Advertisment

ಸಿಲಿಕಾನ್ ಸಿಟಿಯಲ್ಲಿ ಭೀಕರ ಘಟನೆ.. ಎಲ್ರೂ ನೋಡ್​ ನೋಡ್ತಿದ್ದಂತೆ ಟೆರಸ್​ ಮೇಲಿನಿಂದ ಬಿದ್ದ ಮಹಿಳೆ

author-image
Bheemappa
Updated On
ಸಿಲಿಕಾನ್ ಸಿಟಿಯಲ್ಲಿ ಭೀಕರ ಘಟನೆ.. ಎಲ್ರೂ ನೋಡ್​ ನೋಡ್ತಿದ್ದಂತೆ ಟೆರಸ್​ ಮೇಲಿನಿಂದ ಬಿದ್ದ ಮಹಿಳೆ
Advertisment
  • ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
  • ರಾಜಧಾನಿಯಲ್ಲಿ ನಡೆಯಿತು ಭಯಾನಕ ಘಟನೆ, ಮಹಿಳೆ ಗಂಭೀರ
  • ಕಟ್ಟಡ ಮೇಲಿಂದ ಬೀಳುತ್ತಿರುವ ಮಹಿಳೆ ದೃಶ್ಯ ಮೊಬೈಲ್​ನಲ್ಲಿ ಸೆರೆ

ಇತ್ತೀಚೆಗೆ ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಮಹಿಳೆಯೊಬ್ಬಳು ಟೆರೇಸ್ ಮೇಲಿಂದ ನೋಡನೋಡ್ತಿದ್ದಂತೆ ಕೈ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿರೋ ಘಟನೆ ರಾಜಧಾನಿಯಲ್ಲಿ ನಡೆದಿದೆ. ಮಹಿಳೆ ಕಟ್ಟಡದ ಮೇಲಿಂದ ಬೀಳುವ ದೃಶ್ಯ ಎದೆ ನಡುಗಿಸುವಂತಿದೆ.

Advertisment

publive-image

ಆಕೆ ಬೀಳದಂತೆ ಎರಡೂ ಕೈಗಳನ್ನು ಹಿಡಿದಿರುವ ಪತಿ

ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕನಕನಗರದ ಬಡಾವಣೆಯ ನಿವಾಸಿ 27 ವರ್ಷದ ರುಬಾರ್ ಎಂಬುವಳು ಕಟ್ಟಡದ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ. ರುಬಾಯ್ ಪತಿ ಆಕೆಯ ಕೈಗಳನ್ನು ಬಲವಾಗಿ ಹಿಡಿದುಕೊಂಡಿದ್ದ. ಆದ್ರೆ ಆತನ ಕೈ ಜಾರಿ ರುಬಾಯ್ ಕೆಳಗೆ ಬಿದ್ದಿದ್ದಾಳೆ. ಇನ್ನು ಆಕೆ ಕೆಳಗೆ ಬೀಳುವುದನ್ನು ನೋಡ್ತಿದ್ದ ಕೆಲ ಸ್ಥಳೀಯರು ಆಕೆಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ.  ಕಟ್ಟಡದ ಕೆಳಗೆ ಪಾರ್ಕ್​ ಮಾಡಲಾಗಿದ್ದ ಬೈಕ್​ಗಳ ಮೇಲೆ ಬಿದ್ದ ರುಬಾಯ್ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಆಟೋದಲ್ಲಿ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗ್ತಿದ್ದು ಸದ್ಯ ಆಕೆ ಕೋಮಾದಲ್ಲಿದ್ದಾಳೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯರ ಮೊಬೈಲ್​​ನಲ್ಲಿ ಸೆರೆಯಾಗಿದ್ದು ಎದೆ ಝಲ್ ಎನಿಸುವಂತಿದೆ.

ಘಟನೆ ನಡೆದಿದ್ದು ಏಕೆ?

  • ಕಟ್ಟಡ ಮೇಲಿಂದ ಬಿದ್ದ ಮಹಿಳೆಯ ಹೆಸರು ರುಬಾಯ್​
  • ತನ್ನ ಪತಿಯ ಜೊತೆ ಕಟ್ಟಡದಲ್ಲಿ ಕೆಲಸ ಮಾಡ್ತಿದ್ದ ಮಹಿಳೆ
  • ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದ ಮಹಿಳೆ
  • ನೀರಿನ ಮೇಲೆ ಕಾಲಿಟ್ಟು ಕಟ್ಟಡದಿಂದ ಜಾರಿದ ರುಬಾಯ್
  • ಕಳೆದ 3 ದಿನದ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ
  • ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು

ಇದನ್ನೂ ಓದಿ:ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧೆ ಮಾಡಿದ್ರೆ ಸೋಲ್ತಾರಾ? ಕಾಂಗ್ರೆಸ್‌ ಪಕ್ಷದಲ್ಲೇ ಅಪಸ್ವರ; ಕಾರಣವೇನು?

Advertisment

publive-image

ಇನ್ನು ಈ ನಡುವೆ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪಕ್ಕದಲ್ಲಿದ್ದ ಆಟೋಗೆ ಹತ್ತಿಸಲು ಮುಂದಾದಾಗ ಚಾಲಕ ನಿರಾಕರಿಸೋ ಮೂಲಕ ಮಾನವೀಯತೆಯನ್ನೇ ಮರೆತಿದ್ದಾನೆ. ಬಳಿಕ ಸ್ಥಳೀಯರು ಆತನ ಜೊತೆ ಗಲಾಟೆ ಮಾಡಿ ಬಲವಂತವಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಹಿಳೆ ಕಟ್ಟಡದ ಮೇಲಿಂದ ಆಕಸ್ಮಿಕವಾಗಿ ಜಾರಿ ಬಿದ್ದಳಾ ಅಥವಾ ಪತಿ, ಪತ್ನಿ ನಡುವೆ ಕೌಟುಂಬಿಕ ಕಲಹ ಇತ್ತಾ, ಪತಿಯೇ ಆಕೆಯನ್ನು ಮೇಲಿದ ತಳ್ಳಿದ್ನಾ ಎನ್ನುವ ಪ್ರಶ್ನೆಗಳಿಗೆ ಪೊಲೀಸರ ಸಂಪೂರ್ಣ ತನಿಖೆ ಬಳಿಕವಷ್ಟೇ ಉತ್ತರ ತಿಳಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment