Advertisment

ಪೆಟ್ರೋಲ್ ದರ ಏರಿಕೆಯಾಗುತ್ತಾ? ಭಾರತದಲ್ಲೂ ಸಂಚಲನ ಸೃಷ್ಟಿಸಿದ ಇಸ್ರೇಲ್​​​-ಇರಾನ್​ ದೇಶಗಳ ಸಂಘರ್ಷ!

author-image
Veena Gangani
Updated On
ಪೆಟ್ರೋಲ್ ದರ ಏರಿಕೆಯಾಗುತ್ತಾ? ಭಾರತದಲ್ಲೂ ಸಂಚಲನ ಸೃಷ್ಟಿಸಿದ ಇಸ್ರೇಲ್​​​-ಇರಾನ್​ ದೇಶಗಳ ಸಂಘರ್ಷ!
Advertisment
  • ವಿಶ್ವದೆಲ್ಲೆಡೆ ಸಂಚಲನ ಸೃಷ್ಟಿಸಿದ ಇಸ್ರೇಲ್​​​-ಇರಾನ್​ ದೇಶಗಳ ನಡುವಿನ ಸಂಘರ್ಷ
  • ಸೈನ್ಯದ ಅಧಿಕಾರಿಗಳನ್ನು ಇಸ್ರೇಲ್​ ಕೊಂದಿದೆ ಆರೋಪಿಸಿ ರೊಚ್ಚಿಗೆದ್ದಿರುವ ಇರಾನ್
  • ಇರಾನ್​ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಅಂತ ಹೇಳಿರುವ ಇಸ್ರೇಲ್

ಇರಾನ್​​​ ಹಾಗೂ ಇಸ್ರೇಲ್​​ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿದೆ. ಇಸ್ರೇಲ್​​ ಮೇಲೆ ಇರಾನ್​ ಯುದ್ಧ ಸಾರಿದೆ. ಸುಮಾರು 300ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್​ ದಾಳಿ ಮಾಡಿದ್ದು, ಮತ್ತೊಂದು ಭೀಕರ ಯುದ್ಧಕ್ಕೆ ರಣಕಹಳೆ ಮೊಳಗಿಸಿದೆ.

Advertisment


">April 14, 2024

ಇಸ್ರೇಲ್​ ಹಾಗೂ ಇರಾನ್​ ನಡುವೆ ಪರಿಸ್ಥಿತಿ ಬಿಗಾಡಿಸಿಯಿಸಿದೆ. ತನ್ನ ಸೈನ್ಯದ ಅಧಿಕಾರಿಗಳನ್ನು ಇಸ್ರೇಲ್​ ಕೊಂದಿದೆ ಆರೋಪಿಸಿ ರೊಚ್ಚಿಗೆದ್ದಿರುವ ಇರಾನ್​​ ಇದೀಗ ಇಸ್ರೇಲ್​ ಮೇಲೆ ಯುದ್ಧ ಸಾರಿದೆ. ಸುಮಾರು 300ಕ್ಕೂ ಹೆಚ್ಚು ಡ್ರೋನ್​ ಹಾಗೂ​ ಕ್ಷಿಪಣಿ ಸೇರಿದಂತೆ ಬಲಿಷ್ಠ ಮಿಸೈಲ್​ಗಳಿಂದ ದಾಳಿ ನಡೆಸಿ ಮಹಾಯುದ್ಧದ ರಣಕಹಳೆ ಮೊಳಗಿಸಿದೆ.

ಇದನ್ನೂ ಓದಿ:ಡಿಕೆ ಬ್ರದರ್ಸ್ ಆಪ್ತನಿಗೆ ಶಾಕ್ ಕೊಟ್ಟ IT; ಕನಕಪುರದ ಕೆಂಪರಾಜು ಮನೆಯಲ್ಲಿ ದಾಖಲೆ ಪರಿಶೀಲನೆ

Advertisment

publive-image

ಕ್ಷಿಪಣಿಗಳನ್ನು ಪುಡಿ ಪುಡಿ ಮಾಡಿದ ಇಸ್ರೇಲ್​

ಮೊನ್ನೆಯಷ್ಟೆ ಇಸ್ರೇಲ್​​ನ ಹಡಗನ್ನು ವಶಕ್ಕೆ ಪಡೆದಿದ್ದ ಇರಾನ್​​, ಸ್ವಲ ಸಮಯದ ಬಳಿಕ ಇಸ್ರೇಲ್ ದೇಶದ ಪ್ರಮುಖ ನಗರಗಳನ್ನು ಗುರಿಯಾಗಿಸಿ, ಇರಾನ್ ಭೀಕರ ದಾಳಿ ಆರಂಭಿಸಿದೆ. ಆದ್ರೆ ಇರಾನ್​ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಅಂತ ಹೇಳಿರುವ ಇಸ್ರೇಲ್​​​​​, ಕ್ಷಿಪಣಿಗಳನ್ನ ಆಕಾಶದಲ್ಲೇ ಪುಡಿ ಪುಡಿ ಮಾಡಿದ್ದೇವೆ ಅಂತ ಇರಾನ್​​​ಗೆ ತಿರುಗೇಟು ನೀಡಿದೆ.

