1 ರಾತ್ರಿ ಕಳೆಯಲು ₹1 ಲಕ್ಷ.. ಮಹಾ ಕುಂಭಮೇಳದಲ್ಲಿ ಯಾವುದಕ್ಕೆ ಎಷ್ಟು ದುಡ್ಡು ಗೊತ್ತಾ?

author-image
Gopal Kulkarni
Updated On
1 ರಾತ್ರಿ ಕಳೆಯಲು ₹1 ಲಕ್ಷ.. ಮಹಾ ಕುಂಭಮೇಳದಲ್ಲಿ ಯಾವುದಕ್ಕೆ ಎಷ್ಟು ದುಡ್ಡು ಗೊತ್ತಾ?
Advertisment
  • ಕುಂಭಮೇಳಕ್ಕೆ ಹೋಗುವ ಭಕ್ತಾದಿಗಳಿಗೆ ಬೆಲೆ ಏರಿಕೆಯ ಬರೆ
  • ಕುಂಭಮೇಳಕ್ಕೆ ಹೋಗುವ ಭಕ್ತಾದಿಗಳಿಗೆ ಬೆಲೆ ಏರಿಕೆಯ ಬರೆ
  • ವಿಮಾನಯಾನ ಸಂಸ್ಥೆಗಳಿಂದಲೂ ಹಣ ವಸೂಲಿ ಕಾರ್ಯಕ್ರಮ

ಮಹಾಕುಂಭಮೇಳ 2025 ಅದ್ಧೂರಿ ಆರಂಭ ಪಡೆದಿದೆ. ಮಕರ ಸಂಕ್ರಾಂತಿಯ ಮೊದಲ ದಿನವೇ ಸುಮಾರು 1.75 ಕೋಟಿ ಜನರು ಅಮೃತ ಸ್ನಾನ ಮಾಡಿ ಪಾವನರಾಗಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಭಕ್ತಾದಿಗಳ ಸಾಗರವೇ ಹರಿದು ಬಂದಿದೆ. ಈ ಬಾರಿ ಒಟ್ಟು 45 ಕೋಟಿ ಭಕ್ತಾದಿಗಳು ಪ್ರಯಾಗರಾಜ್​ಗೆ ಭೇಟಿ ಕೊಡುವ ಎಲ್ಲಾ ಸಾಧ್ಯತೆಗಳು ಇವೆ. ಗಂಗೆಯಲ್ಲಿ ಮಿಂದೆಳಲು ಅರ್ಧ ಭಾರತವೇ ಪ್ರಯಾಗರಾಜ್​ಗೆ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಉತ್ತರಪ್ರದೇಶದ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿವೆ. ಇನ್ನೂ ಆರು ವಾರಗಳ ಕಾಲ ಈ ಮಹಾಸಂಭ್ರಮ ಜಾರಿಯಲ್ಲಿರಲಿದೆ. ಇದರ ನಡುವೆ ಮಹಾಕುಂಭಮೇಳಕ್ಕೆ ಹೋಗಿ ಬರಲು ಎಲ್ಲಾ ದುಬಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

publive-image

ಅದರಲ್ಲೂ ಜನರು ತಂಗಲು ಬೇಕಾದ ವ್ಯವಸ್ಥೆಗಳೇ ಅತಿ ದುಬಾರಿ ಎಂದು ಹೇಳಲಾಗುತ್ತಿದೆ. ಒಂದು ರಾತ್ರಿ ಉಳಿಯಲು ನಾವು ಟೆಂಟ್ ಪಡೆಯಬೇಕಾದಲ್ಲಿ 1500 ರೂಪಾಯಿಯಿಂದ ಶುರುವಾಗಲಿದೆ. ಐಆರ್​ಸಿಟಿಸಿ ಟೆಂಟ್​ಗಳು 20 ಸಾವಿರ ರೂಪಾಯಿಯಿಂದ ಆರಂಭವಾಗುತ್ತವೆ. ಇನ್ನು ಅಲ್ಟ್ರಾ ಲಕ್ಷುರಿ ಟೆಂಟ್​ಗಳ ಬೆಲೆಯನ್ನಂತೂ ಕೇಳುವ ಹಾಗೆಯೇ ಇಲ್ಲ. ಒಂದು ರಾತ್ರಿ ಕಳೆಯಲು ಇಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿ ನೀಡಬೇಕಾಗುತ್ತದೆ.

ಇದನ್ನೂ ಓದಿ:ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವ; ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ..

ಈಗಾಗಲೇ ಅಲ್ಟಿಮೇಟ್ ಟ್ರಾವೆಲಿಂಗ್ ಕ್ಯಾಂಪ್ ಸುಮಾರು 40 ಟೆಂಟ್​ಗಳನ್ನು ಪ್ರಯಾಗರಾಜ್​ದ ಸಂಗಮ ನಿವಾಸದ ಬಳಿಯಲ್ಲಿ ನಿರ್ಮಾಣ ಮಾಡಿವೆ. ಮಹಾಕುಂಭಮೇಳದಲ್ಲಿ ಇದು ಮೂರನೇ ಬಾರಿಗೆ ಇಂತಹದೊಂದು ವ್ಯವಸ್ಥೆಯನ್ನು ಈ ಸಂಸ್ಥೆ ಮಾಡಿದೆ. ಇಲ್ಲಿ ಹೆಚ್ಚು ಕಡಿಮೆ ತಂಗುವವರು ಎನ್​ಆರ್​ಐ ಗಳು, ಬಾಲಿವುಡ್​ ಸ್ಟಾರ್​ಗಳು, ಹೆಚ್​ಎನ್​ಐ, ದೊಡ್ಡ ದೊಡ್ಡ ಕಂಪನಿಯ ಸಿಇಒಗಳು ಇಂತವರು ಈ ರೀತಿಯ ಟೆಂಟ್​ಗಳಲ್ಲಿ ವಾಸ ಮಾಡುತ್ತಾರೆ. ಈ ಟೆಂಟ್​ಗಳ ಆರಂಭಿಕ ಬೆಲೆಯೇ ಒಂದು ರಾತ್ರಿಗೆ 70 ಸಾವಿರ ರೂಪಾಯಿಯಿಂದ 1 ಲಕ್ಷದವರೆಗೂ ಇದೆ. ಈ ಐಷಾರಾಮಿ ಟೆಂಟ್​ಗಳು ಒಟ್ಟು 3 ಎಕರೆ ವಿಸ್ತಾರ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಒಂದೊಂದು ಟೆಂಟ್​ 400 ರಿಂದ 500 ಸ್ಕೇರ್​ಫೀಟ್​ನಷ್ಟು ಜಾಗದಲ್ಲಿ ನಿರ್ಮಾಣಗೊಂಡಿವೆ.

