newsfirstkannada.com

ಗೋಕರ್ಣ ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆ ದಿಢೀರ್​ ನಾಪತ್ತೆ; ಹಲವು ಅನುಮಾನ!

Share :

Published February 7, 2024 at 5:27pm

  ಕಾಟೇಜ್‌ನಿಂದ ಹೊರ ಹೋಗಿದ್ದ ಮಹಿಳೆ ಏಕಾಏಕಿ ಕಾಣೆ

  ಪತಿ ದೈಯಮಾಝಕಿಯಿಂದ ಪೋಲಿಸ್ ಠಾಣೆಗೆ ದೂರು

  ಬಂಗ್ಲೆಗುಡ್ಡೆ ನೇಚರ್ ಕಾಟೇಜ್‌ನಲ್ಲಿ ಪತಿ ಜತೆ ತಂಗಿದ್ದ ಪತ್ನಿ

ಕಾರವಾರ: ಗೋಕರ್ಣ ಪ್ರವಾಸಕ್ಕೆ ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾಗಿರೋ ಘಟನೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ. ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಪ್ರವಾಸಿ.

ನಾಪತ್ತೆಯಾದ ಮಹಿಳೆ ಫೆಬ್ರವರಿ 5ರಂದು ಗೋಕರ್ಣ ಬಂಗ್ಲೆಗುಡ್ಡೆ ನೇಚರ್ ಕಾಟೇಜ್‌ನಲ್ಲಿ ಪತಿ ಜೊತೆ ತಂಗಿದ್ದಳು. ಬೆಳಿಗ್ಗೆ 10:30ರ ವೇಳೆ ಕಾಟೇಜ್‌ನಿಂದ ಹೊರ ಹೋಗಿದ್ದಳು. ಆದರೆ ಆ ಮಹಿಳೆ ಮರಳಿ ಕಾಟೇಜ್​ಗೆ ಬಂದಿಲ್ಲ. ಕಾಣೆಯಾದ ಮಹಿಳೆಯ ಪತಿ ದೈ ಯಮಾಝಕಿ ಗೋಕರ್ಣ ಪೋಲಿಸ್ ಠಾಣೆಗೆ ದೌಡಾಯಿಸಿ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಗೋಕರ್ಣ ಪೊಲೀಸರು ನಾಪತ್ತೆಯಾದ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋಕರ್ಣ ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆ ದಿಢೀರ್​ ನಾಪತ್ತೆ; ಹಲವು ಅನುಮಾನ!

https://newsfirstlive.com/wp-content/uploads/2024/02/gokarna.jpg

Load More