Advertisment

ಹಿಂದೂ ಸಂಪ್ರದಾಯದಂತೆ ಅತ್ತೆ ಜೊತೆ ಸೊಸೆ ಸಲಿಂಗ ವಿವಾಹ; ಕಾರಣ ಏನು ಗೊತ್ತಾ? VIDEO

author-image
admin
Updated On
ಹಿಂದೂ ಸಂಪ್ರದಾಯದಂತೆ ಅತ್ತೆ ಜೊತೆ ಸೊಸೆ ಸಲಿಂಗ ವಿವಾಹ; ಕಾರಣ ಏನು ಗೊತ್ತಾ? VIDEO
Advertisment
  • ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯಂತೆ ಅತ್ತೆ, ಸೊಸೆ ಮದುವೆ
  • ಕಳೆದ ಮೂರು ವರ್ಷದಿಂದ ಇವರಿಬ್ಬರ ಮಧ್ಯೆ ಸಲಿಂಗ ಸಂಬಂಧ
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಕುಟುಂಬಸ್ಥರಿಗೆ ಶಾಕ್!

ಪಾಟ್ನಾ: ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಇಬ್ಬರು ಯುವತಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪರೂಪದ ಘಟನೆ ನಡೆದಿದೆ. ದೇವಸ್ಥಾನದಲ್ಲಿ ಅತ್ತೆ, ಸೊಸೆ ಹಿಂದೂ ಸಂಪ್ರದಾಯಂತೆ ಮದುವೆಯಾಗಿದ್ದು ಎಲ್ಲರೂ ಉಬ್ಬೇರುವಂತೆ ಮಾಡಿದೆ. ಇವರಿಬ್ಬರ ಮದುವೆ ಎಷ್ಟು ಡಿಫರೆಂಟ್ ಆಗಿದ್ಯೋ ಇವರ ಲವ್ ಸ್ಟೋರಿ ಕೂಡ ಅಷ್ಟೇ ಡಿಫರೆಂಟ್ ಆಗಿದೆ.

Advertisment

ಇದನ್ನೂ ಓದಿ:3 ವರ್ಷದಲ್ಲಿ 5 ಮದುವೆ ಕೇಸ್​​ಗೆ ಬಿಗ್​ ಟ್ವಿಸ್ಟ್.. ಖತರ್ನಾಕ್ ಗ್ಯಾಂಗ್​ ಅಸಲಿ ವಿಚಾರ ಕೇಳಿದ್ರೆ ಶಾಕ್ ಆಗ್ತೀರಾ! 

ಕಲಿಯುಗದಲ್ಲಿ ಏನ್‌ ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಬಿಹಾರದಲ್ಲಿ ನಡೆದಿರುವ ಈ ಮದುವೆ ಮೇಲ್ನೋಟಕ್ಕೆ ಸಲಿಂಗ ವಿವಾಹವಾಗಿದೆ. ಆದರೆ ಇವರಿಬ್ಬರು ಕಳೆದ ಮೂರು ವರ್ಷದಿಂದ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ವೈವಾಹಿಕ ಜೀವನ ಆರಂಭಿಸಿದ್ದಾರೆ.

publive-image

ಬಲು ಅಪರೂಪದ ಮದುವೆ!
ಹೀಗೆ ಶಾಸ್ತ್ರೋಕ್ತವಾಗಿ ಮದುವೆ ಆಗಿರೋ ಮಹಿಳೆಯರ ಹೆಸರು ಸುಮನ್ ಹಾಗೂ ಶೋಭಾ. ಸುಮನ್‌ಗೆ ಈಗಾಗಲೇ ಮದುವೆ ಆಗಿದ್ದು, ಗಂಡನ ಬಿಟ್ಟು ಜೀವನ ಸಾಗಿಸುತ್ತಿದ್ದಳು. ಒಂಟಿಯಾಗಿದ್ದ ಸುಮನ್‌ಗೆ ಸೊಸೆ ಶೋಭಾ ಮೇಲೆ ಪ್ರೀತಿಯಾಗಿದೆ. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಅತ್ತೆ, ಸೊಸೆ ಮದುವೆ ಆಗುವ ತೀರ್ಮಾನ ಮಾಡಿದ್ದು, ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisment

