Advertisment

‘ರೈತನ ಮದ್ವೆ ಆದ್ರೆ ರಾಣಿ ಹಂಗೇ ನೋಡ್ಕೋತೀವಿ’.. ಸಿಲಿಕಾನ್‌ ಸಿಟಿ ಹೆಣ್ಮಕ್ಕಳಿಗೆ ಹೊಸ ಆಫರ್‌!

author-image
admin
Updated On
‘ರೈತನ ಮದ್ವೆ ಆದ್ರೆ ರಾಣಿ ಹಂಗೇ ನೋಡ್ಕೋತೀವಿ’.. ಸಿಲಿಕಾನ್‌ ಸಿಟಿ ಹೆಣ್ಮಕ್ಕಳಿಗೆ ಹೊಸ ಆಫರ್‌!
Advertisment
  • ವಯಸ್ಸಾದ್ರೂ ಆಗದ ಮದುವೆ.. ಬ್ಯಾಚುಲರ್ ಲೈಫ್​ ಸಾಕಪ್ಪ!
  • ಮದುವೆ ಆಗಲು ಹೆಣ್ಣು ಕೊಡಿ ಎಂದು ಪೋಸ್ಟರ್​ ಅಭಿಯಾನ
  • ಆಲ್ಕೋಹಾಲ್​ ಮಾರೋನಿಗೆ ಕ್ಯೂ, ಹಾಲು ಮಾರೋನಿಗ್ಯಾಕಿಲ್ಲ?

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತಾರೆ. ಆದ್ರೆ ಆ ನಿಶ್ಚಯದ ಖಾತರಿ ಇನ್ನೂ ಆಗದೇ ಇರೋದು ಒಂದಷ್ಟು ಯುವಕರನ್ನ ಕಾಡಿ ಕಂಗೆಡಿಸಿ ಬಿಟ್ಟಿದೆ. ನಮ್ಮ ಮನೆಯ ದೀಪ ಬೆಳಗಿಸೋಕೆ ಒಬ್ಬಳು ಸೊಸೆ ಕರುಣಿಸಪ್ಪಾ ಅಂತಾ ಗಲ್ಲಿ, ಗಲ್ಲಿಯಲ್ಲಿ ಪೋಸ್ಟರ್​ ಹಿಡಿದು ಅಭಿಯಾನ ಮಾಡಿದ್ದಾರೆ.

Advertisment

ಇದನ್ನೂ ಓದಿ: ‘ನಟ ದರ್ಶನ್​ ಮನೆಗೆ ಬಂದ್ರೆ ಊಟ ಹಾಕ್ತೀವಿ’- ರೇಣುಕಾಸ್ವಾಮಿ ತಂದೆ ಉದಾರದ ಮಾತು 

ಇಲ್ಲಿರುವ ಒಬ್ಬೊಬ್ಬರದ್ದು ಒಂದೊಂದು ಕಥೆ.. ಅಯ್ಯೋ ಹೆಣ್ಣು ಮಕ್ಳಾ.. ಐಟಿಲೀ 14 ಅವರ್​ ಕೆಲಸ ಮಾಡ್ಬೇಡಿ.. ಬನ್ರಿ.. ನಮ್​ ತೋಟದಲ್ಲಿ ನಾಲ್ಕು ಅವರ್​ ದುಡಿರೀ ಸಾಕು. ರಾಣಿ ಹಂಗೇ ನೋಡ್ಕೋತೀವಿ ಅಂತಾವ್ರೇ ಈ ಗಂಡು ಮಕ್ಕಳು.

publive-image

ವಯಸ್ಸಾದ್ರೂ ಆಗದ ಮದುವೆ.. ಬ್ಯಾಚುಲರ್ ಲೈಫ್​ ಸಾಕಪ್ಪ!
ಜಿಲ್ಲೆಯಿಂದ ಜಿಲ್ಲೆಗೂ ಅಲೆದ್ರೂ ರೈತೆರಿಗೆ ಸಿಗ್ತಿಲ್ಲ ಮನದರಸಿ!
ವಯಸ್ಸಾಯ್ತು.. ಮದುವೆ ಆಗಿಲ್ಲ ಅನ್ನೋ ಒಂದು ನೋವು ಕಾಡೋಕೆ ಶುರುವಾದ್ರೆ ಊಟ ಸೇರಲ್ಲ, ನಿದ್ದೆ ಬರಲ್ಲ, ದಿನ ಕಳೆಯಲ್ಲ. ಇದೇ ನೋವು, ಇದೇ ಹತಾಶೆ ನಮ್ಮ ರೈತರನ್ನ ಕಾಡೋಕೆ ಶುರುವಾಗಿದೆ. ಹೀಗಾಗಿ, ಸಿಟ್ಟಿಗೆದ್ದು ಬೀದಿಗಿಳಿದಿರುವ ಗಂಡು ಮಕ್ಕಳು ನಗರದ ಸಿಐಡಿ ಸರ್ಕಲ್‌ನಲ್ಲಿ ಮದುವೆಯಾಗಲು ಹೆಣ್ಣು ಕೊಡಿ ಅಂತಾ ಪೋಸ್ಟರ್​ ಹಿಡಿದು ಅಭಿಯಾನ ಮಾಡಿದ್ದಾರೆ.

