newsfirstkannada.com

ನಾನು ಎಸ್​ಪಿ.. 30 ಗ್ರಾಂ ಚಿನ್ನ, 2 ಸಾವಿರ ರೂಪಾಯಿ ಪಡೆದು ವಂಚಿಸಿದ ಮಹಿಳೆ; ನಕಲಿ ನಿವೇದಿತಾಳ ಮುಖವಾಡ ಬಯಲು

Share :

Published March 24, 2024 at 9:07am

Update March 24, 2024 at 2:48pm

    ಖಾಕಿ ವೇಷ ಧರಿಸಿ, ಪೊಲೀಸ್ ಅಧಿಕಾರಿ ಎಂದು ಹೇಳಿ ವಂಚಿಸಿದ ಮಹಿಳೆ

    20 ಗ್ರಾಂ ಚಿನ್ನದ ನೆಕ್ಲೆಸ್, 10 ಗ್ರಾಂ ಚಿನ್ನದ ಉಂಗುರ ಮತ್ತು ಹಣ ಪಡೆದು ಪಂಗನಾಮ

    ನಕಲಿ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಹಲವು ಖಾಸಗಿ ಕಾರ್ಯಕ್ರಮದಲ್ಲಿ ಮಹಿಳೆ ಭಾಗಿ

ಹಾಸನ: ಮಹಿಳೆಯೊಬ್ಬಳು ಖಾಕಿ ವೇಷ ಧರಿಸಿ ಪೊಲೀಸ್ ಅಧಿಕಾರಿ ಎಂದು ಹೇಳಿ ಚಿನ್ನಾಭರಣ, ಹಣ ಪಡೆದು ವಂಚಿಸಿರುವ ಘಟನೆ  ಹಾಸನ ನಗರದ ವಿಜಯನಗರ ಬಡಾವಣೆ ಎರಡನೇ ಹಂತದಲ್ಲಿ ನಡೆದಿದೆ. ವಂಚಕಿಯನ್ನು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಲಕ್ಕನಹಳ್ಳಿ ಗ್ರಾಮದ ನಿವೇದಿತಾ.ಎಂ ಎಂದು ಗುರುತಿಸಲಾಗಿದೆ.

ನಾನು ಎಸ್​ಪಿ.. ವಿಚಾರಣೆಗೆ ಬಂದಿದ್ದೇನೆ

ನಾಲ್ಕು ತಿಂಗಳ ಹಿಂದೆ ಕವನ ಎಂಬಾಕೆ ಅಗಲಹಳ್ಳಿ ಗ್ರಾಮದ ಸುನೀಲ್ ಎಂಬುವರನ್ನು ಮದುವೆಯಾಗಿದ್ದಳು. ಆದರೆ ಸಂಸಾರದಲ್ಲಿ ಹೊಂದಾಣಿಕೆ ಆಗದೆ ಕೊನೆಗೆ ತವರು ಮನೆಗೆ ಬಂದು ವಾಸವಿದ್ದಳು. ಅತ್ತ ಸುನೀಲ್‌ಗೆ ನಿವೇದಿತಾ.ಎಂ ಪರಿಚಯವಿದ್ದಳು. ನಾನು ಪೊಲೀಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದಳು. ಕೊನೆಗೆ ಸಮವಸ್ತ್ರದಲ್ಲಿ ಕವನ ಮನೆಗೆ ಬಂದು, ನಾನು ಎಸ್‌ಪಿ ವಿಚಾರಣೆಗಾಗಿ ಬಂದಿದ್ದೇನೆ ಎಂದು ಹೇಳಿದ್ದಳು.

ನಕಲಿ ನಿವೇದಿತಾ

ನಿನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇನೆಂದು ಎಂದು ಹೇಳಿದ ನಕಲಿ ಪೊಲೀಸ್ ನಿವೇದಿತಾ ಕವನಾಳ ಮೊಬೈಲ್ ಪೋನ್ ಕಿತ್ತುಕೊಂಡಿದ್ದಳು. ಸುನೀಲ್‌ನನ್ನು ಕವನ ಮನೆಗೆ ಕರೆದುಕೊಂಡು ಬಂದು ನಾನು ಎಸ್‌ಪಿ, ನಿಮ್ಮ ಮಗಳಿಗೆ ಬುದ್ಧಿ ಹೇಳಿ, ಡಿವೋರ್ಸ್ ಕೊಡಿಸಿ ಎಂದು ಬೆದರಿಕೆ ಹಾಕಿದ್ದಳು. ಬಳಿಕ ಕವನಳನ್ನು ಹೆದರಿಸಿ 20 ಗ್ರಾಂ ಚಿನ್ನದ ನಕ್ಲೆಸ್, 10 ಗ್ರಾಂ ಚಿನ್ನದ ಉಂಗುರ, 2000 ಸಾವಿರ ನಗದು ಪಡೆದುಕೊಂಡು ಹೋಗಿದ್ದಾಳೆ.

ಇದನ್ನೂ ಓದಿ: ಪೊಲೀಸ್​ ಠಾಣೆ ಆವರಣದಲ್ಲಿ ಅನುಮಾನಾಸ್ಪದ ವ್ಯಕ್ತಿಯ ಕೊಳೆತ ಶವ ಪತ್ತೆ; ಇದು ಕೊಲೆಯೋ? ಆತ್ಮಹತ್ಯೆಯೋ?

ಹಲವು ಕಾರ್ಯಕ್ರಮದಲ್ಲಿ ನಕಲಿ ಪೊಲೀಸ್​ ಭಾಗಿ

ನಿವೇದಿತಾಳನ್ನು ಬಂಧಿಸಿ ತನಿಖೆ ನಡೆಸಿದಾಗ ಸ್ಪೋಟಕ‌ ಮಾಹಿತಿ ಬಯಲಾಗಿದೆ. ಮಾತ್ರವಲ್ಲದೆ, ನಿವೇದಿತಾ ಪೊಲೀಸ್ ಅಧಿಕಾರಿ ಎಂದು ಮುಖ್ಯ ಅತಿಥಿಯಾಗಿ ಹಲವು ಪ್ರತಿಷ್ಠಿತ ಖಾಸಗಿ ಶಾಲೆಗಳು ಆಕೆಯನ್ನು ಆಹ್ವಾನಿಸಿದೆ. ಆಕೆ ಕೂಡ ಹಲವು ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲೇ ತೆರಳಿ ಸುಳ್ಳು ಹೇಳಿ ಭಾಗಿಯಾಗಿದ್ದಾಳೆ. ಸದ್ಯ ನಕಲಿ ನಿವೇಧಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಎಸ್​ಪಿ.. 30 ಗ್ರಾಂ ಚಿನ್ನ, 2 ಸಾವಿರ ರೂಪಾಯಿ ಪಡೆದು ವಂಚಿಸಿದ ಮಹಿಳೆ; ನಕಲಿ ನಿವೇದಿತಾಳ ಮುಖವಾಡ ಬಯಲು

https://newsfirstlive.com/wp-content/uploads/2024/03/fake-police.jpg

Load More