/newsfirstlive-kannada/media/post_attachments/wp-content/uploads/2024/08/wayanad-28.jpg)
ವಯನಾಡಿನಲ್ಲಿ ಭೂಕುಸಿತ ಸಂಭವಿಸಿ ಇಂದಿಗೆ 15 ದಿನಗಳು ಕಳೆದಿವೆ. ಆದರೆ ಭೂಕುಸಿತ ಕರಾಳತೆ ಇಂದಿಗೂ ಎಲ್ಲರ ಮನದಲ್ಲಿ ಹಾಗೆಯೇ ಉಳಿದಿದೆ. ಸಾಕಷ್ಟು ಕುಟುಂಬಗಳು ಪ್ರಕೃತಿಯ ರೌದ್ರ ನರ್ತನಕ್ಕೆ ಬಲಿಯಾಗಿವೆ. ಅದೆಷ್ಟೋ ಜನರು ಅನಾಥರಾಗಿದ್ದಾರೆ. ಈ ಕರಾಳತೆಯಲ್ಲಿ ನೊಂದ ಜೀವಗಳ ಕತೆಗಳು ಒಂದೊಂದರಂತೆ ಬೆಳಕಿಗೆ ಬರುತ್ತಿವೆ. ಅದರಂತೆಯೇ ಇದೀಗ ವಯನಾಡಿನಲ್ಲಿ ದುರಂತದಲ್ಲಿ ಪ್ರೇಮಿಗಳ ಮನಮಿಡಿಯುವ ಲವ್ ಸ್ಟೋರಿ ಬೆಳಕಿಗೆ ಬಂದಿದೆ.
ಇದು ಭಯಾನಕ ಭೂಕುಸಿತದಲ್ಲಿ ಪ್ರೇಯಸಿ ಮೃತಪಟ್ಟಲೆಂದು ನೊಂದ ಪ್ರಿಯಕರನ ಕತೆಯಾಗಿದೆ. ಅತ್ತ ಪ್ರಿಯತಮೆಯೂ ಕೂಡ ಪ್ರಿಯಕರ ಸಾವನ್ನಪ್ಪಿದ್ದಾನೆಂದು ಕಣ್ಣೀರು ಹಾಕುತ್ತಿದ್ದ ಪ್ರೇಯಸಿಯ ಕತೆಯಾಗಿದೆ. ಆದರೆ ಇದೀಗ ಇಬ್ಬರು ಪ್ರತ್ಯಕ್ಷವಾಗಿರೊದನ್ನು ಕಂಡು ಒಬ್ಬರಿಗೊಬ್ಬರು ಸಂತಸಗೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/wayanad-27.jpg)
ಮೊಬೈಲ್ ಆಫ್, ಮನೆ ಧ್ವಂಸ
ಚೂರಲ್ಮಾಲ ನಿವಾಸಿ ಫಿದಾ ಮತ್ತು ಅನ್ಸಿಲ್ ಇಬ್ಬರು ಪ್ರೀತಿಸುತ್ತಿದ್ದರು. ಭೂ ಕುಸಿತವಾಗುವ ಕೆಲ ಗಂಟೆಗಳ ಮುಂಚೆ ಪರಸ್ಪರ ಮಾತನಾಡಿದ್ದರು. ಪ್ರಿಯಕರ ರಾತ್ರಿ 11:30ಕ್ಕೆ ಜೋಪಾನವೆಂದು ಮಾತನಾಡಿ ಕಾಲ್ ಕಟ್ ಮಾಡಿದ್ದನು. ಆದರೆ ಫೋನ್​ನಲ್ಲಿ ಮಾತನಾಡಿದ ಕೆಲ ಗಂಟೆಯಲ್ಲಿ ಚೂರಲ್ಮಾಲ, ಮೆಪ್ಪಾಡಿಯಲ್ಲಿ ಭೀಕರ ಭೂ ಕುಸಿತ ಸಂಭವಿಸಿದೆ.