publive-image

ಇದು ಐಷಾರಾಮಿ ಹಾಗೂ ಸಾಧಾರಣ ಟೆಂಟ್​ಗಳ ಕಥೆಯಾದರೆ ಕ್ಯಾಬ್ ಆಟೋಗಳು ಕೂಡ ಭಕ್ತಾದಿಗಳಿಂದ ಬೇಕಾಬಿಟ್ಟು ಹಣವನ್ನು ವಸೂಲಿ ಮಾಡುತ್ತಿವೆ. ಏರ್​ಪೋರ್ಟ್​ನಿಂದ ಗಂಗಾ ತೀರಕ್ಕೆ ಸುಮಾರು 3 ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಓಲಾಕ್ಯಾಬ್ ಆ್ಯಪ್​ನಲ್ಲಿ 500 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ಆದ್ರೆ ಕ್ಯಾಬ್ ಚಾಲಕರು 1500 ರೂಪಾಯಿಗೆ ಬೇಡಿಕೆ ಇಡುತ್ತಿದ್ದಾರೆ. ಇನ್ನು ಸಾಮಾನ್ಯ ದಿನಗಳಲ್ಲಿ ಲಾಡ್ಜ್​, ಹೋಟೆಲ್​ಗಳ ದರ 1 ಸಾವಿರ ರೂಪಾಯಿ ಇರುತ್ತದೆ. ಆದ್ರೆ ಕುಂಭಮೇಳದ ಹಿನ್ನೆಲೆಯಲ್ಲಿ ಹೊರಗಿನಿಂದ ಬಂದ ಭಕ್ತಾದಿಗಳು ಹಾಗೂ ಪ್ರವಾಸಿಗರಿಂದ ದಿನಕ್ಕೆ 3 ರಿಂದ 4 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ.

ಇದನ್ನೂ ಓದಿ:ರಷ್ಯಾದಿಂದ ಮಹಾಕುಂಭಮೇಳಕ್ಕೆ ಬಂದ 7 ಅಡಿ ಎತ್ತರದ ಮಸ್ಕ್ಯುಲರ್ ಬಾಬಾ; ಇವರ ಲೈಫ್ ಜರ್ನಿಯೇ ರೋಚಕ!

publive-image

ಇತ್ತ ವಿಮಾನಯಾನ ಕಂಪನಿಗಳು ಕೂಡ ಭಕ್ತಾದಿಗಳಿಂದ ಹಣ ವಸೂಲಿ ಮಾಡುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಾಮಾನ್ಯ ದಿನಗಳಿಗಿಂತ ಈಗ ಶೇಕಡಾ162 ರಷ್ಟು ಬೆಲೆಗಳನ್ನು ಏರಿಸಿಕೊಂಡು ಕುಳಿತಿವೆ. ಮುಂಬೈನಿಂದ ಪ್ರಯಾಗರಾಜ್​ಗೆ ಹೊರಡುವ ವಿಮಾನಗಳ ಟಿಕೆಟ್​ದರದಲ್ಲಿ ಸುಮಾರು 13ಪರ್ಸೆಂಟ್ ಏರಿಕೆಯಾಗಿದೆ. ದೆಹಲಿಯಿಂದ ಪ್ರಯಾಗರಾಜ್​ಗೆ ಹೊರಡುವ ವಿಮಾನಗಳ ಟಿಕೆಟ್​ ಬೆಲೆ ಶೇಕಡಾ 21 ರಷ್ಟು ಏರಿಕೆಯಾಗಿದೆ 5 ರಿಂದ 6 ಸಾವಿರ ರೂಪಾಯಿಗೆ ದೆಹಲಿಯಿಂದ ಪ್ರಯಾಗರಾಜ್ ತಲುಪುತ್ತಿದ್ದ ವಿಮಾನಗಳು ಈಗ ಬೆಲೆ ಏರಿಕೆ ಮಾಡಿಕೊಂಡಿವೆ. ದೆಹಲಿಯಿಂದ ಪ್ರಯಾಗರಾಜ್​​ಗೆ ಹೋಗಲು ಇಂಡಿಗೋ 17497 ರೂಪಾಯಿ ಬೆಲೆ ನಿಗದಿದೆ ಮಾಡಿದೆ. ಏರ್​​ ಇಂಡಿಯಾ 23727 ರೂಪಾಯಿ ಮತ್ತು ಸ್ಪೈಸ್ ಜೆಟ್​ 26215 ರೂಪಾಯಿ ಬೆಲೆ ನಿಗದಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment