್ತೆ.. ವ್ಯವಹಾರದಲ್ಲಿ ಮನಸ್ಸಿಗೆ ಬಹಳ ಸಂತಸ ಸಿಗುವ ದಿನ; ಇಲ್ಲಿದೆ ಇಂದಿನ ರಾಶಿ

publive-image

ಸದ್ಯ, ಕುಮಟಾ ಬಂಕಿಕೊಡ್ಲ ಎನ್​ಜಿಓನಲ್ಲಿ ಇವರು ಆಶ್ರಯ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ವಿಸಾ ಕಳೆದುಯಕೊಂಡಿದ್ದ ರಷ್ಯಾ ಮಹಿಳೆಗೆ ಅದನ್ನು ಹುಡುಕಿ ಕೊಡಲಾಗಿದೆ. ಆದರೆ ವಿಸಾ ಅವಧಿ ಮುಗಿದು ಹೋಗಿದೆ. ವೀಸಾ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ಪೊಲೀಸರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಗುಹೆ ಬದುಕು ಇದೇ ಮೊದಲಲ್ಲ

ಗೋಕರ್ಣದಲ್ಲಿ ವಿದೇಶಿ ಪ್ರಜೆಗಳ ಗುಹೆ ಬದುಕು ಇದೇ ಮೊದಲ್ಲ. ಹಿಂದೆ ರಷ್ಯಾ ಹಾಗೂ ಫ್ರೆಂಚ್ ಪ್ರಜೆಗಳು ಇಲ್ಲಿರುವ ಕಾಡಿನಲ್ಲಿ, ಗುಹೆಯಲ್ಲಿ ವಾಸ ಮಾಡಿದ ಉದಾಹರಣೆಗಳು ಇವೆ. ಬೇಸಿಗೆ ಅವಧಿಯಲ್ಲಿ ಪ್ರವಾಸಕ್ಕೆ ಅಂತಾ ಆಗಮಿಸಿ ಅನೇಕರು ವಾಸ ಮಾಡುತ್ತಾರೆ. ಬಲೇಖಾನ ಹತ್ತಿರದ ಬ್ರಹ್ಮಕಾನ ಬೆಟ್ಟಗಳಲ್ಲಿ ಟೆಂಟ್ ಹಾಕಿ ವಾಸಿಸುತ್ತಾರೆ. ಉತ್ತರ ಭಾರತದಿಂದ ಬರುವ ಬಾಬಾಗಳು ಕೂಡ ಇಂಥ ಗುಹೆಯಲ್ಲಿ ವಾಸ ಮಾಡುತ್ತಾರೆ.

ಇದನ್ನೂ ಓದಿ: ಕೋಟ ಶ್ರೀನಿವಾಸ ರಾವ್ ನಿಧನ.. ‘ನಮ್ಮ ಬಸವ’ ಸೇರಿ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment