newsfirstkannada.com

ಬರೋಬ್ಬರಿ 241 ಬಾರಿ ಟ್ರಾಫಿಕ್ ರೂಲ್ಸ್​ ಬ್ರೇಕ್​​: ಕೇವಲ 40,000 ರೂ. ಬೈಕ್‌ ಮೇಲಿದೆ ಲಕ್ಷಕ್ಕೂ ಹೆಚ್ಚು ದಂಡ

Share :

Published January 25, 2024 at 5:50am

    ಹೆಲ್ಮೆಟ್ ಇಲ್ಲದೆ ಸವಾರಿ ಸಿಗ್ನಲ್ ಜಂಪ್ ಹಲವು ಬಾರಿ

    ಬೈಕ್​​ ಸವಾರನಿಗೆ ಬಿಸಿ ಮುಟ್ಟಿಸದ ಟ್ರಾಫಿಕ್​ ಪೊಲೀಸ್

    ಟ್ರಾಫಿಕ್ ಪೊಲೀಸರ ನಡೆಗೆ ಇತರೆ ಸವಾರರ ಆಕ್ರೋಶ

ಬೆಂಗಳೂರು: ಒಂದಲ್ಲ ಎರಡಲ್ಲ ಬರೋಬ್ಬರಿ 241 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್. 30 ರಿಂದ 40 ಸಾವಿರದ ಬೈಕ್‌ ಮೇಲಿದೆ ಲಕ್ಷಕ್ಕೂ ಮೇಲಿನ ಫೈನ್‌. ಪದೇ ಪದೇ ಟ್ರಾಫಿಕ್ ರೂಲ್ಸ್‌ ಬ್ರೇಕ್ ಮಾಡಿ, ಸಿಗ್ನಲ್​ ಜಂಪ್ ಖ್ಯಾತಿಯ ಬೈಕ್‌ ಸವಾರನೊಬ್ಬನ ಕಹಾನಿಗೆ ಸಂಚಾರಿ ಪೊಲೀಸರೇ ಶಾಕ್ ಆಗಿರೋ ಸ್ಟೋರಿಯಿದು.

30-40 ಸಾವಿರದ ಬೈಕ್‌ ಮೇಲಿದೆ 1,25,500 ರೂ.ದಂಡ

ಒಂದು ಕಡೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗ್ತಿದೆ. ವರ್ಷದಿಂದ ವರ್ಷಕ್ಕೆ ಆ್ಯಕ್ಸಿಡೆಂಟ್ ಪ್ರಕರಣ ಕೂಡ ಏರಿಕೆಯಾಗ್ತಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರಿಂದಲೇ ಈ ರೀತಿಯ ಅವಘಡ ನಡೆಯುತ್ತಿದ್ದು, ಇದಕ್ಕಾಗಿಯೇ ಟ್ರಾಫಿಕ್ ಪೊಲೀಸರು ಕೂಡ ನಾನಾ ಟೆಕ್ನಿಕ್ ಯೂಸ್ ಮಾಡ್ತಿದ್ದಾರೆ. ಆದ್ರೆ ಇದ್ರ ನಡುವೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ 241 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದಲ್ಲದೆ, ಸಂಚಾರಿ ಪೊಲೀಸರನ್ನ ಯಾಮಾರಿಸಿ ಇನ್ನೂ ಕೂಡ ತನ್ನ ಸವಾರಿ ಮುಂದುವರೆಸಿದ್ದಾನೆ.

30-40 ಸಾವಿರದ KA01JH3577 ನಂಬರ್‌ನ ಬೈಕ್‌ ಮೇಲೆ ಬರೋಬ್ಬರಿ 1 ಲಕ್ಷದ 25 ಸಾವಿರದ 500 ರೂಪಾಯಿ ದಂಡವಿದೆ. ಬೈಕ್‌ ಮಂಜುನಾಥ್‌ ಎಂಬುವವರಿಗೆ ಸೇರಿದೆ. ಹೆಲ್ಮೆಟ್ ಇಲ್ಲದೇ ಸವಾರಿ, ಸಿಗ್ನಲ್ ಜಂಪ್ ಸೇರಿದಂತೆ ಕೋರಮಂಗಲ ವಿಪ್ರೊ ಪಾರ್ಕ್, ಐಶ್ವರ್ಯ ಜಂಕ್ಷನ್, HAL ಓಲ್ಡ್ ಏರ್ಪೋರ್ಟ್ ರೋಡ್, ರಾಜಾಜಿನಗರ, ಆಡುಗೋಡಿ ಸಿಗ್ನಲ್‌ ಕ್ಯಾಮೆರದಲ್ಲಿ ಟ್ರಾಫಿಕ್ ಬ್ರೇಕ್‌ ಮಾಡಿರೋದು ಸೆರೆಯಾಗಿದೆ. ಆದ್ರೂ ಬೈಕ್‌ ಸವಾರನಿಗೆ ಬಿಸಿ ಮುಟ್ಟಿಸದೇ ಇರೋದಕ್ಕೆ, ಟ್ರಾಫ್ರಿಕ್ ಪೊಲೀಸರ ನಡೆಗೆ ಇತರೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರಾಫಿಕ್‌ ಪೊಲೀಸರು ಅದೆಷ್ಟೇ ರೂಲ್ಸ್‌ಗಳನ್ನ ತಂದ್ರೂ ಕೂಡ ಸವಾರರು ರೂಲ್ಸ್ ಬ್ರೇಕ್ ಮಾಡೇ ಮಾಡ್ತಾರೆ. ಇತರರಿಗೆ ತೊಂದ್ರೆ ಕೊಟ್ಟು ರೂಲ್ಸ್ ಬ್ರೇಕ್ ಮಾಡೋ ಇಂತಹ ಆಸಾಮಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಬೇಕಾಗಿದೆ. ಆದಷ್ಟು ಬೇಗ ಮಂಜುನಾಥನನ್ನು ಲಾಕ್ ಮಾಡಿ ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡ್ತಾರಾ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 241 ಬಾರಿ ಟ್ರಾಫಿಕ್ ರೂಲ್ಸ್​ ಬ್ರೇಕ್​​: ಕೇವಲ 40,000 ರೂ. ಬೈಕ್‌ ಮೇಲಿದೆ ಲಕ್ಷಕ್ಕೂ ಹೆಚ್ಚು ದಂಡ

https://newsfirstlive.com/wp-content/uploads/2023/12/BNG_TRAFFIC_2.jpg

Load More