newsfirstkannada.com

ಬಿಗಿ ಭದ್ರತೆ ಮಧ್ಯೆಯೂ ಶಿವಮೊಗ್ಗದಲ್ಲಿ ಅಲ್ಲಾಹು ಅಕ್ಬರ್ ಎಂದ ಮಹಿಳೆ.. ವಿಚಾರಣೆ ವೇಳೆ ಬಯಲಾಯ್ತು ಸತ್ಯ

Share :

Published January 22, 2024 at 3:10pm

    ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ

    ಶಿವಪ್ಪ ನಾಯಕ ವೃತ್ತದ ಬಳಿ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ

    ಮಹಿಳೆಯ ಪೋಷಕರ ವಿಚಾರಣೆ, ಪೊಲೀಸರಿಂದ ಮುಂದುವರಿದ ತನಿಖೆ

ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮಂದಿರ ಉದ್ಘಾಟನೆ ನೆರವೇರಿದೆ. ಈ ಸಮಯದಲ್ಲಿ ಮಹಿಳೆಯೊಬ್ಬಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶಿವಪ್ಪ ನಾಯಕ ವೃತ್ತದ ಬಳಿ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮಹಿಳೆಯನ್ನು ಅಂಜುಂ ಎಂದು ಗುರುತಿಸಲಾಗಿದೆ. ತಕ್ಷಣವೇ ಅಲ್ಲಿದ್ದ ಪೊಲೀಸರು ಆಕೆಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರ ನಡೆಸಿದ್ದಾರೆ. ವಿಚಾರಣೆ ವೇಳೆ ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ.

ಘಟನೆ ಸಂಭಂದ ಎಸ್ಪಿ ಮಿಥುನ್ ಕುಮಾರ್ ಮಾತನಾಡಿದ್ದು, ಆಕೆಯ ಪೋಷಕರನ್ನು ಕರೆದು ವಿಚಾರಣೆ ನಡೆಸಲಾಗಿದೆ. ಶಿವಮೊಗ್ಗ ಈ ಮಹಿಳೆಯನ್ನ ದಾವಣಗೆರೆಗೆ ಮದುವೆ ಮಾಡಿ ಕೊಡಲಾಗಿತ್ತು. ಮಾನಸಿಕ ತೊಂದರೆಗೆ ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ.

ಮಹಿಳೆ ಕೆಲ ತಿಂಗಳಿಂದ ತಂದೆಯ ಮನೆಯಲ್ಲಿ ವಾಸವಿದ್ದಾಳೆ. ಎಲ್ಲಾ ಆಯಾಮಗಳಿಂದ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಹಿಳೆಯ ತಂದೆ ಸೈಯದ್ ಅಬ್ಬಾಸ್ ಮಾತನಾಡಿದ್ದು, ಪುತ್ರಿ ಅಂಜುಂ ಅರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಳೆ. 2018 ರಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಈ ಸಂಬಂಧ ವಿವಿಧ ಆಸ್ಪತ್ರೆಗಳಲ್ಲಿ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸುಸುತ್ತಿದ್ದೇನೆ.

ಪುತ್ರಿ ಬಿಎಡ್ ಓದಿದ್ದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದಳು. ಆಕೆಯ ಗಂಡನ ಮನೆಯವರು ಸರಿಯಾಗಿ ನೋಡಿಕೊಳ್ಳದ ಕಾರಣ ಆಕೆ ಮಾನಸಿಕ ಅಪಘಾತಕ್ಕೆ ಒಳಗಾಗಿದ್ದಾಳೆ. ಇಂದು ನಡೆದಿರುವ ಘಟನೆ ನನಗೆ ಆಘಾತ ಹಾಗೂ ನೋವು ಉಂಟು ಮಾಡಿದೆ. ಮನೆಯಿಂದ ಹೊರಟಿದ್ದ ಆಕೆಯನ್ನು ನಾನು ಫಾಲೋ ಮಾಡಿದ್ದೆ. ನಾನು ಬರುವಷ್ಟರಲ್ಲಿ ಈ ಘಟನೆ ನಡೆದು ಹೋಗಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ನಾವೆಲ್ಲ ಒಂದಾಗಿ ಬಾಳಬೇಕೆಂದು ಆಕೆಗೆ ಸಾಕಷ್ಟು ಬಾರಿ ತಿಳಿ ಹೇಳಿದ್ದೆ. ಆದರೂ ಇಂದು ಈ ರೀತಿ ವರ್ತಿಸಿದ್ದಾಳೆ. ಹಿಂದೆಂದೂ ಈ ತರಹದ ಘಟನೆ ನಡೆದಿರಲಿಲ್ಲ. ಆಕೆ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅಂಜುಂ ತಂದೆ ಅಬ್ಬಾಸ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗಿ ಭದ್ರತೆ ಮಧ್ಯೆಯೂ ಶಿವಮೊಗ್ಗದಲ್ಲಿ ಅಲ್ಲಾಹು ಅಕ್ಬರ್ ಎಂದ ಮಹಿಳೆ.. ವಿಚಾರಣೆ ವೇಳೆ ಬಯಲಾಯ್ತು ಸತ್ಯ

https://newsfirstlive.com/wp-content/uploads/2024/01/Shivmogga-2.jpg

Load More