/newsfirstlive-kannada/media/post_attachments/wp-content/uploads/2024/07/Tirupati-Bangalore-lady-1.jpg)
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದ ಬೆಂಗಳೂರಿನ ಮಹಿಳೆಗೆ ಆಪತ್ತು ಎದುರಾಗಿದೆ. ಟಿಟಿಡಿಯ ಪದ್ಮಾವತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಗಾಯಗೊಂಡಿರುವ ಮಹಿಳೆಯ ಹೆಸರು ಉಮಾರಾಣಿ.
54 ವರ್ಷದ ಉಮಾರಾಣಿ ಅವರು ಬೆಂಗಳೂರು ಗ್ರಾಮಾಂತರ ಜಿಗಣಿ ಅರಗದ್ದೆಯ ನಿವಾಸಿ. ಕಳೆದ ಜುಲೈ 10ರಂದು ಉಮಾರಾಣಿ ಬೆಂಗಳೂರಿನಿಂದ ತಿರುಪತಿ ಪ್ರವಾಸ ಕೈಗೊಂಡಿದ್ದರು. ಅಂದು ಸಂಜೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಧನ್ಯತಾ ಭಾವದಲ್ಲಿದ್ದರು.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಗನ ಕೊಂದು ಮಲಗಿಸಿದ ತಾಯಿ ಕೇಸ್‌ಗೆ ಹೊಸ ಟ್ವಿಸ್ಟ್.. ಅಸಲಿಗೆ ಆಗಿದ್ದೇನು?
ಉಮಾರಾಣಿ ಅವರು ತಿಮ್ಮಪ್ಪನ ದರ್ಶನ ಮುಗಿದ ಬಳಿಕ ಜಪಾಲಿ ಟೆಂಪಲ್ ಆಂಜನೇಯ ಸ್ವಾಮಿಯ ದರ್ಶನಕ್ಕೆ ಹೊರಟಿದ್ದರು. ಆಗ ಒಣಗಿದ ಮರದ ಕೊಂಬೆ ಇವರ ಮೇಲೆ ಬಿದ್ದಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಲ್ಲಿ ನೆರೆದಿದ್ದ ಸ್ಥಳೀಯರು ತೀವ್ರ ಅಸ್ವಸ್ಥರಾಗಿದ್ದ ಉಮಾರಾಣಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯ ಟಿಟಿಡಿಯ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