/newsfirstlive-kannada/media/post_attachments/wp-content/uploads/2025/04/INDIGO.jpg)
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ (Kempegowda International Airport) ವಿಮಾನ ನಿಲ್ದಾಣದಲ್ಲಿ ಅನಾಹುತವೊಂದು ಸಂಭವಿಸಿದೆ. ನಿಂತಿದ್ದ ಇಂಡಿಗೋ ವಿಮಾನಕ್ಕೆ ( IndiGo aircraft) ಟೆಂಪೋ ಟ್ರಾವೆಲರ್ ಬಂದು (tempo traveller) ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್ ಭರ್ಜರಿ ಗಿಫ್ಟ್; ಮನ ಮಿಡಿಯುವ ಸ್ಟೋರಿ!
ನಿನ್ನೆ ಮಧ್ಯಾಹ್ನ 12.15 ರ ಸುಮಾರಿಗೆ ಪಾರ್ಕಿಂಗ್ ಬೇ (71 ಆಲ್ಫಾ) ಬಳಿಯ ಏರ್‌ಸೈಡ್‌ನಲ್ಲಿ ದುರ್ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಟೆಂಪೋ ಟ್ರಾವೆಲರ್ನ ಚಾಲಕ ನಿದ್ರೆಯ ಮಂಪರಿನಲ್ಲಿದ್ದ. ಚಾಲಕನ ಅರಿವಿಗೆ ಬಾರದೇ ಅಪಘಾತ ಆಗಿದೆ. ಇಂಡಿಗೊ A320 ವಿಮಾನದ ಕೆಳಭಾಗಕ್ಕೆ ಟ್ರಾವೆಲರ್ ಡಿಕ್ಕಿ ಆಗುತ್ತಿದ್ದಂತೆ ಚಾಲಕ ಎಚ್ಚೆತ್ತುಕೊಂಡಿದ್ದಾನೆ ಎಂದು ವರದಿಯಾಗಿದೆ.
ಏರ್ ಸಿಬ್ಬಂದಿಯನ್ನು ಅವರ ಕಚೇರಿ ಮತ್ತು ಏರ್ ಬೇಗಳಿಗೆ ಡ್ರಾಪ್ ಮತ್ತು ಪಿಕ್ಅಪ್ ಮಾಡಲು ಟೆಂಪೋ ಟ್ರಾವೆಲರ್ ಬಳಕೆ ಮಾಡಲಾಗುತ್ತದೆ. ಘಟನೆ ಸಂದರ್ಭದಲ್ಲಿ ಟೆಂಪೋ ಟ್ರಾವೆಲರ್ನಲ್ಲಿ ಯಾರೂ ಇರಲಿಲ್ಲ. ಘಟನೆ ಸಂಬಂಧ ಹೆಚ್ಚಿನ ತನಿಖೆ ಆರಂಭವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ.
ಇದನ್ನೂ ಓದಿ: ಇಂದು RCB vs PBKS ಪಂದ್ಯ.. ಈ ಹೈವೋಲ್ಟೇಜ್ ಮ್ಯಾಚ್ ಎಷ್ಟು ಗಂಟೆಗೆ, ಎಲ್ಲಿ ನಡೆಯುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