newsfirstkannada.com

ನಮ್ಮ ಮೆಟ್ರೋದ ಹಿರಿಯ ಅಧಿಕಾರಿಯಿಂದ ಮಹಿಳಾ ಭದ್ರತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ.. FIR ದಾಖಲು

Share :

Published March 16, 2024 at 10:20am

    ಮಹಿಳೆಯ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸ್ತಿದ್ರಂತೆ ಮೆಟ್ರೋ ಸಿಬ್ಬಂದಿ

    ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಕೂಡ ಮಹಿಳೆಗೆ ಸಹಕರಿಸುವಂತೆ ಹೇಳಿದ ಆರೋಪ

    ಸಹಕರಿಸದ ಮಹಿಳೆಯರಿಗೆ ಬೇರೆ ಕಡೆ ವರ್ಗಾವಣೆ ಮಾಡುವ ಬೆದರಿಕೆ‌

ಬೆಂಗಳೂರು: ಸಿಲಿಕಾನ್ ಸಿಟಿಯ ಮೆಟ್ರೋ ಸಿಬ್ಬಂದಿ ಯಾವುದಾದರೂ ಯಡವಟ್ಟು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪೂರಕ ಎನ್ನುವಂತೆ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಮಹಿಳಾ ಸಹೋದ್ಯೋಗಿಗೆ ಲೈಗಿಂಕ‌ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ರಾಜಾಜಿನಗರದ ಮೆಟ್ರೋ ನಿಲ್ದಾಣ Assistant Section Officer (ಸಹಾಯಕ ವಿಭಾಗಾಧಿಕಾರಿ) ಗಜೇಂದ್ರ ಪಿ‌ ವಿರುದ್ಧ ಈ ಆರೋಪ ಮಾಡಲಾಗಿದೆ. ಈ ಸಂಬಂಧ ಸುಬ್ರಹ್ಮಣ್ಯ ನಗರದ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಆರೋಪ ಕೇಳಿ ಬಂದಿರುವ ಹಿರಿಯ ಅಧಿಕಾರಿ ಮಹಿಳಾ ಸಿಬ್ಬಂದಿಗೆ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದರು. ಅವರ ಮೈ, ಕೈ ಮುಟ್ಟಿ ಲೈಗಿಂಕ ಕಿರುಕುಳ ನೀಡುತ್ತಿದ್ದರು. ತಮ್ಮ ಜೊತೆ ಸರಿಯಾಗಿ ಸಹಕರಿಸದ ಮಹಿಳೆಯರಿಗೆ ಬೇರೆ ಕಡೆ ವರ್ಗಾವಣೆ ಮಾಡುವುದಾಗಿ ಬೆದರಿಕೆ‌ ಹಾಕುತ್ತಿದ್ದು ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿ ಕಾಟ ಕೊಡುತ್ತಿದ್ದಾನೆ ಎಂದು ಸೆಕ್ಯೂರಿಟಿ ಏಜೆನ್ಸಿ ಮಾಲೀಕನಿಗೆ ಹೇಳಿದರೆ ಅವರು ಕೂಡ ಸಹಕರಿಸುವಂತೆ ಒತ್ತಾಯ ಮಾಡುತ್ತಿದ್ದರು. ಒಂದು ವೇಳೆ ಅವರ ಜೊತೆ ಸಹಕರಿಸಿಲ್ಲ ಎಂದರೆ ಕೆಲಸದಿಂದ ತೆಗೆಯುತ್ತೇವೆ ಎಂದು ಹೇಳುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಮಹಿಳೆಯರು ಬಿಎಂಆರ್​ಸಿಎಲ್​ನ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?

  • ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದೇನೆ
  • ನಿಲ್ದಾಣದ ಎಎಸ್ಓ ಗಜೇಂದ್ರ ಪಿ‌ ನನಗೂ ಹಾಗೂ ಇತರೆ ಸಿಬ್ಬಂದಿಗೆ ನಿಂದಿಸುತ್ತಾರೆ
  • ಒತ್ತಾಯ ಪೂರ್ವಕವಾಗಿ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತನೆ ಮಾಡುತ್ತಾರೆ
  • ವಿರೋಧ ವ್ಯಕ್ತಪಡಿಸಿದ್ರೆ ಸುಳ್ಳು ಕೇಸ್ ಹಾಕಿ ವರ್ಗಾವಣೆ ಮಾಡುವುದಾಗಿ ಬೆದರಿಕೆ
  • ನಮ್ಮ ಏಜೆನ್ಸಿ ಮಾಲೀಕರಿಗೆ ದೂರು ನೀಡಿದ್ರೆ ಸಹಕರಿಸಿ, ಇಲ್ಲ ಕೆಲಸ ಬಿಡಿ ಎನ್ನುತ್ತಾರೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮೆಟ್ರೋದ ಹಿರಿಯ ಅಧಿಕಾರಿಯಿಂದ ಮಹಿಳಾ ಭದ್ರತಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ.. FIR ದಾಖಲು

https://newsfirstlive.com/wp-content/uploads/2024/03/METRO_WOMENS.jpg

Load More