ನೆಲಸಮವಾದ ಮನೆ ಕಂಡು ಶಾಕ್
ಪ್ರಿಯಕರನಿಗೆ ಬೆಳಗ್ಗೆ ಈ ವಿಚಾರ ಗೊತ್ತಾಗಿ ಅಕ್ಷರಶಃ ದಿಗ್ಭ್ರಾಂತನಾಗಿದ್ದಾನೆ. ಪ್ರೇಯಸಿಗೆ ಪದೇ ಪದೇ ಕಾಲ್ ಮಾಡಿದ್ದಾನೆ. ಆದರೆ ಈ ವೇಳೆ ಮೊಬೈಲ್ ಸ್ವಿಚ್ ಆಫ್ ಬಂದಿದೆ. ಕೂಡಲೇ ಆತ ಪ್ರೇಯಸಿಯ ಮನೆಯತ್ರ ಹೋಗಿದ್ದಾನೆ. ಈ ವೇಳೆ ಕಂಡಿದ್ದು ನೆಲಸಮವಾದ ಮನೆ.
ಪ್ರೇಯಸಿಯ ಮನೆ ನೆಲಸಮ, ಮೊಬೈಲ್ ಸ್ವಿಚ್ ಆಫ್​ನಿಂದ ಪ್ರಿಯಕರ ಕಂಗಾಲಾಗಿದ್ದನು. ಮನದನ್ನೆ ನಾಪತ್ತೆಯಾಗಿರೋ ನೋವು ತುಂಬಿಕೊಂಡು ಪ್ರಿಯಕರ ಕೆಲಸಕ್ಕೂ ಹಾಜರಾಗಿದ್ದನು. ಮೆಪ್ಪಾಡಿಯ ಹೆಲ್ತ್ ಸೆಂಟರ್ ನಲ್ಲಿ ಅನ್ಸಿಲ್ ಕೆಲಸ ಮಾಡ್ತಿದ್ದನು.
/newsfirstlive-kannada/media/post_attachments/wp-content/uploads/2024/08/wayanad-29.jpg)
ಮೃತದೇಹ ಸ್ನಾನ ಮಾಡಿಸುತ್ತಿದ್ದ ಪ್ರಿಯಕರ
ದುರಂತದಲ್ಲಿ ಮಡಿದ ಮೃತದೇಹದ ಅನ್ಸಿಲ್ ಸ್ನಾನ ಮಾಡಿಸುತ್ತಿದ್ದನು. ಮಣ್ಣು ತುಂಬಿದ ಪ್ರತೀ ದೇಹದ ಮುಖಕ್ಕೆ ನೀರು ಹಾಕುವಾಗಲೂ ಇದು ನನ್ನ ಪ್ರೇಯಸಿಯ ಮೃತದೇಹ ಎಂದು ಆತಂಕದಲ್ಲಿ ನೋಡುತ್ತಿದ್ದನು. ಪ್ರೇಯಸಿ ಯಾವ ರೂಪದಲ್ಲಿ ಸಿಗ್ತಾಳೋ ಅನ್ನೋ ಭೀತಿ, ನೋವಿನಲ್ಲಿ ಅನ್ಸಿಲ್​ ಕೊರಗುತ್ತಿದ್ದನು. ಹೀಗೆ ಮೃತದೇಹಗಳಿಗೆ ಸ್ನಾನ ಮಾಡಿಸುತ್ತಿದ್ದಾಗ ಅನ್ಸಿಲ್​ಗೆ ಶಾಕ್​ ಎದುರಾಗಿದೆ.
ಕಣ್ಣೀರು ಹಾಕಲು ಶುರು ಮಾಡಿದ ಪ್ರಿಯಕರ
ಹೀಗೆ ಮೃತದೇಹದ ಸ್ನಾನ ಮಾಡಿಸುವಾಗ ಪ್ರಿಯಕರ ಕಣ್ಣೆದುರಿಗೆ ಪ್ರೇಯಸಿಯ ತಂದೆಯ ಮೃತದೇಹ ಕಾಣಿಸಿದೆ. ಈ ವೇಳೆ ಪ್ರೇಯಸಿಯು ಮೃತಪಟ್ಟಿರಬೋದು ಎಂದು ಅಕ್ಷರಶಃ ಕಣ್ಣೀರು ಹಾಕಲು ಶುರು ಮಾಡುತ್ತಾನೆ ಅನ್ಸಿಲ್​. ಆದರೆ ಪ್ರೇಯಸಿ ಫಿದಾ ಚುರಲ್ಮಾಲ ದುರಂತದಲ್ಲಿ ತಂದೆ, ಕುಟುಂಬಸ್ಥರನ್ನ ಕಳೆದುಕೊಂಡಿದ್ದು ತಾನು ಮತ್ತು ತಾಯಿ ತಪ್ಪಿಸಿಕೊಂಡು ಬಜಾವ್​ ಆಗಿದ್ದರು.
