ತನಗೆ ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ಓಡಿ ಬಂದ ಗಟ್ಟಿಗಿತ್ತಿ ಮಹಿಳೆ..! ಮುಂದೇನಾಯ್ತು..?

author-image
Ganesh
Updated On
ತನಗೆ ಕಚ್ಚಿದ ಹಾವನ್ನೇ ಹಿಡಿದು ಆಸ್ಪತ್ರೆಗೆ ಓಡಿ ಬಂದ ಗಟ್ಟಿಗಿತ್ತಿ ಮಹಿಳೆ..! ಮುಂದೇನಾಯ್ತು..?
Advertisment
  • ಮಹಿಳೆ ಕೈಯಲ್ಲಿ ಹಾವನ್ನು ನೋಡಿ ಬೆಚ್ಚಿಬಿದ್ದ ವೈದ್ಯರು
  • ಹಾವಿನಿಂದ ಕಚ್ಚಿಸಿಕೊಂಡ ಮಹಿಳೆಯ ಆರೋಗ್ಯ ಏನಾಯ್ತು?
  • ಮಹಿಳೆ ಹಾವನ್ನು ಹಿಡಿದು ಆಸ್ಪತ್ರೆಗೆ ಬಂದಿದ್ದು ಯಾಕೆ?

ಮಹಿಳೆಯೋರ್ವಳು ಹಾವನ್ನು ಹಿಡಿದು ಆಸ್ಪತ್ರೆಗೆ ಓಡಿ ಬಂದು ವೈದ್ಯರ ಮುಂದೆ ಎದುರಾದ ಅಪರೂಪದ ಪ್ರಸಂಗ ತೆಲಂಗಾಣದ ಮುಲುಗು ಜಿಲ್ಲೆಯ ವೆಂಕಟಪುರಂನಲ್ಲಿ ನಡೆದಿದೆ. ಶಾಂತಮ್ಮ ಹಾವನ್ನು ಹಿಡಿದುಕೊಂಡು ಬಂದ ಗಟ್ಟಿಗಿತ್ತಿ ಮಹಿಳೆ.

ಆಗಿದ್ದೇನು..?
ಕೆಲಸದಲ್ಲಿ ಬ್ಯುಸಿ ಇದ್ದ ಮಹಿಳೆಗೆ ಏಕಾಏಕಿ ಹಾವೊಂದು ಬಂದು ಕಚ್ಚಿದೆ. ಹಾವು ಕಚ್ಚುತ್ತಿದ್ದಂತೆಯೇ ಆತಂಕಕ್ಕೆ, ಗಾಬರಿಗೆ ಒಳಗಾಗದ ಆ ಮಹಿಳೆ ಯಾವ ಜಾತಿಯ ಹಾವು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ಹಾವು ಯಾವುದೆಂದು ಗೊತ್ತಾಗಿಲ್ಲ.

ಅದಕ್ಕೆ ಹಿಂದೆ ಮುಂದೆ ನೋಡದ ಮಹಿಳೆ ಹಾವನ್ನು ಹೊಡೆದು ಸಾಯಿಸಿದ್ದಾಳೆ. ಕೊನೆಗೆ ಒಂದು ಬಾಟಲಿಯಲ್ಲಿ ಅದನ್ನು ತುಂಬಿಕೊಂಡು ಹತ್ತಿರದ ಆಸ್ಪತ್ರೆಗೆ ಓಡಿ ಬಂದಿದ್ದಾಳೆ. ಇದನ್ನು ನೋಡಿದ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಒಂದು ಕ್ಷಣ ಬೆರಗಾಗಿದ್ದಾರೆ.

ಯಾವ ಹಾವು ಎಂದು ಗೊತ್ತಾದರೆ ವೈದ್ಯರು ಅದಕ್ಕೆ ಬೇಕಾಗಿರುವ ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಒಂದು ವೇಳೆ ಹಾವು ಯಾವುದೆಂದು ಗೊತ್ತಾಗದಿದ್ದರೆ ಪ್ರಾಪರ್ ಆಗಿರುವ ಆಂಟಿ-ವೇನಮ್ ನೀಡೋದು ಕಷ್ಟವಾಗುತ್ತದೆ. ಇದನ್ನು ತಿಳಿದುಕೊಂಡಿದ್ದ ಶಾಂತಮ್ಮ, ಹಾವನ್ನು ಬಡಿದು ಟ್ರೀಟ್ಮೆಂಟ್​ಗೆ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಸದ್ಯ ಆಕೆಯ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment