newsfirstkannada.com

VIDEO: ‘ವಿಷ ಕೊಡಿ ಸರ್.. ಬದುಕೋಕೆ‌ ಆಗ್ತಿಲ್ಲ’- ಡಿ.ಕೆ ಶಿವಕುಮಾರ್ ಮುಂದೆ ಮಹಿಳೆ ಕಣ್ಣೀರು

Share :

Published January 11, 2024 at 3:15pm

Update January 11, 2024 at 3:08pm

    ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಜನಸ್ಪಂದನಾ ಕಾರ್ಯಕ್ರಮ

    ನಾನು ಕಳೆದ 10 ವರ್ಷದಿಂದ ಎಲ್ಲಾ ಆಫೀಸ್‌ಗಳಿಗೆ ಸುತ್ತುತ್ತಿದ್ದೇನೆ

    ದಯವಿಟ್ಟು ಒಂದು ತುತ್ತು ವಿಷ ಕೊಡಿ ಸರ್ ಎಂದು ಕಣ್ಣೀರಿಟ್ಟ ಮಹಿಳೆ

ಬೆಂಗಳೂರು: ಬಾಗಿಲಿಗೆ ಬಂತು ಸರ್ಕಾರ.. ಸೇವೆಗೆ ಇರಲಿ ಸಹಕಾರ‌ ಎಂಬ ಶೀರ್ಷಿಕೆಯಡಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಜನಸ್ಪಂದನಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇಂದು ಬೊಮ್ಮನಹಳ್ಳಿ ವಲಯದಲ್ಲಿ 2ನೇ ಹಂತದ ಜನ ಸ್ಪಂದನಾ ಕಾರ್ಯಕ್ರಮ ನಡೆದಿದೆ.

ಕನಕಪುರ ರಸ್ತೆಯ ಜರಗನಹಳ್ಳಿಯ ಸರ್ಕಾರಿ ಶಾಲೆ ಮೈದಾನದಲ್ಲಿ ನೂರಾರು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ಹೊತ್ತು ಜನ ಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಡಿಸಿಎಂ ಡಿ.ಕೆ ಶಿವಕುಮಾರ್ ಮುಂದೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ವಿಧಾನಸೌಧದ ಗೇಟ್ ಮುಂದೆ ಸೀಮೆಎಣ್ಣೆ ಸುರಿದುಕೊಂಡ ದಂಪತಿ ಆತ್ಮಹತ್ಯೆಗೆ ಯತ್ನ; ಕಾರಣವೇನು?

ಬೊಮ್ಮನಹಳ್ಳಿಯ ಸಿಂಗಸಂದ್ರ ನಿವಾಸಿಯಾಗಿರುವ ರತ್ನಮ್ಮ ಅವರು ಸರ್‌.. ನಾನು ಕಳೆದ 10 ವರ್ಷದಿಂದ ಎಲ್ಲಾ ಆಫೀಸ್‌ಗಳಿಗೆ ಸುತ್ತುತ್ತಿದ್ದೇನೆ. ಯಾರೂ ನಮಗೆ ಸಪೋರ್ಟ್ ಮಾಡ್ತಿಲ್ಲ. ಸರ್ಕಾರದ ಯಾವ ಸೌಲಭ್ಯವೂ ಸಿಗುತ್ತಿಲ್ಲ. ವಾಸಕ್ಕೆ ಒಂದು ಮನೆಯೂ ಇಲ್ಲ. ದಯವಿಟ್ಟು ಮನೆ ಕೊಡಿಸಿ ಸರ್. ಇಲ್ಲದಿದ್ರೆ ಒಂದು ತುತ್ತು ವಿಷ ಕೊಡಿ ಸರ್ ಅಂತಾ ರತ್ನಮ್ಮ ಡಿಕೆಶಿ ಅವರ ದುಂಬಾಲು ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ವಿಷ ಕೊಡಿ ಸರ್.. ಬದುಕೋಕೆ‌ ಆಗ್ತಿಲ್ಲ’- ಡಿ.ಕೆ ಶಿವಕುಮಾರ್ ಮುಂದೆ ಮಹಿಳೆ ಕಣ್ಣೀರು

https://newsfirstlive.com/wp-content/uploads/2024/01/Dk-Shivakumar-2.jpg

Load More