newsfirstkannada.com

ಜೋಯ್‌ ಅಲುಕ್ಕಾಸ್‌ನಲ್ಲಿ ಡೈಮಂಡ್ ಉಂಗುರ ಕದ್ದ ಕಳ್ಳ; ಸಿಸಿಟಿವಿಯಲ್ಲಿ ಖತರ್ನಾಕ್‌ ದೃಶ್ಯ ಸೆರೆ

Share :

Published February 24, 2024 at 12:03pm

Update February 24, 2024 at 12:05pm

  ಗ್ರಾಹಕರ ಸೋಗಿನಲ್ಲಿ ಜೋಯ್ ಅಲುಕ್ಕಾಸ್ ಮಳಿಗೆಗೆ ಎಂಟ್ರಿ

  ಕಳ್ಳ 75 ಲಕ್ಷದ ಡೈಮಂಡ್ ಉಂಗುರ ಎಗರಿಸಿದ್ದು ಹೇಗೆ ಗೊತ್ತಾ?

  ಡೈಮಂಡ್ ಕಳ್ಳನ ಹಿಂದೆ ಬಿದ್ದ ಕಬ್ಬನ್ ಪಾರ್ಕ್‌ ಠಾಣೆಯ ಪೊಲೀಸರು

ಬೆಂಗಳೂರು: ಜೋಯ್ ಅಲುಕ್ಕಾಸ್ ಆಭರಣ ಮಳಿಗೆಗೆ ಬಂದ ವ್ಯಕ್ತಿಯೊಬ್ಬ ಗ್ರಾಹಕರ ಸೋಗಿನಲ್ಲಿ ದುಬಾರಿ ಡೈಮಂಡ್ ಉಂಗುರ ಕಳ್ಳತನ ಮಾಡಿರೋ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಫೆಬ್ರವರಿ 18ರಂದು ನಗರದ ಎಂ.ಜಿ ರಸ್ತೆಯ ಜೋಯ್‌ ಅಲುಕ್ಕಾಸ್‌ನಲ್ಲಿ ಈ ಘಟನೆ ನಡೆದಿದೆ.

ಗ್ರಾಹಕನ ಸೋಗಿನಲ್ಲಿ ಮಳಿಗೆಗೆ ಬಂದ ವ್ಯಕ್ತಿಯೊಬ್ಬ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ಜೊತೆ ದುಬಾರಿ ಡೈಮಂಡ್ ಉಂಗುರವನ್ನ ಬಹಳ ನಾಜೂಕಾಗಿ ಬರೋಬ್ಬರಿ 75 ಲಕ್ಷ ರೂಪಾಯಿ ಮೌಲ್ಯದ ಉಂಗುರವನ್ನ ಎಗರಿಸಿದ್ದಾನೆ. ಡೈಮಂಡ್ ಉಂಗುರ ಕದ್ದ ಖತರ್ನಾಕ್ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ‘ಕನ್ನಡ್’ ಎಂದವನಿಗೆ ಮೂಲಾಜಿಲ್ಲದೇ KL ರಾಹುಲ್ ಕ್ಲಾಸ್; ಕನ್ನಡಿಗರ ಹೃದಯಗೆದ್ದ ಈ ವಿಡಿಯೋದ ಅಸಲಿ ಕಥೆ ಏನು?

ಈ ಖತರ್ನಾಕ್ ಕಳ್ಳ ಡೂಪ್ಲಿಕೇಟ್ ಉಂಗುರ ಇಟ್ಟು ಒರಿಜಿನಲ್ ಡೈಮಂಡ್ ಉಂಗುರ ಕದ್ದಿದ್ದಾನಂತೆ. ಸಿಸಿಟಿವಿಯಲ್ಲಿ ಕಳ್ಳನ ಕೈಚಳಕವನ್ನ ನೋಡಿ ಜೋಯ್ ಅಲುಕ್ಕಾಸ್ ಸಿಬ್ಬಂದಿ ಗಾಬರಿಯಾಗಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಖತರ್ನಾಕ್ ಕಳ್ಳ ಬೆಂಗಳೂರಿನ ಹಲವು ಆಭರಣ ಅಂಗಡಿಗಳಲ್ಲಿ ಇದೇ ರೀತಿಯಲ್ಲಿ ಕಳ್ಳತನ ಮಾಡಿರೋ ಶಂಕೆ ವ್ಯಕ್ತವಾಗಿದೆ. ಡೈಮಂಡ್ ಕಳ್ಳನಿಗಾಗಿ ಈಗ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೋಯ್‌ ಅಲುಕ್ಕಾಸ್‌ನಲ್ಲಿ ಡೈಮಂಡ್ ಉಂಗುರ ಕದ್ದ ಕಳ್ಳ; ಸಿಸಿಟಿವಿಯಲ್ಲಿ ಖತರ್ನಾಕ್‌ ದೃಶ್ಯ ಸೆರೆ

https://newsfirstlive.com/wp-content/uploads/2024/02/Joyalukkas-Theft.jpg

Load More