VIDEO: ಚುನಾವಣಾ ಪ್ರಚಾರದ ವೇಳೆ ‘ಸೆಕ್ಸ್’​​​ ನನ್ನ ಸೋರ್ಸ್​​ ಆಫ್​ ಎನರ್ಜಿ ಎಂದ್ರಾ ಮಹುವಾ?

author-image
admin
Updated On
ಲೋಕಸಭಾ ಸದಸ್ಯ ಸ್ಥಾನದಿಂದಲೇ ಮಹುವಾ ಮೊಯಿತ್ರಾ ಉಚ್ಛಾಟನೆ?; ಸಂಸತ್ ಎಥಿಕ್ಸ್ ಸಮಿತಿ ಮಹತ್ವದ ಒಪ್ಪಿಗೆ
Advertisment
  • ವರದಿಗಾರ ಕೇಳಿದ ಪ್ರಶ್ನೆಗೆ ಮಹುವಾ ಮೊಯಿತ್ರಾ ಶಾಕಿಂಗ್ ರಿಯಾಕ್ಷನ್
  • ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ
  • ಮಹುವಾ ಮೊಯಿತ್ರಾ ಅವರು ಮಾತನಾಡಿರೋ ವಿಡಿಯೋ ವೈರಲ್!

ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ಹಲ್‌ಚಲ್ ಸೃಷ್ಟಿಸುತ್ತಿವೆ. ನಟಿ ಹೇಮಾಮಾಲಿನಿ ಬಗ್ಗೆ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ನೀಡಿದ್ದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಮಹುವಾ ಮೊಯಿತ್ರಾ ಅವರು ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ಲಲು ಪಣ ತೊಟ್ಟಿರುವ ಮಹುವಾ ಮೊಯಿತ್ರಾ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

publive-image

ಕೃಷ್ಣನಗರದ ಚುನಾವಣಾ ಪ್ರಚಾರದ ವೇಳೆ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವರದಿಗೊರರೊಬ್ಬರು ಕೇಳಿದ ಪ್ರಶ್ನೆಗೆ ಮಹುವಾ ಮೊಯಿತ್ರಾ ಅವರು ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.

ನಿಮ್ಮ ಎನರ್ಜಿ ಏನು ಅಂತ ಕೇಳಿದ ಪ್ರಶ್ನೆಗೆ ನನ್ನ ಎನರ್ಜಿ ಸೆಕ್ಸ್‌ ಎಂದಿದ್ದಾರೆ ಎನ್ನಲಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟಿಎಂಸಿ ನಾಯಕಿಯ ವಿಡಿಯೋ ನೋಟಿ ನೆಟ್ಟಿಗರು ಶಾಕ್ ಆಗಿದ್ದಾರೆ.


">April 18, 2024

ಮಹುವಾ ಮೊಯಿತ್ರಾ ಅವರ ವಿಡಿಯೋ ವೈರಲ್ ಆಗಿದ್ದು ಪ್ರಶ್ನೆ ಕೇಳಿದ ವರದಿಗಾರ ತಮಾಲ್ ಸಹಾ ಅವರು ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ವಿಡಿಯೋ ಫೇಕ್ ವಿಡಿಯೋ ಆಗಿದೆ. ನಿಮ್ಮ ಎನರ್ಜಿ ಏನು ಅಂತ ಕೇಳಿದ್ದಕ್ಕೆ ಅವರು ಎಗ್ಸ್‌ (ಮೊಟ್ಟೆಗಳು) ಎಂದು ಉತ್ತರಿಸಿದ್ದಾರೆ. ಅವರು ಸೆಕ್ಸ್ ಅನ್ನೋ ಪದವನ್ನು ಬಳಿಸಿಲ್ಲ. ವೈರಲ್ ಆದ ವಿಡಿಯೋಗೆ ನಕಲಿ ಆಡಿಯೋ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment