newsfirstkannada.com

×

ದೇವ್ರೇ ಮದುವೆಗೆ ಹೆಣ್ಣು ಕರುಣಿಸಪ್ಪಾ.. ವಿಚಿತ್ರ ಜಾತ್ರೆಯಂದು ದೇವರ ಮೊರೆ ಹೋದ 30 ದಾಟಿದ ಯುವಕರು

Share :

Published March 21, 2024 at 6:48am

Update March 21, 2024 at 6:49am

    ಕಾಫಿನಾಡು ಚಿಕ್ಕಮಗಳೂರಿನಲ್ಲೊಂದು ವಿಚಿತ್ರ ಜಾತ್ರೆ

    ಮದುವೆಗೆ ದೇವರ ಮೊರೆ ಹೋದ 30 ದಾಟಿದ 30ಕ್ಕೂ ಅಧಿಕ ಯುವಕರು

    ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ; ಆಮೇಲೆ ಏನ್ಮಾಡಿದ್ರು ಗೊತ್ತಾ?

ಹೌದು.. ಇದು ಅಚ್ಚರಿಯಾದ್ರೂ ಸತ್ಯವಾದ ಸಂಗತಿ. ಚಿಕ್ಕಮಗಳೂರು ಜಿಲ್ಲೆಯ ಬ್ಯಾಡಿಗೆರೆ ಗ್ರಾಮದಲ್ಲಿ 30ಕ್ಕೂ ಅಧಿಕ ವರ್ಷವಾದ 30 ಯುವಕರು ಹೆಣ್ಣು ಸಿಗಲೆಂದು, ಚೀಟಿಯಲ್ಲಿ ಹೆಸರು ಬರೆದು ದೇವರ ಹುಂಡಿಗೆ ಹಾಕಿದ್ದಾರೆ.

ಚಿಕ್ಕಮಗಳೂರಿನ ಬ್ಯಾಡಿಗೆರೆ ಗ್ರಾಮದಲ್ಲಿ ವಿಚಿತ್ರ ಜಾತ್ರೆ

ಎನ್.ಆರ್.ಪುರ ತಾಲೂಕಿನ ಬ್ಯಾಡಿಗೆರೆ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಜಾತ್ರಾ ಮಹೋತ್ಸವ ನಡೆಯಿತು. ಈ ವೇಳೆ ಯುವಕರು ಮದುವೆಯಾಗಲೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪನ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸುಮಾರು 30ಕ್ಕೂ ಹೆಚ್ಚು ಬ್ರಹ್ಮಚಾರಿ ಯುವಕರ ಹೆಸರುಗಳನ್ನ ಪಟ್ಟಿ ಮಾಡಿ, ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ.

ಸುಗ್ಗಿ-ಜಾತ್ರಾ ಮಹೋತ್ಸವದ 4ನೇ ದಿನ ಈ ಕಾರ್ಯ ಮಾಡಲಾಗಿದೆ. ಎಷ್ಟೇ ಹುಡುಕಿದರೂ ಹುಡುಗಿ ಸಿಗುತ್ತಿಲ್ಲ. ವಯಸ್ಸು ಹೆಚ್ಚಾಗುತ್ತಿದೆ. ನಮ್ಮೆಲ್ಲರಿಗೂ ಮದುವೆ ಭಾಗ್ಯ ಕರುಣಿಸೋ ದೇವ ಎಂದು ಯುವಕರು ಬೇಡಿಕೊಂಡಿದ್ದಾರೆ. ಒಂದು ವೇಳೆ ನಮಗೆ ಹುಡುಗಿ ಸಿಗದಿದ್ದರೆ ಮಠ ಸೇರಿಕೊಳ್ಳುವುದಾಗಿ ಪರದೇಶಪ್ಪ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿಯವರಿಗೆ ಹೇಳಿ ಯುವಕರು ಅರ್ಚಕರಿಗೆ ನಗೆಚಟಾಕಿ ಹಾರಿಸಿದ್ದಾರೆ.

ಅದೇನೆ ಇರಲಿ.. ಮದುವೆ ಆಗದ ಯುವಕರು ಈ ರೀತಿ ಬೇಡಿಕೊಂಡ್ರೆ, ಮದುವೆ ಆಗುತ್ತೆ ಅನ್ನೋ ನಂಬಿಕೆ ಈ ಭಾಗದಲ್ಲಿದೆ. ಆದಷ್ಟು ಬೇಗ ಆ ದೇವರು ಯುವಕರ ಬೇಡಿಕೆಯನ್ನು ಈಡೇರಿಸಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವ್ರೇ ಮದುವೆಗೆ ಹೆಣ್ಣು ಕರುಣಿಸಪ್ಪಾ.. ವಿಚಿತ್ರ ಜಾತ್ರೆಯಂದು ದೇವರ ಮೊರೆ ಹೋದ 30 ದಾಟಿದ ಯುವಕರು

https://newsfirstlive.com/wp-content/uploads/2024/03/Chikamagaluru.jpg

Load More