Advertisment

publive-image

ಆಲ್ಕೋಹಾಲ್​ ಮಾರೋನಿಗೆ ಕ್ಯೂ, ಹಾಲು ಮಾರೋನಿಗ್ಯಾಕಿಲ್ಲ?
ಪ್ರತಿಭಟನೆಯಲ್ಲಿ ಮಾತನಾಡಿದ ಅನ್ನದಾತರು ತಮ್ಮ ಆಕ್ರೋಶವನ್ನ ಹೊರ ಹಾಕಿದ್ದಾರೆ. ಆಲ್ಕೋ ಹಾಲ್ ಮಾರಾಟ ಮಾಡೋರಿಗೆ ಹೆಣ್ಣು ಕೊಡಲು ಕ್ಯೂ ನಿಲ್ಲುತ್ತಾರೆ. ಹಾಲು ಉತ್ಪಾದಕರಿಗೆ ಮಾತ್ರ ಹಿಂದೇಟು ಹಾಕ್ತಾರೆ ಅಂತಾ ಆಕ್ರೋಶ ಹೊರಗೆಡವಿದ್ದಾರೆ. ಅದಲ್ಲದೇ, ಮಳೆ ಬೆಳೆ ಸಮಸ್ಯೆಯನ್ನ ನಾವು ಹೇಗೋ ಬಗೆಹರಿಸಿಕೊಳ್ತೀವಿ. ಆದ್ರೆ, ನಮ್​ ಪ್ರಸನಲ್ ಪ್ರಾಬ್ಲಂಗೆ​ ಪರಿಹಾರ ಸಿಗ್ತಿಲ್ಲ ಅಂತಾ ನ್ಯೂಸ್ ಫಸ್ಟ್​ ಮುಂದೆ ಅಳಲು ತೋಡಿಕೊಂಡಿದ್ದಾರೆ.

ತುರುವೇಕೆರೆಯವ್ರು ರಾಯಚೂರಿಗೆ ಹೋಗಿ ಹೆಣ್ಣು ತರುತ್ತಿದ್ದಾರೆ. ಅಲ್ಲಿ ಕೂಡ ದೊಡ್ಡ ದಂಧೆ ಮಾಡುತ್ತಿದ್ದಾರೆ. 3-4 ಲಕ್ಷ ದುಡ್ಡು ತಗೊಂಡು ಮದುವೆ ಮಾಡುತ್ತಾರೆ. ಕೊನೆಗೆ ಇಲ್ಲಿಂದ ಹೆಣ್ಣು ಮಕ್ಕಳು, ಅವರ ಮನೆ ಆಸ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. 20 ಜನ ಹುಡುಗಿಯರನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ. ಇದರಿಂದ ರೈತರ ಮಕ್ಕಳು ಡಿಪ್ರೆಷನ್‌ಗೆ ಹೋಗಿ ಕೆಟ್ಟ ಚಟಗಳಿಗೆ ದಾಸರಾಗುತ್ತಿದ್ದಾರೆ.
ಶಿವು, ಯುವ ರೈತ

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ದರ್ಶನ್​ ಪತ್ನಿ.. ಗಂಡನಿಗಾಗಿ ನವ ಚಂಡಿಕಾಯಾಗ! 

Advertisment

ದೇಶಕ್ಕೆಲ್ಲ ಅನ್ನ ನೀಡೋ ಅನ್ನದಾತನ ಮಕ್ಕಳು ಮದುವೆ ಅನ್ನೋ ಬಾಂಧವ್ಯದ ಬಂಧನಕ್ಕಾಗಿ ಬೀದಿ ಬೀದಿ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿರೋದು ನಿಜಕ್ಕೂ ವಿಪರ್ಯಾಸ. ಅತ್ತ, ಹೆಣ್ಣು ಹೆತ್ತವರ ಮನವೊಲಿಸಿ ರೈತರ ಮಕ್ಕಳಿಗೆ ಕಂಕಣ ಭಾಗ್ಯವನ್ನ ಕರುಣಿಸಿ ಸಾರ್ಥಕ ಜೀವನದ ಸಂತೋಷವನ್ನ ದೇವರೇ ಯುವಕರಿಗೆ ಕರುಣಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment