newsfirstkannada.com

ಹೃದಯ ವಿದ್ರಾವಕ ಕೃತ್ಯ; ಅನ್ಯಕೋವಿನ ಯುವಕನ ಜೊತೆ ಪ್ರೀತಿ.. ತಾಯಿ, ತಂಗಿಯನ್ನ ಕೆರೆಗೆ ತಳ್ಳಿದ ರಾಕ್ಷಸ

Share :

Published January 24, 2024 at 11:33am

Update January 24, 2024 at 11:40am

  ಪ್ರೀತಿ ವಿಚಾರದಲ್ಲಿ ಅಣ್ಣ- ತಂಗಿಯ ನಡುವೆ ವೈಮನಸ್ಸು ಬೆಳೆದಿತ್ತು

  ತಾಯಿ, ಮಗಳನ್ನು ಬೈಕ್​ನಲ್ಲಿ​ ಕೆರೆ ಬಳಿ ಕರೆದುಕೊಂಡು ಹೋಗಿದ್ದ

  ಸಹೋದರಿಯ ಪ್ರೀತಿಗೆ ವಿರೋಧ ವ್ಯಕ್ತಪಡಿಸಿ ಕೆರೆಗೆ ತಳ್ಳಿದ ಮಗ

ಮೈಸೂರು: ಅನ್ಯಕೋಮಿನ ಯುವಕನನ್ನ ಪ್ರೀತಿಸಿದ್ದಕ್ಕೆ ಕೋಪಗೊಂಡ ಸಹೋದರ ತಂಗಿ ಹಾಗೂ ತನ್ನ ತಾಯಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.

ಮಗಳು ಧನುಶ್ರೀ (19), ತಾಯಿ ಅನಿತಾ (43) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದವರು. ಮಗ ನಿತಿನ್​​ನಿಂದ ಈ ಕೃತ್ಯ ನಡೆದಿದೆ. ಸಹೋದರಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಸಹೋದರನಿಗೆ ಗೊತ್ತಾಗಿ ತಿಳಿ ಹೇಳಿದ್ದನು. ಬಳಿಕ ಇಬ್ಬರ ನಡುವೆಯು ವೈಮನಸ್ಸು ಮೂಡಿತ್ತು. ಬಳಿಕ ತಂಗಿ ಮತ್ತು ತಾಯಿಯನ್ನು ಬೈಕ್​ ಮೂಲಕ ಕೆರೆ ಬಳಿಗೆ ಕರೆದುಕೊಂಡು ಹೋಗಿದ್ದಾನೆ. ಆ ಬಳಿಕ ಮೊದಲು ಕೆರೆಯಲ್ಲಿ ತಂಗಿಯನ್ನು ತಳ್ಳಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ ತಕ್ಷಣ ಮಗಳನ್ನು ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ತಾಯಿಯನ್ನು ಕೂಡ ಕೆರೆಗೆ ತಳ್ಳಿದ್ದಾನೆ.

ಕೆರೆ ನೀರಿನಲ್ಲಿ ಬಿದ್ದ ತಾಯಿ, ಮಗಳು ಇಬ್ಬರು ಮೃತಪಟ್ಟಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯ ವಿದ್ರಾವಕ ಕೃತ್ಯ; ಅನ್ಯಕೋವಿನ ಯುವಕನ ಜೊತೆ ಪ್ರೀತಿ.. ತಾಯಿ, ತಂಗಿಯನ್ನ ಕೆರೆಗೆ ತಳ್ಳಿದ ರಾಕ್ಷಸ

https://newsfirstlive.com/wp-content/uploads/2024/01/MYS_MURDRE.jpg

Load More