/newsfirstlive-kannada/media/post_attachments/wp-content/uploads/2024/04/Dwarkish-Actor.jpg)
ಹಾಸ್ಯನಟ ದ್ವಾರಕೀಶ್ ಅವರಿಗೆ ಇಡೀ ಕನ್ನಡ ಚಿತ್ರರಂಗ ಕಣ್ಣೀರ ವಿದಾಯ ಹೇಳಿದೆ. ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ಹಲವಾರು ಸ್ಯಾಂಡಲ್‌ವುಡ್ ನಟ, ನಟಿಯರು ಆಗಮಿಸಿದ್ದು, ನೋವಿನಿಂದಲೇ ಅಂತಿಮ ನಮನ ಸಲ್ಲಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ದ್ವಾರಕೀಶ್ ಅವರ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ಸ್ಯಾಂಡಲ್‌ವುಡ್ ನಟರಾದ ಕಿಚ್ಚ ಸುದೀಪ್, ಧ್ರುವ ಸರ್ಜಾ, ಜಗ್ಗೇಶ್, ಶಿವರಾಜ್‌ಕುಮಾರ್, ಸಂಸದೆ ಸುಮಲತಾ ಅಂಬರೀಶ್, ನಟಿ ಶೃತಿ ಆಗಮಿಸಿದ್ದರು.
/newsfirstlive-kannada/media/post_attachments/wp-content/uploads/2024/04/Dwarkish-Actor-Shruthi.jpg)
ಇದನ್ನೂ ಓದಿ: ದ್ವಾರಕೀಶ್ ಅವರ​ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಅಗಲಿದ ನಟನಿಗೆ ಕಂಬನಿ
ದ್ವಾರಕೀಶ್ ಅವರಿಗೆ ಚಿತ್ರರಂಗದ ಹಲವಾರು ಮಂದಿ ಅಂತಿಮ ನಮನ ಸಲ್ಲಿಸಿದ ಬಳಿಕ ಅಗಲಿದೆ ಹಿರಿಯ ನಟನ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ. ಚಾಮರಾಜಪೇಟೆಯ ಟಿ.ಆರ್ ಮಿಲ್‌ನಲ್ಲಿ ದ್ವಾರಕೀಶ್ ಅವರ 5 ಮಕ್ಕಳಿಂದ ಅಂತಿಮ ವಿಧಿವಿಧಾನ ಮಾಡಲಾಗಿದೆ.
ದ್ವಾರಕೀಶ್ ಅವರ ಹಿರಿಯ ಪುತ್ರ ಸಂತೋಷ್ ಅವರು ತಂದೆಯ ಮೃತದೇಹಕ್ಕೆ ಅಗ್ನಿ ಸ್ಪರ್ಶ ನೆರವೇರಿಸಿದ್ದಾರೆ. ಇದೇ ವೇಳೆ ದ್ವಾರಕೀಶ್ ಪುತ್ರರಾದ ಗಿರೀಶ್, ಯೋಗೀಶ್, ಸುಖೇಶ್, ಅಭಿಲಾಷ್ ಕೂಡ ಇದ್ದರು. 5 ಪುತ್ರದಿಂದ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ.
ದ್ವಾರಕೀಶ್ ಅವರ ನಿಧನಕ್ಕೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ನಂತರ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ಕಾರ್ಯ ನೆರವೇರಿಸಲಾಯಿತು. ಅಂತ್ಯಕ್ರಿಯೆ ಸ್ಥಳದಲ್ಲಿರುವ ದ್ವಾರಕೀಶ್ ಎರಡನೇ ಪತ್ನಿ ಶೈಲಜಾ ಇದ್ದರು. ದ್ವಾರಕೀಶ್ ಅವರ ಅಂತ್ಯಕ್ರಿಯೆಯಲ್ಲಿ ನಟ ಶಶಿಕುಮಾರ್, ಚಿ.ಗುರುದತ್, ನಟಿ ಶೃತಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ನಿರ್ಮಾಪಕ ಕೆ.ಮಂಜು, ಸುಂದರ್ ರಾಜ್ ಸೇರಿ ಗಣ್ಯರು ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us