newsfirstkannada.com

ಹೆಂಡತಿಗೆ ‘ಪೋಲಿ’ ಮೆಸೇಜ್​ ಮಾಡ್ತಿದ್ದವನ ಕೊಲೆ ಮಾಡಿ ಪೊಲೀಸ್ ಸ್ಟೇಷನ್‌ಗೆ ಬಂದ ಪೂಜಾರಿ; ಆಗಿದ್ದೇನು?

Share :

Published April 23, 2024 at 2:36pm

Update April 23, 2024 at 2:41pm

  ಹನುಮ ಜಯಂತಿಯಂದೇ ಅನ್ಯಕೋಮಿನ ವ್ಯಕ್ತಿ ಮಾಡಿದ್ದೇನು?

  ನಡು ರಸ್ತೆ ಮಧ್ಯೆ ವ್ಯಕ್ತಿಯನ್ನ ಭೀಕರವಾಗಿ ಕೊಲೆ ಮಾಡಿದ ಪೂಜಾರಿ

  ಮೆಸೇಜ್ ಮಾಡುತ್ತಿದ್ದಾನೆಂದು ಹತ್ಯೆ ಮಾಡಿದನೇ ಗುಡಿ ಪೂಜಾರಿ?

ರಾಯಚೂರು: ತನ್ನ ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಾನೆಂದು ಅನ್ಯಕೋಮಿನ ವ್ಯಕ್ತಿಯೊಬ್ಬನನ್ನು ದೇವಾಲಯದ ಪೂಜಾರಿಯೇ ಭೀಕರವಾಗಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಘಟನೆಯು ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ.

ಬಳಗಾನೂರಿನ ಖಾದರಬಾಷಾ ಬಾಬುಸಾಬ (30) ಕೊಲೆಯಾದ ವ್ಯಕ್ತಿ. ಕೌತಾಳಂನ ಮಾರುತಿ ಎನ್ನುವ ವ್ಯಕ್ತಿಯ ಮೇಲೆ ಹತ್ಯೆ ಆರೋಪ ಮಾಡಲಾಗಿದೆ. ಆಂಜನೇಯನ ಗುಡಿ ಪೂಜಾರಿಯ ಪತ್ನಿ ಮೇಲೆ ಹನುಮ ಜಯಂತಿಯಂದೆ ಅನ್ಯಕೋಮಿನ ವ್ಯಕ್ತಿ ಕಣ್ಣು ಹಾಕಿದ್ದನು. ಅಲ್ಲದೇ ಮೆಸೇಜ್ ಕೂಡ ಮಾಡುತ್ತಿದ್ದನು. ಇದರಿಂದ ಕೋಪಗೊಂಡ ಗಂಡ ಬಳಗಾನೂರು-ತುಗ್ಗಲದಿನ್ನಿ ರಸ್ತೆ ಮಧ್ಯೆ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸ್ತಿರೋ SRH.. ಸೂಪರ್​ ಪವರ್​ ಬ್ಯಾಟಿಂಗ್​​ನ ಸಿಕ್ರೇಟ್​ ಏನು?

ಹತ್ಯೆ ಮಾಡಿದ ಬಳಿಕ ವ್ಯಕ್ತಿಯು ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಇನ್ನು ಕೊಲೆಯ ವೇಳೆ 6 ರಿಂದ 7 ಜನರು ಭಾಗಿಯಾಗಿರುವ ಅನುಮಾನವಿದೆ. ಆದರೆ ಓರ್ವ ಮಾತ್ರ ನಾನು ಹತ್ಯೆ ಮಾಡಿದ್ದು ಎಂದು ಶರಣಾಗಿದ್ದಾನೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿಗೆ ‘ಪೋಲಿ’ ಮೆಸೇಜ್​ ಮಾಡ್ತಿದ್ದವನ ಕೊಲೆ ಮಾಡಿ ಪೊಲೀಸ್ ಸ್ಟೇಷನ್‌ಗೆ ಬಂದ ಪೂಜಾರಿ; ಆಗಿದ್ದೇನು?

https://newsfirstlive.com/wp-content/uploads/2024/04/RCR_KHADAR_MURDER.jpg

Load More