newsfirstkannada.com

ಶೇಮ್‌.. ಶೇಮ್‌.. ಗಂಡನ ಜೊತೆ ಬೈಕ್ ಟೂರ್ ಮಾಡ್ತಿದ್ದ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Share :

Published March 2, 2024 at 8:53pm

Update March 2, 2024 at 9:01pm

  ಬೈಕ್ ಮೂಲಕ ಭಾರತದ ಪ್ರವಾಸ ಕೈಗೊಂಡ ಸ್ಪಾನಿಷ್ ದೇಶದ ದಂಪತಿ

  ದರೋಡೆ ಮಾಡುವ ಜೊತೆಗೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

  ಕಾಮುಕರಿಂದ ತಪ್ಪಿಸಿಕೊಂಡ ವಿದೇಶಿ ಜೋಡಿಯಿಂದ ನ್ಯಾಯಕ್ಕೆ ಒತ್ತಾಯ

ನವದೆಹಲಿ: ಅತಿಥಿ ದೇವೋ ಭವ ಅನ್ನೋದು ನಮ್ಮ ಸಂಸ್ಕೃತಿ ಹಾಗೂ ಪರಂಪರೆ. ಆದರೆ ಜಾರ್ಖಂಡ್ ರಾಜ್ಯದ ದುಮ್ಕಾದಲ್ಲಿ ಅಮಾನವೀಯ, ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. ಗಂಡನ ಜೊತೆ ಬೈಕ್ ಟೂರು ಮಾಡುತ್ತಿದ್ದ ಸ್ಪಾನಿಷ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಇಡೀ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. 7 ಮಂದಿ ಕಾಮುಕರು ಈ ಕೃತ್ಯ ಎಸಗಿದ್ದು ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಲಾಗುತ್ತಿದೆ.

ಸ್ಪಾನಿಷ್ ಮೂಲದ ದಂಪತಿ ಬೈಕ್ ಮೂಲಕ ಭಾರತದ ಪ್ರವಾಸ ಕೈಗೊಂಡಿದ್ದರು. ಜಾರ್ಖಂಡ್‌ನ ದುಮ್ಕಾಗೆ ಬಂದಾಗ ಮಧ್ಯರಾತ್ರಿ ದುಷ್ಕರ್ಮಿಗಳ ತಂಡ ತಡೆದಿದೆ. ನೀವು ಇಲ್ಲೇ ಟೆಂಟ್‌ನಲ್ಲಿ ಈ ರಾತ್ರಿ ಕಳೆಯಬೇಕು ಎಂದು ಒತ್ತಾಯಿಸಿ ದಾಳಿ ಮಾಡಿದೆ. ದರೋಡೆ ಮಾಡುವ ಜೊತೆಗೆ ಗಂಡನ ಜೊತೆಗಿದ್ದ ವಿದೇಶಿ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಿದ್ದಾರೆ.

ಹೀನ ಕೃತ್ಯದ ಬಳಿಕ ದುರುಳರಿಂದ ತಪ್ಪಿಸಿಕೊಂಡ ಸ್ಪಾನಿಷ್ ದಂಪತಿ ಆಸ್ಪತ್ರೆಯನ್ನು ಹುಡುಕಿಕೊಂಡು ಹೋಗಿದ್ದಾರೆ. ಅರ್ಧ ಇಂಗ್ಲೀಷ್ ಹಾಗೂ ಅರ್ಧ ಸ್ಪಾನಿಷ್ ಮಾತಾಡುತ್ತಿದ್ದ ಇವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರೋ ವಿಷಯ ಗೊತ್ತಾಗಿದೆ.

ಚಿಕಿತ್ಸೆ ಪಡೆಯುತ್ತಿದ್ದ ಸ್ಪಾನಿಷ್ ದಂಪತಿಯಲ್ಲಿ ಆಸ್ಪತ್ರೆಯಿಂದಲೇ ನ್ಯಾಯಕ್ಕಾಗಿ ವಿಡಿಯೋ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದಿರುವ ಮಹಿಳೆ ಹಾಗೂ ಆಕೆಯ ಪತಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಜಾರ್ಖಂಡ್ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶೇಮ್‌.. ಶೇಮ್‌.. ಗಂಡನ ಜೊತೆ ಬೈಕ್ ಟೂರ್ ಮಾಡ್ತಿದ್ದ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

https://newsfirstlive.com/wp-content/uploads/2024/03/Spanish-Woman-Rape-Case.jpg

Load More