/newsfirstlive-kannada/media/post_attachments/wp-content/uploads/2025/03/ramya5.jpg)
ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ನಿಂದಿಸುತ್ತಿರುವ ಸಂಬಂಧ ಮಹಿಳಾ ಆಯೋಗ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ.. ಸುಮೋಟೋ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.
ಮಾನ ಹಾನಿ ಆಗುವಂತಹ ಅವಾಚ್ಯ ಶಬ್ದ ಪ್ರಯೋಗ ಮಾಡಲಾಗಿದೆ. ಹೇಗೆ ಬೇಕೋ ಹಾಗೆ ಕಾಮೆಂಟ್ ಮಾಡೋದನ್ನು ನಿಲ್ಲಿಸಬೇಕು. ಕಾಮೆಂಟ್ಸ್ ಮಾಡಿರೋರಿಗೆ 3 ರಿಂದ 7 ವರ್ಷ ಜೈಲು ಆಗಬಹುದು. ಹೆಣ್ಣು ಮಗಳ ಮೇಲೆ ಕೆಟ್ಟ ಕೆಟ್ಟ ಕಾಮೆಂಟ್ ಆಗಿದೆ. ಹೆಣ್ಣು ಮಗಳ ಮಾನಸಿಕ ಕೊಲ್ಲುವ ಯತ್ನ ನಡೆದಿದೆ. ಪ್ರಕರಣ ಸಂಬಂಧ ನ್ಯಾಯ ಕೊಡೋದು ನ್ಯಾಯಾಲಯ. ಒಳ್ಳೆಯ ರೀತಿಯಲ್ಲಿ ಕಾಮೆಂಟ್ ಮಾಡಬಹುದು. ಕೆಟ್ಟ ಕೆಟ್ಟದಾಗಿ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕಬಾರದು. ಮಹಿಳಾ ಆಯೋಗದ ವತಿಯಿಂದ ಸುಮೊಟೊ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಕ್ಷಿತಾ ಬೆನ್ನಲ್ಲೇ ವಿಜಯಲಕ್ಷ್ಮೀ ಕೌಂಟರ್..? ಮಾರ್ಮಿಕ ಪೋಸ್ಟ್ ಮಾಡಿದ ದರ್ಶನ್ ಪತ್ನಿ
ಸರ್ಕಾರ ಹೇಳಿದ್ದೇನು..?
ಮತ್ತೊಂದು ಕಡೆ ದರ್ಶನ್ ಫ್ಯಾನ್ಸ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿಕೆ ನೀಡಿದ್ದಾರೆ. ನಟಿ ರಮ್ಯಾ ಅವರಿಗೆ ಅಶ್ಲೀಲವಾಗಿ ನಿಂದಿಸುತ್ತಿರುವ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಪರಮೇಶ್ವರ್.. ದೂರು ಕೊಟ್ಟ ನಂತರ ಪೊಲೀಸರು ಕ್ರಮ ತಗೋತಾರೆ ಎಂದಿದ್ದಾರೆ.
ಮೊದಲು ರಮ್ಯಾ ಅವರು ದೂರು ಕೊಡಲಿ. ದೂರು ಕೊಟ್ಟ ನಂತರ ಪೊಲೀಸರು ಕ್ರಮ ತಗೋತಾರೆ. ನಮ್ಮಲ್ಲಿ ಕೆಲವು ಪ್ರಕರಣದಲ್ಲಿ ಸೂಮೋಟೋ ಕೇಸ್ ದಾಖಲಾಗುತ್ತದೆ. ಆ ಥರ ಏನಾದ್ರೂ ಅವಕಾಶ ಇದ್ದರೆ ಪೊಲೀಸರು ಪರಿಶೀಲನೆ ಮಾಡ್ತಾರೆ. ಆದ್ರೆ ರಮ್ಯಾ ಅವರು ದೂರು ಕೊಡಲಿ, ದೂರು ಕೊಟ್ಟರೆ ಕ್ರಮ ವಹಿಸಲಾಗುವುದು ಎಂದ ಗೃಹ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ದೇಶದಲ್ಲೇ ಬೆಳೆದ ಉಗ್ರರಿಂದ ಆಗಿರಬಹುದು ಎಂದ ಚಿದಂಬರಂ -ಸಂಸತ್ನಲ್ಲಿ ಇಂದು ಅಪರೇಷನ್ ಸಿಂಧೂರ್’ ಚರ್ಚೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