ಇದನ್ನೂ ಓದಿ: ನೀರಜ್ ಚೋಪ್ರಾ, ಮನು ಬಾಕರ್ ಮದುವೆ ಆಗ್ತಾರಾ? ಆತ್ಮೀಯ ಮಾತುಕತೆಯ ವಿಡಿಯೋ ವೈರಲ್! 

ಸುಮನ್ ಹಾಗೂ ಶೋಭಾ ಇಬ್ಬರು ಕಳೆದ ಮೂರು ವರ್ಷಗಳಿಂದ ಸಲಿಂಗ ಸಂಬಂಧ ಹೊಂದಿದ್ದರು. ಇದೀಗ ದೇವಸ್ಥಾನದಲ್ಲಿ ಮದುವೆಯಾಗಿರೋ ಇವರಿಬ್ಬರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹಲ್‌ಚಲ್‌ ಸೃಷ್ಟಿಸಿದೆ. ಸುಮನ್ ಅವರು ಹೂವಿನ ಹಾರ ಬದಲಾಯಿಸಿಕೊಂಡು ಶೋಭಾಗೆ ದೇವರ ಸಾಕ್ಷಿಯಾಗಿ ಮಂಗಳಸೂತ್ರ ಕಟ್ಟಿದ್ದಾರೆ. ಅಗ್ನಿ ಸಾಕ್ಷಿಯಾಗಿ ಸಪ್ತಪದಿ ತುಳಿದು ಏಳೇಳು ಜನ್ಮದಲ್ಲೂ ಒಟ್ಟಿಗೆ ಬಾಳುವ ಸಂಕಲ್ಪವನ್ನು ಮಾಡಿದ್ದಾರೆ.

Advertisment


">August 12, 2024

ಸುಮನ್, ಶೋಭಾ ಪ್ರೀತಿ ಮಾತು!
ಸಲಿಂಗ ವಿವಾಹದ ಬಳಿಕ ಸುಮನ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಶೋಭಾ ಅಂದ್ರೆ ನನಗೆ ಅಚ್ಚುಮೆಚ್ಚು. ನನ್ನ ಜೀವನದಲ್ಲಿ ಶೋಭಾಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಶೋಭಾ ಬೇರೆ ಪುರುಷನನ್ನು ಮದುವೆ ಆಗುವುದನ್ನು ನಾನು ಊಹಿಸಿಕೊಳ್ಳಲು ಆಗಲ್ಲ. ಒಬ್ಬರೊನ್ನಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದಿದ್ದಾರೆ.

ಶೋಭಾ ಕೂಡ ಸುಮನ್ ಅವರ ರೀತಿಯೇ ಮಾತನಾಡಿದ್ದು, ನಮ್ಮ ಮದುವೆಯನ್ನ ನೋಡಿ ಇಡೀ ಪ್ರಪಂಚ ಏನೇ ಮಾತನಾಡಿದ್ರೂ ನಮಗೆ ಬೇಕಾಗಿಲ್ಲ. ನಾವಿಬ್ಬರು ಒಟ್ಟಿಗೆ ಜೀವನ ಸಾಗಿಸುತ್ತೇವೆ ಎಂದಿದ್ದಾರೆ. ಸುಮನ್ ಹಾಗೂ ಶೋಭಾ ತಮ್ಮ ಮದುವೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕುಟುಂಬಸ್ಥರು ಬಿಗ್ ಶಾಕ್ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಇದೊಂದು ಅಸ್ವಾಭಾವಿಕ, ನೈಸರ್ಗಿಕ ನಿಯಮಗಳಿಗೆ ವಿರುದ್ಧವಾದದ್ದು ಎಂದು ಟೀಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment