newsfirstkannada.com

ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಕೊಲೆ; ಸಂಬಂಧಿ ಮೇಲೆ ಶಂಕೆ

Share :

Published January 20, 2024 at 7:44am

  ಮಹಿಳೆಯ ಜಮೀನು ಪಕ್ಕದಲ್ಲೇ ಸಂಬಂಧಿ ಕೃಷಿ ಮಾಡ್ತಿದ್ದರು

  ಜಮೀನು ಒತ್ತುವರಿ ವಿಚಾರಕ್ಕೆ ಮಹಿಳೆಯನ್ನ ಹತ್ಯೆ ಮಾಡಿದ್ನಾ?

  ಕೊಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ

ರಾಮನಗರ: ಆಸ್ತಿ ವಿಚಾರಕ್ಕೆ ಗಲಾಟೆ ಉಂಟಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಹತ್ಯೆ ಮಾಡಿರುವಂತಹ ಘಟನೆ ಹಾರೋಹಳ್ಳಿ ತಾಲೂಕಿನ ಭದ್ರೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಭದ್ರೇಗೌಡನ ದೊಡ್ಡಿ ಗ್ರಾಮದ ಗೌರಮ್ಮ (55) ಕೊಲೆಯಾದ ಮಹಿಳೆ. ಗೌರಮ್ಮ ಜಮೀನಿನ ಪಕ್ಕದಲ್ಲಿಯೇ ಸಂಬಂಧಿಯೊಬ್ಬರು ವ್ಯವಸಾಯ ಮಾಡಿಕೊಂಡಿದ್ದರು. ಹೀಗಾಗಿ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಮಹಿಳೆಯ ದೂರದ ಸಂಬಂಧಿಯಿಂದಲೇ ಈ ಕೃತ್ಯದ ಆರೋಪ ಮಾಡಲಾಗಿದೆ. ಸ್ಥಳಕ್ಕೆ ರಾಮನಗರ ಎಸ್​ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಕೊಲೆ; ಸಂಬಂಧಿ ಮೇಲೆ ಶಂಕೆ

https://newsfirstlive.com/wp-content/uploads/2024/01/RMG_WOMAN_MURDER.jpg

Load More