ನಂಬಿದ್ದವನೇ ಕತ್ತು ಕೊಯ್ದ ಕಥೆ ಇದು
ಬಾಡಿಗೆ ಹಂತಕರು ಪ್ಲಾನ್ ಮಾತ್ರ ರೋಚಕ
ಅದೊಂದು ಆಸೆಗೆ ಬಿತ್ತು ಮಹಿಳೆಯ ಹೆಣ
ಬೆಂಗಳೂರು: ಆಸ್ತಿಗಾಗಿ ಮಹಿಳೆಯನ್ನು ಕೊಂದು ಬಳಿಕ ದೇಹವನ್ನು ಎಕ್ಸೆಲ್ ಬ್ಲೇಡ್ನಲ್ಲಿ ತುಂಡರಿಸಿದ ಭಯಾನಕ ಘಟನೆಯೊಂದು ಬನ್ನೇರುಘಟ್ಟ ಜನತಾಕಾಲೋನಿಯಲ್ಲಿ ಬೆಳಕಿಗೆ ಬಂದಿದೆ. ಗೀತಮ್ಮ ಎಂಬಾಕೆ ಮೃತ ದುರ್ದೈವಿ. ಪಂಕಜ್ ಕುಮಾರ್ ಗೀತಮ್ಮಳನ್ನು ಕೊಂದ ಪ್ರಮುಖ ಆರೋಪಿ.
ಮಹಿಳೆ ಗೀತಮ್ಮ ಒಂಟಿಯಾಗಿ ವಾಸಿಸುತ್ತಿದ್ದಳು. ಹೊರ ರಾಜ್ಯದಿಂದ ಬಂದಿದ್ದ ಪಂಕಜ್ ಕುಮಾರ್ ಎಂಬಾತ ಆಕೆಯ ಬಾಡಿಗೆ ಮನೆಯಲ್ಲಿ 7 ವರ್ಷದಿಂದ ವಾಸವಿದ್ದನು. ಹೀಗಾಗಿ ಗೀತಮ್ಮ ಆತನನ್ನು ಅತಿಯಾಗಿ ನಂಬಿದ್ದಳು. ಪ್ರತಿಯೊಂದು ವಿಚಾರದಲ್ಲೂ ಪಂಕಜ್ನನ್ನೇ ಆಶ್ರಯಿಸಿದ್ದಳು. ಎಟಿಎಂ ನಿಂದ ಹಣ ತೆಗೆಯೋದಕ್ಕೂ ಕೂಡ ಗೀತಮ್ಮ ಪಂಕಜ್ ಗೆ ಕಾರ್ಡ್ ಕೊಡುತ್ತಿದ್ದಳು. ಆದರೆ ಆತನ ಕೈಯಿಂದಲೇ ಗೀತಮ್ಮ ಕೊಲೆಯಾಗಿದ್ದಾಳೆ.
ಬಾಡಿಗೆ ಮನೆಯ ಮೇಲಿತ್ತು ಕಣ್ಣು
ಗೀತಮ್ಮಳ ಹೆಸರಿನಲ್ಲಿ ನಾಲ್ಕು ಬಾಡಿಗೆ ಮನೆಳಿತ್ತು. ಇದರಿಂದ ಬಾಡಿಗೆಯು ಬರುತ್ತಿತ್ತು. ಹೀಗಾಗಿ ಈ ಬಾಡಿಗೆ ಮನೆಯ ಮೇಲೆ ಪಂಕಜ್ ಕಣ್ಣಿಟ್ಟಿದ್ದ. ನಾಲ್ಕು ಬಾಡಿಗೆ ಮನೆಯನ್ನ ಕೂಡ ತನ್ನ ಹೆಸರಿಗೆ ಮಾಡಿಕೊಡುವಂತೆ ಕೇಳಿದ್ದಾನೆ. ಅದಕ್ಕಾಗಿ ಕಾಗದ ಪತ್ರವನ್ನ ಕೂಡ ರೆಡಿ ಮಾಡಿಸಿಕೊಂಡು ಬಂದಿದ್ದ.
ಕೊಲೆ ಮಾಡಲು 4 ಜನರ ಸಹಾಯ
ಗೀತಮ್ಮಗೆ ಇಬ್ಬರು ಹೆಣ್ಣು ಮಕ್ಕಳಿದ್ದು. ಈಗಾಗಲೇ ಅವರಿಗೆ ಮದುವೆಯಾಗಿದೆ. ಹಾಗಾಗಿ ಗೀತಮ್ಮ ನಂತರ ನನಗೆ ಬಾಡಿಗೆ ಮನೆ ಆಗುತ್ತೆ ಎಂದು ಆಕೆಯನ್ನು ಹತ್ಯೆ ಮಾಡಿದ್ದಾನೆ. ಹತ್ಯೆಗೆ ಪಂಕಜ್ 4 ಜನರ ಸಹಾಯವನ್ನು ಪಡೆದಿದ್ದಾನೆ. ಬಳಿಕ ಬಾಡಿಯನ್ನು ಸಾಗಿಸಲು ಯೋಚಿಸಿದ್ದಾನೆ.
ಎಕ್ಸೆಲ್ ಬ್ಲೇಡ್ನಲ್ಲಿ ದೇಹ ತುಂಡರಿಸಿದ ಹಂತಕರು
ಕೊಲೆಯ ಬಳಿಕ ಕಾಲೋನಿಯಲ್ಲಿ ಜನ ಸಂಚಾರ ಹೆಚ್ಚಿರುತ್ತೆ ದೇಹವನ್ನ ಶಿಫ್ಟ್ ಮಾಡಲು ಸಾಧ್ಯವಿಲ್ಲ ಎಂದು ನಾಲ್ವರು ಎಕ್ಸೆಲ್ ಬ್ಲೇಡ್ ನಲ್ಲಿ ಗೀತಮ್ಮ ದೇಹವನ್ನ ತುಂಡರಿಸಿದ್ದಾರೆ. ಮೃತ ದೇಹವೇ ಸಿಗದೆ ಇದ್ರೆ ನಮ್ಮ ಮೇಲೆ ಅನುಮಾನ ಬರೋದಿಲ್ಲ ಎಂದು ಉಪಾಯ ಮಾಡಿ ಎಕ್ಸೆಲ್ ಬ್ಲೇಡ್ನಲ್ಲಿ ಕತ್ತರಿಸಿದ್ದಾರೆ.
ಹಂತಕರು ಗೀತಮ್ಮ ತಲೆ ದೇಹ ಕೈ ಕಾಲುಗಳನ್ನ ಕತ್ತರಿಸಿ ಚೀಲದಲ್ಲಿ ಹಾಕಿ ಬಿಸಾಡಿದ್ದಾರೆ. ಇನ್ನೂ ಎಡ ಗೈ ಮತ್ತು ಎರಡು ಕಾಲು ಎಲ್ಲಿ ಎಸೆದಿದ್ದಾರೆ ಅನ್ನೋದು ಪತ್ತೆಯಾಗಿಲ್ಲ.
ಹೆಣದ ಮುಂದೆಯೇ ಭೂರಿ ಭೋಜನ
ಹಂತಕರು ಹೆಣದ ಮುಂದೆಯೇ ರಾತ್ರಿ ನಾನ್ ವೆಜ್ ಮಾಡಿ ಊಟ ಮಾಡಿದ್ದಾರೆ. ಗೀತಮ್ಮ ಹೆಣವನ್ನ ಕತ್ತರಿಸುತ್ತಾ ಅಲ್ಲೇ ಊಟ ಮಾಡಿದ್ದಾರೆ.
ಕೊಲೆಯ ಆರೋಪಿ ಇಂದಲ್ ಕುಮಾರ್ ಪೊಲೀಸರಿಗೆ ಸಿಕ್ಕಿದ್ದು, ಆತನ ಬಾಯರೆ ನಿಜ ಸಂಗತಿ ಬಯಲಾಗಿದೆ. ಕೊಲೆಯ ಪ್ರಮುಖ ಆರೋಪಿಯಾ ಪಂಕಜ್ ಹಾಗೂ ಇನ್ನೂಳಿದವರಿಗಾಗಿ ಪೊಲೀಸರ ತೀವ್ರ ಶೋಧ ನಡೆಸುತ್ತಿದ್ದಾರೆ.
ಆರೋಪಿ ಇಂದಲ್ ಕುಮಾರ್ ಬಾಯ್ಬಿಟ್ಟ ವಿಚಾರ ಆಧರಿಸಿ ಚೆನೈ , ಹಾಗೂ ಒರಿಸ್ಸಾದಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದಕ್ಕಾಗಿ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಎರಡು ತಂಡ ರಚನೆ ಮಾಡಿ ಆರೋಪಿಗಳನ್ನು ಹುಡುಕಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