publive-image

ವಿಶ್ವದ ದೊಡ್ಡಣ್ಣನ ಮಾತಿಗೆ ತಲೆಕೆಡಿಸಿಕೊಳ್ಳದ ಇರಾನ್​​​​​
ಇರಾನ್​ ಮತ್ತು ಇಸ್ರೇಲ್​ ನಡುವಿನ ಉದ್ವಿಗ್ನ ಪರಿಸ್ಥತಿಯ ಬಗ್ಗೆ ನಿನ್ನೆ ಖುದ್ದು ಅಮೆರಿಕ ಅಧ್ಯಕ್ಷ ಜೋ ಬೈಡೆನ್​​​ ಮಾಹಿತಿ ನೀಡಿದ್ದು, ವಾತವರಣ ಸೂಕ್ಷ್ಮವಾಗಿದೆ. ಇರಾನ್​ ಯಾವುದೇ ಸಂದರ್ಭದಲ್ಲಿ ಬೇಕಾದರು ಇಸ್ರೇಲ್​ ಮೇಲೆ ದಾಳಿ ನಡೆಸಬಹುದು ಎಂದು ಹೇಳಿ, ದಾಳಿ ನಡೆಸದಂತೆ ಎಚ್ಚರಿಕೆ ಸಹ ನೀಡಿದ್ದರು, ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇರಾನ್​​ ದಾಳಿ ನಡೆಸಿದ್ದು, ಆತಂಕ ಸೃಷ್ಟಿಮಾಡಿದೆ.

ಇಸ್ರೇಲ್-ಇರಾನ್​​ ಯುದ್ಧ, ಭಾರತ ಕಳವಳ
ಇಸ್ರೇಲ್ ಮೇಲೆ ಇರಾನ್ ನಡೆಸಿದ ದಾಳಿ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ. ಇಸ್ರೇಲ್ ಮೇಲಿನ ಇರಾನ್ ದಾಳಿಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಅಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ ಭಾರತಕ್ಕೆ ದೊಡ್ಡ ಸವಾಲಾಗಿದ್ದು, ಇಸ್ರೇಲ್​ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಹಗೆತನದಿಂದ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದೆ. ಕೂಡಲೇ ಉದ್ವಿಗ್ನತೆ, ಹಿಂಸಾಚಾರದಿಂದ ಹಿಂದೆ ಸರಿಯುವಂತೆ ಭಾರತ ಕರೆ ನೀಡಿದೆ. ಮತ್ತೊಂದೆಡೆ ಇರಾನ್​ ವಶಪಡಿಸಿಕೊಂಡವ ಇಸ್ರೇಲಿ ಹಡಗಿನಲ್ಲಿ ಸುಮಾರು 17 ಮಂದಿ ಭಾರತೀಯರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನು ಯುದ್ಧ ಸಂದಿಗ್ನ ಪರಿಸ್ಥತಿಯಿಂದ ಹೊರ ತರುವುದು ಸವಾಲಿನ ಕೆಲಸವಾಗಿದ್ದು, ಅವರ ಸುರಕ್ಷತೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾನ್ ಸರ್ಕಾರದ ಸಂಪರ್ಕದಲ್ಲಿದೆ ಎಂದು ತಿಳಿದು ಬಂದಿದೆ.

Advertisment

publive-image

ಸಂಘರ್ಷ ಹೆಚ್ಚಾದ್ರೆ ಭಾರತಕ್ಕೆ ದೊಡ್ಡ ಸಮಸ್ಯೆ?
ಒಂದು ವೇಳೆ ಇಸ್ರೇಲ್​ ಹಾಗೂ ಇರಾನ್​ ನಡುವಿನ ಸಂಘರ್ಷ ಇನ್ನಷ್ಟು ತೀವ್ರಗೊಂಡರೆ ಭಾರತಕ್ಕೆ ದೊಡ್ಡ ಸವಾಲ್ ಆಗಲಿದೆ. ಯಾಕೆಂದರೆ ಭಾರತ ಇರಾನ್ ಮತ್ತು ಇಸ್ರೇಲ್ ನಡುವೆ ಉತ್ತಮ ಸಂಬಂಧ ಹೊಂದಿದೆ. ಹೀಗಿರುವಾಗ ಯಾವುದೇ ನಿಲುವು ತೆಗೆದುಕೊಳ್ಳಬೇಕು ಎಂದರೂ ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಇಸ್ರೇಲ್​​​-ಇರಾನ್​ ದೇಶಗಳ ನಡುವಿನ ಸಂಘರ್ಷದಿಂದಾಗಿ ವಿಶ್ವದೆಲ್ಲಡೆ ಸಂಚಲನ ಸೃಷ್ಟಿಸಿದೆ. ಪ್ರಮುಖವಾಗಿ ಇಸ್ರೇಲ್, ಇರಾನ್ ಯುದ್ಧದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗಲಿದ್ದು, ಮುಂದಿನ ವಾರ ಭಾರತದಲ್ಲೂ ಪೆಟ್ರೋಲ್ ದರಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment