ಆನ್​ಲೈನ್​ನಲ್ಲಿ ಆರ್ಡರ್ ಮಾಡುವವರೇ ಎಚ್ಚರ.. ಅಮೆಜಾನ್‌ ಪಾರ್ಸೆಲ್ ನೋಡಿ ಗ್ರಾಹಕ ಶಾಕ್!

author-image
Veena Gangani
Updated On
ಆನ್​ಲೈನ್​ನಲ್ಲಿ ಆರ್ಡರ್ ಮಾಡುವವರೇ ಎಚ್ಚರ.. ಅಮೆಜಾನ್‌ ಪಾರ್ಸೆಲ್ ನೋಡಿ ಗ್ರಾಹಕ ಶಾಕ್!
Advertisment
  • ಆನ್​ಲೈನ್​ನಲ್ಲಿ ಆರ್ಡರ್ ಮಾಡುವವರೇ ಈ ಸ್ಟೋರಿ ಓದಿ!
  • ಪ್ಯಾಕ್​ ಅನ್‌ಬಾಕ್ಸಿಂಗ್ ಮಾಡುತ್ತಿದ್ದಂತೆ ಗ್ರಾಹಕ ಫುಲ್​ ಶಾಕ್
  • ಗ್ರಾಹಕನ ಕೈ ಸೇರಿದ ಪಾತ್ರೆ ತೊಳೆಯುವ ಸೋಪು ಹಾಗೂ ಬ್ರಷ್

ತುಮಕೂರು: ಈಗಂತೂ ಎಲ್ಲವೂ ಆನ್‌ಲೈನ್‌ ಜಗತ್ತು. ಬೆಳಗ್ಗೆಯಿಂದ ರಾತ್ರಿ ಮಲಗೋವರೆಗೂ ಜನರು ಆನ್‌ಲೈನ್‌ನಲ್ಲೇ ಆರ್ಡರ್ ಮಾಡ್ತಾ ಇರುತ್ತಾರೆ. ಅಂತವರೆಲ್ಲ ಈ ಸ್ಟೋರಿ ಓದಲೇಬೇಕು. ಗ್ರಾಹಕರನ್ನ ಸೆಳೆಯಲು ಹತ್ತಾರು ಕಂಪನಿಗಳು ರಿಯಾಯಿತಿ ದರದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಆಹ್ವಾನ ಕೊಡುತ್ತವೆ. ಆನ್‌ಲೈನ್ ಶಾಪಿಂಗ್ ಮಾಡೋರು ಅದೆಷ್ಟು ಹುಷಾರಾಗಿದ್ದರೂ ಕಡಿಮೆಯೇ.

ಇದನ್ನೂ ಓದಿ: ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..

publive-image

ಇಲ್ಲೊಬ್ಬ ಗ್ರಾಹಕ ಅಮೆಜಾನ್​ನಿಂದ ಫೋನ್​​ ಬುಕ್​ ಮಾಡಿ ವಂಚನೆಗೆ ಒಳಗಾಗಿದ್ದಾನೆ. ಈ ಘಟನೆ ನಡೆದಿದ್ದು, ತುರುವೇಕೆರೆ ಪಟ್ಟಣದ ಸರಸ್ವತಿಪುರಂನಲ್ಲಿ. ಗ್ರಾಹಕರೊಬ್ಬರು ಅಮೆಜಾನ್ ಕಂಪನಿಯ ಆಪ್​ನಿಂದ 32 ಸಾವಿರ ಬೆಲೆ ಬಾಳುವ ವಿವೊ v50 ಮೊಬೈಲ್ ಬುಕ್​ ಮಾಡಿದ್ದಾರೆ. ನಂತರ ಆನ್​ಲೈನ್​ನಲ್ಲಿಯೇ ಹಣವನ್ನು ಪಾವತಿಸಿದ್ದಾರೆ. ಬುಕ್​ ಮಾಡಿದ 3 ದಿನಗಳ ನಂತರ ಕೊರಿಯರ್ ಬಾಯ್ ಗ್ರಾಹಕರರಿಗೆ ಪ್ಯಾಕ್ ಮಾಡಿದ ಪಾರ್ಸೆಲ್ ನೀಡಿದ್ದಾರೆ. ಗ್ರಾಹಕರು ಕೊರಿಯರ್​ ಬಾಯ್​ನಿಂದಲೇ ಪಾರ್ಸಲ್ ಓಪನ್​ ಮಾಡಿಸಿದ್ದಾರೆ.

publive-image

ಕೊರಿಯರ್​ ಬಾಯ್ ಪ್ಯಾಕ್​ ಅನ್ನು ಓಪನ್​ ಮಾಡುತ್ತಿದ್ದಂತೆ ಗ್ರಾಹಕ ಫುಲ್​ ಶಾಕ್​ ಆಗಿದ್ದಾರೆ. ಆಗ ಕೊರಿಯರ್​ನಲ್ಲಿ ಬಂದಿದ್ದು ಮೊಬೈಲ್ ಅಲ್ಲ, ಬದಲಾಗಿ ಪಾತ್ರೆ ತೊಳೆಯುವ 4 ಸೋಪುಗಳು ಮತ್ತು ಒಂದು ಬ್ರಷ್ ಬಂದಿದೆ. ನೋಡುತ್ತಿದ್ದಂತೆ ಗ್ರಾಹಕ ಸೇರಿದಂತೆ ಅಲ್ಲಿಂದ ಎಲ್ಲರೂ ಫುಲ್ ಶಾಕ್ ಆಗಿದ್ದಾರೆ. ಅಲ್ಲದೇ ಇತರೆ ಗ್ರಾಹಕರು ಎಚ್ಚೇತ್ತುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment