Advertisment

BREAKING: ಮುಂಬೈ ಗೇಟ್ ವೇ ಬಳಿ ಘೋರ ದುರಂತ; 110 ಪ್ರಯಾಣಿಕರಿದ್ದ ಬೋಟ್ ಮುಳುಗಡೆ

author-image
admin
Updated On
BREAKING: ಮುಂಬೈ ಗೇಟ್ ವೇ ಬಳಿ ಘೋರ ದುರಂತ; 110 ಪ್ರಯಾಣಿಕರಿದ್ದ ಬೋಟ್ ಮುಳುಗಡೆ
Advertisment
  • ಎಲಿಫೆಂಟಾ ಗುಹೆ ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗಿತ್ತು
  • ಮುಂಬೈ ಪೊಲೀಸರು, ನೌಕಾದಳದ ಸಿಬ್ಬಂದಿ ರಕ್ಷಿಸಲು ಹರಸಾಹಸ
  • ಮಹಾರಾಷ್ಟ್ರ ವಿಧಾನಸಭೆಗೆ ಸಿಎಂ ದೇವೇಂದ್ರ ಫಡ್ನವಿಸ್ ಮಾಹಿತಿ

ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ನೋಡ, ನೋಡುತ್ತಿದ್ದಂತೆ ಅತಿ ದೊಡ್ಡ ಅನಾಹುತ ಸಂಭವಿಸಿದೆ. 110 ಪ್ರಯಾಣಿಕರಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ. ಕೂಡಲೇ ಮುಂಬೈ ಪೊಲೀಸರು, ನೌಕಾದಳದ ಸಿಬ್ಬಂದಿ ರಕ್ಷಿಸಲು ಹರಸಾಹಸ ಪಟ್ಟರೂ 13 ಮಂದಿಯ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.

Advertisment

publive-image

ಗೇಟ್ ವೇ ಬಳಿ ಪ್ರವಾಸಿಗರಿದ್ದ ಬೋಟ್​ಗೆ ನೌಕಾಪಡೆಯ ಸ್ಪೀಡ್​ ಬೋಟ್​ ಡಿಕ್ಕಿಯಾಗಿದೆ. ಬೋಟ್‌ನಲ್ಲಿರುವ ಪ್ರಯಾಣಿಕರ ರಕ್ಷಣೆಗೆ ನೌಕಾದಳ, ಪೊಲೀಸರು ಕಾರ್ಯಾಚರಣೆ ನಡೆಸಿದರು. ಇದುವರೆಗೂ 101 ಜನರನ್ನು ನೌಕಾಪಡೆ ಸಿಬ್ಬಂದಿ ರಕ್ಷಿಸಿದ್ದು, ದುರಂತದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ನಾಲ್ವರ ಸ್ಥಿತಿ ಇನ್ನೂ ಗಂಭೀರವಾಗಿದೆ.

publive-image

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಘೋರ ದುರಂತದ ಕ್ಷಣಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಸಮುದ್ರದಲ್ಲಿ ಪ್ರಯಾಣಿಕರಿದ್ದ ಬೋಟ್ ಮುಳುಗಡೆ ಆಗಿದೆ. ಪ್ರವಾಸಿಗರಿದ್ದ ಬೋಟ್‌ ದುರಂತದಲ್ಲಿ ನೌಕಾಪಡೆಯ ಮೂವರು ಸಿಬ್ಬಂದಿ ಸಹ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ದೊಡ್ಮನೆಯಿಂದ ಹೊರಡುತ್ತಿದ್ದಂತೆ ಗೀತಕ್ಕ ಕಣ್ಣೀರು.. ಶಿವಣ್ಣಗೆ ಅಭಿಮಾನಿಗಳ ಜೈಕಾರ 

Advertisment


">December 18, 2024

publive-image

ಈ ಬೋಟ್‌ನಲ್ಲಿ ಮುಂಬೈ ಬಳಿಯ ಎಲಿಫೆಂಟಾ ಗುಹೆಗಳನ್ನು ನೋಡಲು ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗಿತ್ತು. ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್​ಗೆ ನೌಕಾಪಡೆಯ ಸ್ಪೀಡ್​ ಬೋಟ್​ ಡಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆ ವೇಳೆ ಬೋಟ್​​ನಲ್ಲಿ 110 ಜನ ಪ್ರಯಾಣಿಕರಿದ್ದರು ಎಂದು ಮಹಾರಾಷ್ಟ್ರ ವಿಧಾನಸಭೆಗೆ ಸಿಎಂ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment