newsfirstkannada.com

ಭೀಕರ ಅಪಘಾತ.. ಸೈನಿಕರಾಗಬೇಕು ಅಂತ ತರಬೇತಿ ಪಡೆಯುತ್ತಿದ್ದ ಜೀವದ ಗೆಳೆಯರು ಸಾವು

Share :

Published February 4, 2024 at 1:04pm

Update February 4, 2024 at 1:05pm

  ಕ್ರೂಸರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು

  ಒಂದೇ ಊರಿನವರಾದ ರಾಮಲಿಂಗ ಮುತ್ಗೇಕರ್‌, ಹನುಮಂತ ಪಾಟೀಲ್

  ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಶಾಲೆಗೆ ಹೋಗುತ್ತಿದ್ದ ಇಬ್ಬರು

ಬೆಳಗಾವಿ: ಇವರಿಬ್ಬರು ಜೀವದ ಗೆಳೆಯರು. ಒಬ್ಬ ರಾಮಲಿಂಗ ಮುತ್ಗೇಕರ್, ಮತ್ತೊಬ್ಬ ಹನುಮಂತ ಪಾಟೀಲ್. ಇಬ್ಬರಿಗೂ ಇನ್ನೂ 20 ವರ್ಷ ವಯಸ್ಸಷ್ಟೇ. ಒಂದೇ ಊರಿನವರಾದ ಇಬ್ಬರೂ ಒಟ್ಟಿಗೆ ಓದಿ ಒಟ್ಟಿಗೆ ದೇಶ ಕಾಯೋ ಸೈನಿಕನಾಗಬೇಕು ಅಂತ ಕನಸು ಕಂಡಿದ್ದವರು. ಆದರೆ ವಿಧಿಯ ಆಟ ಈ ಜೀವದ ಗೆಳೆಯರನ್ನ ಸಾವಿನ ಮನೆಗೆ ದೂಡಿದೆ.

ಕ್ರೂಸರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿರೋ ಭೀಕರ ಅಪಘಾತ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗರಲಗುಂಜಿ ಗ್ರಾಮದ ಬಳಿ ನಡೆದಿದೆ. ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ರಾಮಲಿಂಗ ಮುತ್ಗೇಕರ್(20), ಹನುಮಂತ ಪಾಟೀಲ್(20) ಮೃತ ದುರ್ದೈವಿಗಳು.

ಇದನ್ನೂ ಓದಿ: ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಕಾರು; ಮೂವರು ಯುವಕರು ದಾರುಣ ಸಾವು

ರಾಮಲಿಂಗ ಮುತ್ಗೇಕರ್, ಹನುಮಂತ ಪಾಟೀಲ್ ಬೇಕ್ವಾಡ ಗ್ರಾಮದ ನಿವಾಸಿಗಳು. ಇಬ್ಬರೂ ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಶಾಲೆಗೆ ಹೋಗುತ್ತಿದ್ದರು. ಸೈನಿಕನಾಗೋ ಕನಸು ಕಂಡಿದ್ದವರು ಭೀಕರ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ಸೈನಿಕರಾಗಬೇಕು ಅಂತ ತರಬೇತಿ ಪಡೆಯುತ್ತಿದ್ದ ಜೀವದ ಗೆಳೆಯರು ಸಾವು

https://newsfirstlive.com/wp-content/uploads/2024/02/Belagavi-Road-Accident.jpg

Load More