newsfirstkannada.com

ಭೀಕರ ಅಪಘಾತ.. ಬೆಂಗಳೂರಿಂದ ಗೋಕರ್ಣಕ್ಕೆ ಹೊರಟಿದ್ದ ನಾಲ್ವರು ಸಾವು; 7 ತಿಂಗಳ ಮಗು ಪಾರು

Share :

Published April 7, 2024 at 1:17pm

  ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿದ್ದ ಖಾಸಗಿ ಬಸ್ ಪಲ್ಟಿ

  ಆಸ್ಪತ್ರೆಯಲ್ಲಿ 8 ಜನರ ಸ್ಥಿತಿ ಗಂಭೀರ, 25ಕ್ಕೂ ಹೆಚ್ಚು ಮಂದಿಗೆ ಗಾಯ

  7 ತಿಂಗಳ ರಿಷಿಕಾ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಚಿತ್ರದುರ್ಗದ ಹೊಳಲ್ಕೆರ್ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಪಲ್ಟಿ ಹೊಡೆದಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 8 ಜನರ ಸ್ಥಿತಿ ಗಂಭೀರವಾಗಿದ್ದು, 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದೆ.

ಹೊಳಲ್ಕೆರೆ ಪಟ್ಟಣದ ಕಣಿವೆ ಆಂಜನೇಯ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಸೀಬರ್ಡ್ ಖಾಸಗಿ ಬಸ್ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟ್ಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ.

ಅಪಘಾತದಲ್ಲಿ ಖಾಸಗಿ ಬಸ್‌ ನುಜ್ಜುಗುಜ್ಜಾಗಿ ಚೆಲ್ಲಾಪಿಲ್ಲಿಯಾಗಿದೆ. ಸಾವನ್ನಪ್ಪಿದ ಪ್ರಯಾಣಿಕರ ಮೃತ ದೇಹಗಳನ್ನು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದೇ ದುರಂತದಲ್ಲಿ 7 ತಿಂಗಳ ರಿಷಿಕಾ ಎಂಬ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ರಿಷಿಕಾ ನಾಗರಾಜ್ ಹಾಗೂ ಶ್ರೀದೇವಿಯ ಮಗುವಾಗಿದ್ದು, ದಂಪತಿಯು ಬೆಂಗಳೂರಿಂದ ಕುಮಟಾಗೆ ಹೊರಟಿದ್ದರು. ಕುಮಟಾ ಮೂಲದ ಈ ದಂಪತಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಇಂದು ಬೆಂಗಳೂರಿಂದ ಕುಮಟಾಗೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ: ಎಲ್ಲಿರುವೆ ಟ್ರಾಫಿಕ್ ಪೊಲೀಸರನ್ನ ಕಾಡುತ್ತಿರೋ ರೂಪಸಿಯೇ.. ಈಕೆ ಸಂಚಾರಿ ನಿಯಮ ಬ್ರೇಕ್​ ಮಾಡಿದ್ದು ಕೇಳಿದ್ರೆ..

ಹೊಳಲ್ಕೆರೆ ತಾಲೂಕಿನ ಈ ರಸ್ತೆಯಲ್ಲಿ ಇದೇ ರೀತಿಯ ಹಲವು ಅಪಘಾತಗಳು ನಡೆದಿದೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಅಪಘಾತದಲ್ಲಿ 8 ಜನರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳಿಗೆ ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಅಪಘಾತ.. ಬೆಂಗಳೂರಿಂದ ಗೋಕರ್ಣಕ್ಕೆ ಹೊರಟಿದ್ದ ನಾಲ್ವರು ಸಾವು; 7 ತಿಂಗಳ ಮಗು ಪಾರು

https://newsfirstlive.com/wp-content/uploads/2024/04/Chitradurga-Bus-Accident.jpg

Load More