/newsfirstlive-kannada/media/post_attachments/wp-content/uploads/2024/08/Shivmogga-Cat-Bight.jpg)
ಶಿವಮೊಗ್ಗ: ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ದುರ್ಘಟನೆ ಸಂಭವಿಸಿದೆ. 50 ವರ್ಷ ವಯಸ್ಸಿನ ಗಂಗೀಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.
ಬೆಕ್ಕು ಎರಡು ತಿಂಗಳ ಹಿಂದೆ ಮಹಿಳೆಗೆ ಕಚ್ಚಿತ್ತು. ಬೆಕ್ಕು ಕಚ್ಚಿದ ಪರಿಣಾಮ ರೇಬಿಸ್ ಕಾಯಿಲೆಗೆ ಮಹಿಳೆ ತುತ್ತಾಗಿದ್ದಳು. ಮೊದಲು ತರಲಘಟ್ಟದ ಕ್ಯಾಂಪ್​ನಲ್ಲಿರುವ ಯುವನೋರ್ವನ ಮೇಲೆ ದಾಳಿ ಮಾಡಿತ್ತು. ಬಳಿಕ ಮಹಿಳೆಯ ಮೇಲೂ ದಾಳಿ ಮಾಡಿದೆ.
ಇಂಜೆಕ್ಷನ್​ ಪಡೆಯದೇ ನಿರ್ಲಕ್ಷ
ಮಹಿಳೆ ಕಾಲಿಗೆ ಕಚ್ಚಿದ ಕಾರಣ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜೆಕ್ಷನ್ ಪಡೆದು ಹುಷಾರಾಗಿದ್ದಳು. ಈ ಕಾರಣಕ್ಕೆ ಮಹಿಳೆ ಚೇತರಿಕೆ ಕಂಡ ಹಿನ್ನೆಲೆ ಇಂಜೆಕ್ಷನ್​ ಪಡೆಯದೆ ಸುಮ್ಮನಾಗಿದ್ದಳು. ಚೇತರಿಕೆ ಕಂಡ ಹುಮ್ಮಸ್ಸಿನಲ್ಲಿ ಮಹಿಳೆ ಇಂಜೆಕ್ಷನ್​​ ತೆಗೆದುಕೊಳ್ಳುವುದನ್ನು ನಿರ್ಲಕ್ಷಿಸಿದ್ದಳು.
ನಾಟಿ ಕೆಲಸಕ್ಕೆ ಹೋದ ಮಹಿಳೆ
ಹುಷಾರಾದ ಬಳಿಕ ಮಹಿಳೆ ನಾಟಿ ಮಾಡಲು ಹೊರಟಿದ್ದಾರೆ. ನೀರಿಗೆ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ರೇಬಿಸ್​ನಿಂದಾಗಿ ಅನಾರೋಗ್ಯ ಕಾಡಿದ ಪರಿಣಾಮ ಗಂಗೀಬಾಯಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಆರೋಗ್ಯ ಅಧಿಕಾರಿ ಬೆಕ್ಕು ಕಚ್ಚಿದರೂ ರೇಬಿಸ್ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬೇಸರ ಸಂಗತಿ ಎಂದರೆ ನಿನ್ನೆ ವಿಶ್ವ ಬೆಕ್ಕುಳ ದಿನಾಚರಣೆಯಾಗಿದ್ದು, ಇಂದು ಮಹಿಳೆ ಗಂಗೀಬಾಯಿ ಸಾವನ್ನಪ್ಪಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us