/newsfirstlive-kannada/media/post_attachments/wp-content/uploads/2024/08/wayanad-28.jpg)
ಪ್ರತ್ಯಕ್ಷಗೊಂಡ ಪ್ರಿಯತಮೆ
ವಯನಾಡಿದ ಭೂಕುಸಿತ ಪ್ರಕರಣ ಸಂಭವಿಸಿ 2 ದಿನದ ಬಳಿಕ ಅನ್ಸಿಲ್​ ಕಣ್ಣೆದುರಿಗೆ ಪ್ರೇಯಸಿ ಫಿದಾ ಕಾಣಸಿಗುತ್ತಾಳೆ. ಇತ್ತ ಜೀವಂತ ಪ್ರೇಯಸಿಯನ್ನ ನೋಡಿದ ಅನ್ಸಿಲ್ ಅಕ್ಷರಶಃ ದಿಗ್ಭ್ರಾಂತನಾಗುತ್ತಾನೆ.
ಭೂಕುಸಿತದಿಂದ ಫಿದಾ ತಂದೆಯನ್ನ ಮಾತ್ರವಲ್ಲ, ಕುಟುಂಬದವರನ್ನು ಕಳೆದುಕೊಂಡಿದ್ದಾಳೆ. ಮಾತ್ರವಲ್ಲದೆ, ದುರಂತದಲ್ಲಿ ಮೊಬೈಲ್ ಎಲ್ಲವೂ ಮಣ್ಣುಪಾಲಾಗಿದೆ. ಈ ದುರ್ಘಟನೆ ವೇಳೆ ಆಕೆಯನ್ನು ಹಾಗೂ ಆಕೆಯ ತಾಯಿಯನ್ನು ರಕ್ಷಣೆ ಮಾಡಲಾಗಿದೆ. ಬಳಿಕ ಹೆಲ್ತ್ ಸೆಂಟರ್​ನಲ್ಲಿ ಸ್ಟೇ ಆಗಿದ್ದಾರೆ. ಈ ವೇಳೆ ಪ್ರಿಯಕರ ಅನ್ಸಿಲ್​ ಪ್ರಿಯತಮೆ ಫಿದಾ ಮತ್ತು ಆಕೆಯ ತಾಯಿ ಕಣ್ಣೆದುರಿಗೆ ಪ್ರತ್ಯಕ್ಷಗೊಂಡಿದ್ದಾರೆ.
ಹೋದ ಜೀವ ಮತ್ತೆ ಬಂದತಾಯ್ತು
ದಿನಲೂ ನೂರಾರು ಮೃತದೇಹಗಳು, ಸಾವಿರಾರು ನಿರಾಶ್ರಿತರು ಹೆಲ್ತ್​ ಸೆಂಟರ್​ಗೆ ಬರುತ್ತಿದ್ದರು. ಆದರೆ ಈ ವೇಳೆ ಒಬ್ಬರಿಗೊಬ್ಬರು ಕಣ್ಣಿಗೆ ಬಿದ್ದಿರಲಿಲ್ಲ. ಡೆವಲಪ್ ಮೆಂಟ್ ಕಡಿಮೆಯಾಗುತ್ತಿದ್ದ ಹಾಗೆಯೇ ಅನಿರೀಕ್ಷಿತ ಭೇಟಿಯಾಗಿದೆ. ಬಳಿಕ ಪ್ರೇಯಸಿಯನ್ನು ಕಂಡು ಪ್ರಿಯಕರ ಅನ್ಸಿಲ್​ಗೆ ಮತ್ತೊಮ್ಮೆ ಜೀವ ಬಂದಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us