/newsfirstlive-kannada/media/post_attachments/wp-content/uploads/2025/05/mangaluru-rain1.jpg)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಭಾರೀ ಅನಾಹುತಗಳು ಸಂಭವಿಸುತ್ತಿವೆ. ಉಳ್ಳಾಲದ ದೇರಳಕಟ್ಟೆ ಮೊಂಟೆದ ಪಂಬದ ಹಿತ್ಲುವಿನಲ್ಲಿ ಘೋರ ದುರಂತ ಸಂಭವಿಸಿದ್ದು, ಮನೆ ಮೇಲೆ ಗುಡ್ಡ ಕುಸಿದು ಐವರು ಸಿಲುಕಿಕೊಂಡಿದ್ದಾರೆ.
ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಬಿದ್ದಿದೆ. ದುರ್ಘಟನೆಯಲ್ಲಿ ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಪೂಜಾರಿ ಜೀವ ಕಳೆದುಕೊಂಡಿದ್ದಾರೆ. ಮನೆಯಡಿ ಸಿಲುಕಿರುವ ಮಹಿಳೆ ಮತ್ತು ಇಬ್ಬರು ಮಕ್ಕಳ ರಕ್ಷಣಾಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ NDRF, SDRF ನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ಭಾರೀ ಮಳೆ.. ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ..
ಕರುಳು ಹಿಂಡುವ ದೃಶ್ಯ..
ಗುಡ್ಡ ಕುಸಿತದಿಂದ ತಾಯಿ ಹಾಗೂ ಇಬ್ಬರು ಮಕ್ಕಳು ಅವಶೇಷಗಳಡಿ ಸಿಲುಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ಆ ವಿಡಿಯೋದಲ್ಲಿ ತಾಯಿ ಮಗುವನ್ನು ತಬ್ಬಿಕೊಂಡಿದ್ದಾಳೆ. ಒಂದು ಮಗು ಎರಡೂ ಕೈಗಳನ್ನು ಅಲ್ಲಾಡಿಸುತ್ತಿದೆ. ಇತ್ತ ತಾಯಿ ರಕ್ಷಣೆಗಾಗಿ ಕೂಗುತ್ತಿದ್ದಾಳೆ. ಅದರ ಪಕ್ಕದಲ್ಲೇ ಇನ್ನೊಂದು ಮಗು ಮಲಗಿದೆ. ಈ ವಿಡಿಯೋ ಹೃದಯ ವಿದ್ರಾವಕವಾಗಿದ್ದು, ನೋಡುಗರ ಕರುಳು ಚುರ್ ಎನ್ನುವಂತಿದೆ..
ಇದನ್ನೂ ಓದಿ: ಭೀಕರ ಮಳೆಗೆ ಮಂಗಳೂರಲ್ಲಿ ಘೋರ ದುರಂತ.. ಮನೆ ಮೇಲೆ ಗುಡ್ಡ ಕುಸಿದು 7 ವರ್ಷದ ಕಂದಮ್ಮ ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