BREAKING: ಕುರಿ ಖರೀದಿಗೆ ಹೊರಟ್ಟಿದ್ದಾಗ ಭೀಕರ ಅಪಘಾತ; ಸ್ಥಳದಲ್ಲೇ 4 ಮಂದಿ ಸಾವು

author-image
Veena Gangani
Updated On
BREAKING: ಕುರಿ ಖರೀದಿಗೆ ಹೊರಟ್ಟಿದ್ದಾಗ ಭೀಕರ ಅಪಘಾತ; ಸ್ಥಳದಲ್ಲೇ 4 ಮಂದಿ ಸಾವು
Advertisment
  • ಶಹಾಪೂರ ಸಂತೆಗೆ ಹೊರಟ್ಟಿದ್ದ ವೇಳೆ ನಡೆದ ದುರ್ಘಟನೆ
  • ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಗಬ್ಬೂರು ಪೊಲೀಸ್ರು ಭೇಟಿ
  • ಈ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ರಾಯಚೂರು: ಕುರಿ ಖರೀದಿಗೆ ಹೊರಟ್ಟಿದ್ದ ಬೊಲೆರೋ ಪಿಕಪ್ ವಾಹನ ಹಳ್ಳದ‌ ಸೇತುವೆಗೆ ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ‌ದೇವದುರ್ಗ ತಾಲೂಕಿನ ಅಮರಾಪುರ ಕ್ರಾಸ್ ಬಳಿ ನಡೆದಿದೆ.

ಇದನ್ನೂ ಓದಿ:50 ಕೋಟಿ ರೂಪಾಯಿ ನಾಯಿ ಮಾಲೀಕನಿಗೆ ಬಿಗ್ ಶಾಕ್​.. ಲಾಕ್ ಮಾಡಿದ ED; ಅಸಲಿಗೆ ಏನಾಯಿತು?

ನಾಗರಾಜ್, ಸೋಮ, ನಾಗಭೂಷಣ, ಮುರಳಿ ಮೃತ ದುರ್ದೈಗಳಾಗಿದ್ದಾರೆ. ಮೃತ ನಾಲ್ವರು ಸಹ ತೆಲಂಗಾಣದ ಹಿಂದೂಪುರದವರು. ತೆಲಂಗಾಣದ ಹಿಂದೂಪುರದಿಂದ ಶಹಾಪೂರ ಸಂತೆಗೆ ಹೊರಟ್ಟಿದ್ದ ವೇಳೆ ಈ ದುರ್ಘಟನೆ ನಡೆದಿದೆ.

publive-image

ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಗಬ್ಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ ಈ ಘಟನೆ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment